ಸಾವಿರಾರು ಕೆಜಿ ತೂಕದೊಂದಿಗೆ ಆಗಸದಿಂದ ನೆಲಕ್ಕೆ ಇಳಿಯುತ್ತೆ ವಿಮಾನಗಳು. ಆದರೂ ಅದರ ಟೈಯರ್ ಗಳಿಗೆ ಏನು ಆಗುವುದಿಲ್ಲ ಏಕೆ?

587

ನಾವು ಗಮನಿಸಿದರೆ ಮೊದಲ ಸಮಯಕ್ಕಿಂತ ಇಂದು ಅನೇಕ ಬದಲಾವಣೆ ಆಗುತ್ತಿದೆ. ಪ್ರತಿಯೊಂದು ವಸ್ತುವಿನಲ್ಲೂ ಹೊಸ ಹೊಸ ಅನ್ವೇಷಣೆ ನಡೆಯುತ್ತಿದೆ. ಮೊದಲು ಜನರು ಒಂದು ಕಡೆ ಇಂದ ಇನ್ನೊಂದು ಕಡೆ ಹೋಗುವುದಾದರೆ ಬಹಳ ಸಮಯ ತಗೊಳುತಿದ್ದರು. ಇಂದು ಅದೇ ಸ್ಥಳಕ್ಕೆ ಹೋಗಬೇಕಾದರೆ ಬಹಳ ಬೇಗ ತಲುಪುತ್ತಾರೆ. ನೂರಾರು ಕಿಲೋ ಮೀಟರ್ ದೂರ ನಾವು ಗಂಟೆಗಳ ಮಾತ್ರದಲ್ಲಿ ತಲುಪಬಹದು ವಿಮಾನ ಪ್ರಯಾಣ ಮಾಡುವ ಮೂಲಕ. ಇದರಿಂದ ದಿನಗಟ್ಟಲೆ ನಡೆದುಕೊಂಡು ಹೋಗುವ ಸಮಯ ಉಳಿಯುತ್ತದೆ.

ವಿಮಾನ ಪ್ರಯಾಣ ಮಾಡುವಾಗ ನಮಗೆ ಮನಸಿನಲ್ಲಿ ಈ ಒಂದು ಯೋಚನೆ ಬಂದೆ ಬರುತ್ತದೆ, ಇಷ್ಟು ದೊಡ್ಡ ವಿಮಾನ ಬರವನ್ನು ಆ ಸಣ್ಣ ಟೈಯರ್ ಗಳು ಹೇಗೆ ಎತ್ತಿಕೊಳ್ಳುತ್ತದೆ? ಅಷ್ಟು ಭಾರ ಇದ್ದರು ಕೂಡ ಟೈಯರ್ ಗಳಿಗೆ ಏನು ಅಗುದಿಲ್ಲವೇ ಎನ್ನುವ ಸಂಶಯ, ಕುತೂಹಲ ನಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ. ನಾವು ಸಾಮಾನ್ಯವಾಗಿ ಕಾರು ಬಸ್ ಗಳ ಟೈಯರ್ ಪಂಕ್ಟುರೆ ಆಯಿತು ಅನ್ನುವ ಮಾತು ಕೇಳಿದ್ದೇವೆ ಆದರೆ ಅಷ್ಟು ದೊಡ್ಡ ಭಾರ ತಡೆದುಕೊಳ್ಳುವ ವಿಮಾನದ ಟೈಯರ್ ಪಂಕ್ಟುರೆ ಆಯಿತು ಅಂತ ಒಂದು ಸಾರಿನೂ ಕೇಳಲಿಲ್ಲ.

ಈ ವಿಮಾನಗಳ ಟೈಯರ್ ಗಳನ್ನೂ ಬಹಳ ಗಟ್ಟಿ ಮುಟ್ಟಿನಲ್ಲಿ ಮಾಡಿರುತ್ತಾರೆ. ಇದರ ಒಂದು ಟೈಯರ್ ಸುಮಾರು ೩೮ ಟನ್ ತೂಕವನ್ನು ನಿರ್ವಹಿಸಲು ತಯಾರು ಮಾಡಲಾಗುತ್ತದೆ. ಕೇವಲ ಒಂದು ಟೈಯರ್ ಒಮ್ಮೆ ಹಾಕುವ ಮೂಲಕ ೫೦೦ ಬಾರಿ ಲ್ಯಾಂಡಿಂಗ್ ಹಾಗು ಟೇಕ್ ಆಫ್ ಮಾಡಬಹುದು. ಈ ಟೈಯರ್ ಗಳಲ್ಲಿ ಗ್ರಿಪ್ ಅಳವಡಿಸಿರುವದರಿಂದ ಇದು ಅತ್ಯಂತ ಗಟ್ಟಿ ಆಗಿರುತ್ತದೆ. ೧ ಟೈಯರ್ ಅಲ್ಲಿ ಕಡಿಮೆ ಅಂದ್ರೆ ೭ ಬರಿ ಗ್ರಿಪ್ ಅಳವಡಿಸಲಾಗುತ್ತದೆ. ಇದರಿಂದ ಒಂದು ಟೈಯರ್ ೩೫ ರಿಂದ ೧೦೦ ಬಾರಿ ಲ್ಯಾಂಡಿಂಗ್ ಹಾಗು ಟೇಕ್ ಆಫ್ ಮಾಡಬಹುದು.ಇದರ ಉಪಯೋಗ ಮುಗಿದ ಮೇಲೆ ಕಸಕ್ಕೆ ಬಿಸಾಡಲಾಗುತ್ತದೆ.

ಈ ವಿಮಾನದ ಟೈಯರ್ ಗಳಲ್ಲಿ ಟ್ರಕ್ ನ ಟೈಯರ್ ಗಿಂತ ೨ ಪಟ್ಟು ಜಾಸ್ತಿ ಗಾಳಿ ತುಂಬಿಸಲಾಗುತ್ತದೆ. ಅದೇ ಕಾರುಗಳ ಟೈಯರ್ ಗೆ ಹೋಲಿಕೆ ಮಾಡಿದರೆ ೬ ಪಟ್ಟು ಅಂದರೆ ೨೦೦ psi ಗಾಳಿ ತುಂಬಿಸಲಾಗುತ್ತದೆ. ಈ ವಿಮಾನ ಟೈಯರ್ ನಲ್ಲಿ ನಯ್ಟ್ರೋಜೆನ್ ಗ್ಯಾಸ್ ಇರುತ್ತದೆ. ಇದರಿಂದ ಟೈಯರ್ ಅಲ್ಲಿ ತಾಪಮಾನ ಹಾಗು ಪ್ರೆಷರ್ ಕಡಿಮೆ ಇರುತ್ತದೆ. ಈ ಟೈಯರ್ ಅಲ್ಲಿ ಗ್ರೋವ್ ಡಿಸೈನ್ ಮಾಡಿರುತ್ತಾರೆ. ಇದರಿಂದ ರನ್ ವೆ ಅಲ್ಲಿ ಯಾವುದೇ ತೊಂದರೆ ಇಲ್ಲದೆ ಚಲಿಸುತ್ತದೆ. ಈ ಟೈಯರ್ ಅಲ್ಲಿ ಅರಾಮಿಡ್ ಫ್ಯಾಬ್ರಿಕ್ಸ್, ನಾಯ್ಲ್ಯಾನ್, ಸಿಂಥೆಟಿಕ್ ರಬ್ಬರ್ ಕಾಂಪೌಂಡ್ ನಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ಉಕ್ಕು ಮತ್ತು ಅಲ್ಯೂಮಿನಿಯಂ ಇಂದ ಬಲಪಡಿಸಲಾಗಿದೆ.

Leave A Reply

Your email address will not be published.