ಸಿಂಪಲ್ಲಾಗಿ ವ್ಯಾಪಾರ ಶುರು ಮಾಡಿ ಇಂದು ಯಶಸ್ಸಿನ ಶಿಖರಕ್ಕೇರಿದ್ದರೆ ಈ ಗೆಳೆಯರು. ಅವರು ಉದ್ಯಮಕ್ಕೆ ತೆಗೆದುಕೊಂಡ ವಸ್ತು ಏನು ಗೊತ್ತೇ?
ಮನಸಿದ್ದರೆ ಮಾರ್ಗ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತೇ ಇದೆ. ಆದರೆ ಜೀವನದಲ್ಲಿ ನಾವು ಇದನ್ನು ಅಳವಡಿಸಿ ಕೊಳ್ಳುವಾಗ ಬರಿ ಮನಸ್ಸು ಮಾಡಿದರೆ ಸಾಲುವುದಿಲ್ಲ ಬದಲಾಗಿ ಅಲ್ಲಿಗೆ ತಲುಪಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಬೇಕು. ಇಲ್ಲಿ ನಾವು ಇಂದು ತಿಳಿಯಲು ಹೊರಟ ಈ ವಿಚಾರ ಹಾಗೆ ಇವರು ತಮ್ಮ ಕೆಲಸವನ್ನು ಬಿಟ್ಟು ತಮ್ಮ ಈ ಒಂದು ಯೋಜನೆಯಂತೆ ಆರಂಭಿಸಿದ ಈ ಉದ್ಯಮ ಈಗ ದೇಶದಾದ್ಯಂತ ಹಬ್ಬಿದೆ. ಅಷ್ಟಲ್ಲದೆ ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿದೆ. ಅಂದಹಾಗೆ ಇವರೇನು ದೊಡ್ಡ 5 ಸ್ಟಾರ್ ಹೋಟೆಲ್ ತೆರೆದಿಲ್ಲ ಬದಲಾಗಿ ನಾವು ದಿನನಿತ್ಯ ತಿನ್ನಲು ಇಷ್ಟ ಪಡುವ ತಿಂಡಿಯೊಂದನ್ನು ಮಾರಲು ಶುರು ಮಾಡಿ ಈ ಹಂತಕ್ಕೆ ಬಂದು ತಲುಪಿದ್ದಾರೆ.
ಅಮಿತ್ ನನ್ವಾನಿ ಮತ್ತು ದೀಕ್ಷಾ ಪಾಂಡೆ ಆ ಇಬ್ಬರು . ಹೌದು ಇವರೇ ನೋಡಿ ಆ ಉದ್ಯಮ ಆರಂಭಿಸಿದ ಯುವ ಉದ್ಯಮಿಗಳು. ಆರಂಭದಲ್ಲಿ ಒಂದು ಸಣ್ಣ ಅಂಗಡಿಯಿಂದ ಆರಂಭಿಸಿದ ಈ ಉದ್ಯಮ ಇದೀಗ ಬರೋಬ್ಬರಿ 17 ನಗರಗಳಲ್ಲಿ ತಮ್ಮ ಶಾಖೆ ಹೊಂದಿದೆ. ಮೂಲತಃ ಕರ್ನಾಟಕದ ಬೆಂಗಳೂರಿನಿಂದ ಈ ಉದ್ಯಮವನ್ನು ಆರಂಭಿಸಿದ್ದರು 2017ರಲ್ಲಿ. ಅದರ ಹೆಸರು “ಸಮೋಸ ಪಾರ್ಟಿ”. ಹೌದು ಸಮೋಸ ಪಾರ್ಟಿ ಎಂಬ ಹೆಸರಿನ ಈ ಹೋಟೆಲ್ ಮಾದರಿಯ ಉದ್ಯಮದಲ್ಲಿ ಸಮೋಸ ಫೇವರಿಟ್ ತಿಂಡಿ.
ಇಲ್ಲಿ ಎಲ್ಲಾ ತರಹದ ಸಮೊಸಗಳು ಸಿಗುತ್ತದೆ. ಇದನ್ನೇ ಮಾರಿ ಮಾರಿ ದೇಶದ ಇತರ 17 ನಗರಗಳಿಗೆ ತಮ್ಮ ಕಬಂದ ಬಾಹುವನ್ನು ಹಬ್ಬಿಸಿ ಇದೀಗ ಕೋಟಿಗಟ್ಟಲೆ ವಹಿವಾಟು ನಡೆಸುವ ಉದ್ಯಮವಾಗಿ ಬೆಳೆಸಿದ್ದಾರೆ. ಅದೇನೇ ಇರಲಿ ಇದು ಅವರ ಪರಿಶ್ರಮಕ್ಕೆ ಸಂದ ಜಯ. ಜೀವನದಲ್ಲಿ ಹಾಗೆ ಯಾವುದು ದೊಡ್ಡದು ಸಣ್ಣದು ಎಂದು ತಿಳಿಯಬೇಡಿ . ನಿಮಗೆ ಇಷ್ಟವಾದ ಕೆಲಸವನ್ನು ನಿಷ್ಠೆಯಿಂದ ಮಾಡಿ ನೀವು ಕಂಡಿತಾ ಯಶಸ್ಸು ಕಾಣುತ್ತೀರಿ.