ಸಿಮ್ ಕಾರ್ಡ್ ಒಂದು ಬದಿ ಕತ್ತರಿಸಿರುತ್ತಾರೆ ಯಾಕೆ? ಇದರ ಬಗೆಗಿನ ಅಚ್ಚರಿಯ ಮಾಹಿತಿ ಇಲ್ಲಿದೆ ನೋಡಿ.

452

ಕೆಲವೊಂದು ವಿಚಾರಗಳು ಎಷ್ಟು ಸಣ್ಣದು ಎಂದರೆ ಅದನ್ನು ಸಣ್ಣತನ ದಲ್ಲಿಯೆ ನಾವು ನೋಡುತ್ತೇವೆ. ಅದರ ಬಗೆಗೆ ಅಷ್ಟೊಂದು ಗಾಢವಾಗಿ ಯೋಚನೆ ಕೂಡ ಮಾಡುವುದಿಲ್ಲ. ಯಾಕೆ ಏನು ಎಂಬ ಪ್ರಶ್ನೆ ಕೂಡ ಮಾಡಿಕೊಳ್ಳುವುದಿಲ್ಲ. ಹೀಗೆಯೇ ಒಂದು ವಿಚಾರ ನೋಡುವುದಾದರೆ ಎಲ್ಲರೂ ಮೊಬೈಲ್ ಬಳಸುತ್ತಾರೆ. ಮೊಬೈಲ್ ಗೆ ಎಷ್ಟು ಒಗ್ಗಿ ಹೋಗಿದ್ದಾರೆ ಎಂದರೆ ಕೆಲವೊಮ್ಮೆ ಎರಡು ಮೊಬೈಲ್ ಬಳಸುವುದು ಉಂಟು. ಆದರೆ ಮೊಬೈಲ್ ಗೆ ಬಳಸುವ ಸಿಮ್ ಕಾರ್ಡ್ ಅನ್ನು ಯಾವತ್ತಾದರೂ ಸರಿಯಾಗಿ ಗಮನಿಸಿದ್ದೀರಾ?

ಅದರ ಒಂದು ಭಾಗದಲ್ಲಿ ಕಟ್ ಇರುತ್ತದೆ, ಅದನ್ನು ಯಾಕಾಗಿ ಮಾಡಿದ್ದಾರೆ ಅದರ ಉಪಯೋಗ ಏನು ಎಂದು ಗೊತ್ತಿದೆಯೇ ನಿಮಗೆ ? ಇಲ್ಲವಾದರೆ ಮುಂದಕ್ಕೆ ಓದಿರಿ. ಮೊಬೈಲ್ ಮೊತ್ತ ಮೊದಲಿಗೆ ಮಾರುಕಟ್ಟೆಗೆ ಬಂದಾಗ GSM ಆಯ್ಕೆಗಳು ಇದ್ದವು. ಮೊಬೈಲ್ ಗೆ ಮೊದಲ ಬಾರಿಗೆ ಸಿಮ್ ಬಳಸಲು ಆರಂಭ ಆಗಿದ್ದು ಈ ಮಾಡೆಲ್ಗಳು ಮಾರುಕಟ್ಟೆಗೆ ಬಂದಾಗ. ಹಾಗಾದರೆ ಈ ಸಿಮ್ ಹಾಕುವ ಮೊಬೈಲ್ ಗಳು ಮೊತ್ತ ಮೊದಲಿಗೆ ಮಾರುಕಟ್ಟೆಗೆ ಬಂದಾಗ ಸಿಮ್ ಗಳು ಆಯತಕಾರದಲ್ಲಿ ಇರುತ್ತಿದ್ದವು. ಇದನ್ನು.ಮೊಬೈಲ್ ಒಳಗೆ ಯಾವ ರೀತಿಯಲ್ಲಿ ಹಾಕಬೇಕು ಎಂದು ಹಲವಾರು ಗೊಂದಲಗಳು ಸೃಷ್ಟಿ ಆಗಿದ್ದವು.

ಹಾಗಾದರೆ ಜನಗಳ ಈ ಸಮಸ್ಯೆಯನ್ನು ದೂರ ಮಾಡಬೇಕು ಎಂಬ ನೆಲೆಗಟ್ಟಿನಲ್ಲಿ ಸಿಮ್ ಕಮಪ್ನಗ್ಲು ನಿರ್ಧರಿಸಿ , ಸಿಮ್ ನ ಒಂದು ಭಾಗವನ್ನು ಕಟ್ ಮಾಡಲಾಯಿತು. ಇದರಿಂದಾಗಿ ಸಿಮ್ ಅನ್ನು ಅನುಸರಿಸುವುದು ಸುಲಭ ಆಯಿತು. ಜನರು ಕೂಡ ಈ ಒಂದು ಹೊಸ ತಂತ್ರಜ್ಞಾನ ವನ್ನೂ ಅತೀ ವೇಗವಾಗಿ ಅನುಸರಿಸಿದರು.ಮತ್ತು ಬಳಕೆಗೂ ಇದು ಅನುಕೂಲ ಆಯಿತು. ಇದರಿಂದಾಗಿ ಜನಗಳು ಇದನ್ನು ಬಳಸಲು ಆರಂಭ ಮಾಡಿದರು. ಇದರಿಂದಾಗಿ ತಾಂತ್ರಿಕವಾಗಿ ಯಾವುದೇ ಲಾಭ ಇಲ್ಲ ಬದಲಾಗಿ ಈ ರೀತಿಯಾಗಿ ಉದ್ಭವಿಸಿದ ಸಮಸ್ಯೆಯನ್ನು ದೂರ ಮಾಡಲು ನೆರವಾಗುತ್ತದೆ.

Leave A Reply

Your email address will not be published.