ಸೆಪ್ಟೆಂಬರ್ ಅಲ್ಲಿ 1 ಕೋಟಿ ಚಂದಾದಾರರನ್ನು ಕಳೆದುಕೊಂಡಿದ್ದ ಜಿಯೋ ಗೆ ಅಕ್ಟೋಬರ್ ನಲ್ಲಿ ಬಂಪರ್ ಲಾಟರಿ. ಹೊಸದಾಗಿ ಸೇರಿದ ಚಂದಾದಾರರ ಸಂಖ್ಯೆ ಎಷ್ಟು ಗೊತ್ತೇ?
ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿ ಜಿಯೋ ಗೆ ಸೆಪ್ಟೆಂಬರ್ ಅಲ್ಲಿ ಏರ್ಟೆಲ್ ಹಾಗು ಐಡಿಯಾ ದೊಡ್ಡ ಶಾಕ್ ನೀಡಿತ್ತು. ಜಿಯೋ ಸಿಮ್ ಬಿಟ್ಟು ಏರ್ಟೆಲ್ ಗೆ ಚಂದಾದಾರರಾಗಿ ಸೇರಿದವರ ಸಂಖ್ಯೆ ಮಿಲಿಯನ್ ಗಟ್ಟಲೆ. ಅದಾದ ನಂತರ ಏರ್ಟೆಲ್ ತನ್ನ ಯೋಜನೆ ಬೆಲೆ ಏರಿಸಿ ಅದರ ಗ್ರಾಹಕರಿಗೆ ಶಾಕ್ ನೀಡಿತ್ತು. ಇದರ ಜೊತೆ ಸೋಲುವ ಹಂತ ತಲುಪಿದ ಐಡಿಯಾ ಕೂಡ ಬೆಲೆ ಜಾಸ್ತಿ ಮಾಡಿ ಗ್ರಾಹಕರು ಐಡಿಯಾ ಸಿಮ್ ಬಿಟ್ಟು ಬೇರೆ ಟೆಲಿಕಾಂ ಕಂಪನಿ ಚಂದಾದಾರರಾಗಲು ಪ್ರೇರಣೆ ನೀಡಿದಂತಿತ್ತು. ಇದೀಗ TRAI ಬಿಡುಗಡೆ ಮಾಡಿದ ಹೊಸ ಲಿಸ್ಟ್ ಅಲ್ಲಿ ಜಿಯೋ ಲಾಟರಿ ಪಡೆದಿದೆ.
ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಅಕ್ಟೋಬರ್ ತಿಂಗಳಲ್ಲಿ ಸುಮಾರು ೧೭.೬ ಲಕ್ಷ ಸೆಳೆದುಕೊಂಡಿದೆ. ೧೭.೬ ಮಿಲಿಯನ್ ಅಂದರೆ ಸುಮಾರು ೧ ಕೋಟಿ ೭೬ ಲಕ್ಷ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ. ಭಾರ್ತಿ ಏರ್ಟೆಲ್ ಹಾಗು ಐಡಿಯಾ ತಲಾ ೪.೮೯ ಲಕ್ಷ ಹಾಗು ೯.೬೪ ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಈ ಹಿಂದೆ ಏರ್ಟೆಲ್ ಸುಮಾರು ೨.೭೪ ಲಕ್ಷ ಚಂದಾದಾರರನ್ನು ಸೇರಿಸಿಕೊಂಡಿತ್ತು. ಆದರೆ ಅಕ್ಟೋಬರ್ ಅಲ್ಲಿ ಅದರ ಎರಡರಷ್ಟು ಜನರು ಏರ್ಟೆಲ್ ಬಿಟ್ಟು ಹೊರ ನಡೆದಿದ್ದಾರೆ. ಇದೆ ರೀತಿ ವೊಡಾಫೋನ್ ಇದೆ ಸೆಪ್ಟೆಂಬರ್ ಅಲ್ಲಿ ೧೦.೭೭ ಲಕ್ಷ ಗ್ರಾಹಕರನ್ನು ಕಳೆದುಕೊಂಡರೆ ಅಕ್ಟೋಬರ್ ಅಲ್ಲಿ ೯.೬೪ ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.
ಇನ್ನು ಟಾಪ್ ೫ ವಯರ್ಲೆಸ್ ಬ್ರಾಂಡ್ ೩೧ ಅಕ್ಟೋಬರ್ ೨೦೨೧ ರಲ್ಲಿ ರಿಲಯನ್ಸ್ ಜಿಯೋ ಬಳಿ ಒಟ್ಟು ೪೨೬ ಮಿಲಿಯನ್ ಚಂದಾದಾರರಿದ್ದಾರೆ. ಭಾರ್ತಿ ಏರ್ಟೆಲ್ ಬಳಿ ಒಟ್ಟು ೨೦೪ ಮಿಲಿಯನ್ ಚಂದಾದಾರರಿದ್ದಾರೆ, ವೊಡಾಫೋನ್ ಐಡಿಯಾ ಬಳಿ ೧೨೨ ಮಿಲಿಯನ್ ಚಂದಾದಾರರು ಇದ್ದರೆ ಸರಕಾರಿ ಸ್ವಾಮ್ಯದ BSNL ಬಳಿ ಒಟ್ಟು ೧೦೯ ಮಿಲಿಯನ್ ಗ್ರಾಹಕರು ಇದ್ದಾರೆ. ಇನ್ನು ಕೊನೆಯದಾಗಿ ಐದನೇ ಸ್ಥಾನದಲ್ಲಿ ಟಿಕೋನಾ ಇಂಫಿನೆಟ್ ಒಟ್ಟು ೩ ಲಕ್ಷ ಗ್ರಾಹಕರೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.