ಸೈನಿಕ ಕೆಲಸ ಬಿಟ್ಟು ಸಾವಯವ ಕೃಷಿ ಮಾಡಿದ ಈ ಜವಾನ ಇದೀಗ ಗಳಿಸುತ್ತಿದ್ದಾರೆ ಬಂಪರ್ ಹಣ.

217

ಇಂದಿನ ಕಾಲದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ಕೃಷಿ ಮಾಡುವುದೇ ಹೆಚ್ಚು ಇದರಿಂದ ಮಣ್ಣಿನ ಪಲವತ್ತತೆ ಕಡಿಮೆ ಆಗುತ್ತದೆ ಎನ್ನುವುದು ಗೊತ್ತಿದ್ದೂ ಕೂಡ ಅದೇ ಕೃಷಿ ಪದ್ಧತಿ ಬಳಸುತ್ತಿದ್ದಾರೆ. ಆದ್ರೆ ಇಂದು ಅನೇಕರು ಸಾವಯವ ಕೃಷಿ ಪದ್ಧತಿ ಕೂಡ ಅನುಸರಿಸುತ್ತಿದ್ದಾರೆ. ಇದನ್ನು ಇಂದು ಸರಕಾರ ಕೂಡ ಪ್ರಚಾರದ ಜೊತೆ ಬೆಂಬಲ ನೀಡುತ್ತಿದೆ. ಇದರಿಂದ ಒಂದು ಭೂಮಿಯಲ್ಲಿ ದೀರ್ಘಕಾಲ ಕೃಷಿ ಮಾಡಿ ಉತ್ತಮ ಫಸಲು ಕೂಡ ಪಡೆಯಬಹುದು. ನಮ್ಮ ದೇಶದಲ್ಲಿ ಸಿಕ್ಕಿಂ ಅಲ್ಲಿ ಮೊದಲ ಬಾರಿಗೆ ಈ ಸಾವಯವ ಕೃಷಿ ಪ್ರಾರಂಭಿಸಲಾಯಿತು. ಇದೀಗ ದೇಶದೆಲ್ಲೆಡೆ ಪಸರಿಸುತ್ತಿದೆ.

ಸಾವಯವ ಕೃಷಿ ಎಂದರೆ ಏನು? ಇದೊಂದು ಕೃಷಿ ಪ್ರಕ್ರಿಯೆ, ಹಸಿರೆಲೆ ಗೊಬ್ಬರ, ಹಸುಗಳ ಗೊಬ್ಬರ ಬಳಸಿ ಕೃಷಿ ಮಾಡಲಾಗುತ್ತದೆ. ಹಾಗೇನೇ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುವುದಿಲ್ಲ, ಅಥವಾ ಅತ್ಯಂತ ಸ್ವಲ್ಪ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದರಿಂದ ಬೆಳೆ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಹಾಗೇನೇ ಮಣ್ಣಿನ ಫಲವತ್ತತೆ ಕೂಡ ಹಾಳಾಗುವುದಿಲ್ಲ. ಇದರಿಂದ ದೀರ್ಘ ಕಾಲದ ಕೃಷಿ ಮಾಡಬಹುದು. ಅದೇ ರೀತಿ ಉತ್ತಮ ಫಲವತ್ತತೆ ಪಡೆಯಬಹುದು.

ಇನ್ನು ಕೃಷಿ ಇಂದ ಜೀವನ ಸಾಗಿಸಲು ಸಾಧ್ಯವಿಲ್ಲಎಂದು ಹೇಳುವ ಅನೇಕರು ನಮ್ಮ ನಡುವೆ ಇದ್ದಾರೆ. ಅಂತಾದರೆ ನಡುವೆ ಒಬ್ಬ ಜವಾನ ತನ್ನ ಕೆಲಸ ಬಿಟ್ಟು ಇದೀಗ ಕೃಷಿ ಮಾಡಲು ಅದು ಕೂಡ ಸಾವಯವ ಕೃಷಿ ಮಾಡಲು ಪ್ರಾರಂಭಿಸಿದ್ದಾರೆ. ೨೦೧೩ ರಲ್ಲಿ ಕೃಷಿ ಮೇಲಿನ ಆಸಕ್ತಿ ಇಂದ ಕೆಲಸ ಬಿಟ್ಟು ರೈತನಾಗಿದ್ದಾರೆ. ತಮ್ಮ ಪತ್ನಿಯನ್ನು ಅಗಲಿದ್ದಾರೆ, ತಮ್ಮ ಜೀವನ ಸಾವಯವ ಕೃಷಿ ಮಾಡುವ ಮೂಲಕ ಸಾಗಿಸಬೇಕೆಂದು ನಿರ್ದರಿಸಿದ್ದರಂತೆ. ಉತ್ತರ ಪ್ರದೇಶದ ಲಕ್ನೋದವರಾಗಿದ್ದು ಪ್ರಾರಂಭದಲ್ಲಿ ಇವರು ಬಾಳೆ ಎಲೆ ಮತ್ತು ಹೂವುಗಳನ್ನು ಬೆಳೆಯುತ್ತಿದ್ದರು.

ಈ ಕೃಷಿ ಇಂದ ಉತ್ತಮ ಪಸಲು ಬಂದ ಕಾರಣ ನಂತರದಲ್ಲಿ ಕೃಷಿಯನ್ನು ಹೆಚ್ಚಿಸುತ್ತ ಹಸಿರು ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದರು. ಇವರ ಶ್ರಮ ಫಲ ನೀಡಲು ಪ್ರಾರಂಭಿಸಿತು. ಇದನ್ನೇ ಮುಂದುವರೆಸಿದರು. ಇವರು ಈ ಸಾವಯವ ಕೃಷಿಯಲ್ಲಿ ಉತ್ತಮ ಹಣ ಕೂಡ ಸಂಪಾದನೆ ಮಾಡಿದ್ದಾರಂತೆ. ಇದೀಗ ಇತರರನ್ನು ಸಾವಯವ ಕೃಷಿ ಮಾಡಲು ಪ್ರೇರೇಪಿಸುತ್ತಿದ್ದಾರಂತೆ. ಅಲ್ಲದೆ ಇದಕ್ಕಾಗಿ ತರಗತಿ ಕೂಡ ನೀಡುತ್ತಿದ್ದಾರಂತೆ. ಅವರ ಈ ಸೇವೆಗೆ ಅವರನ್ನ ಹಲವು ಸಭೆಗಳಿಗೆ ಕರೆದು ಸನ್ಮಾನ ಮಾಡಲಾಗಿದೆ ಅಂತೇ. ಇಂದು ಅವರ ಗೌರವ ಈ ಕೃಷಿ ಇಂದ ಹೆಚ್ಚಾಗಿದೆ ಅಂತೇ.

Leave A Reply

Your email address will not be published.