ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದ ಹಿಂದೆ ಇದೇ ಒಂದು ಮನಕಲಕುವ ಕಥೆ. ಫೋಟೋಗ್ರಾಫರ್ ಹೇಳಿದ್ದೇನು?
ಜೀವನದಲ್ಲಿ ಸದಾ ಮತ್ತೊಬ್ಬರ ಒಳಿತಿಗಾಗಿ ಬದುಕು. ಮತ್ತೊಬ್ಬರನ್ನು ನೋಯಿಸಿ ಎಂದಿಗೂ ಜೀವನ ಮಾಡಬೇಡ. ಆದಷ್ಟು ಒಳ್ಳೆಯ ಕೆಲಸ ಮಾಡು ಆ ಒಳ್ಳೆತನ ನಿನ್ನನ್ನು ಕಾಪಾಡುತ್ತದೆ ಎಂದು ಹೇಳುವ ಮಾತುಗಳು ಕೇಳಿದ್ದೀರಿ. ಆದರೆ ಇಂದು ಯಾಕೆ ಈ ಮಾತು ಎಂದು ಯೋಚನೆ ಮಾಡುತ್ತಿದ್ದರೆ ಖಂಡಿತಾ ಈ ಮಾತಿಗೂ ಈ ಕಥೆಗೂ ಸಂಬಂಧ ಇದೆ. ಈ ಒಂದು ಫೋಟೋ ಕಳೆದ ಕೆಲ ದಿನಗಳ ಹಿಂದಿನಿಂದ ಸಖತ್ ವೈರಲ್ ಆಗುತ್ತಿದೆ. ಎಲ್ಲರೂ ನೋಡಿ ಅಬ್ಬಾ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆ. ಹೌದು ಏನಿದು ಬನ್ನಿ ತಿಳಿಯೋಣ.
ಕೇರಳ ಮೂಲದ ವ್ಯಕ್ತಿ , ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಆದರೆ ಇಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದರೂ ತಪ್ಪಾಗಲಿಕ್ಕಿಲ್ಲ. ಹೌದು ಅಷ್ಟರ ಮಟ್ಟಿಗೆ ಅವರ ಫೋಟೋಸ್ ವೈರಲ್ ಆಗಿದೆ. ಇವರ ಹೆಸರು ಮಮ್ಮಿಕಾ ಕೆರಾಲ್ ಮೂಲದ 60ರ ಹರೆಯದ ವೃದ್ದ. ಹಾಗೋ ಹೀಗೋ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮನುಷ್ಯ. ಆದರೆ ಒಂದೇ ರಾತ್ರಿಯಲ್ಲಿ ಇಡೀ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಇದಕ್ಕೆ ಕಾರಣ ಫೋಟೋ ಗ್ರಾಫರ್.
ಹೌದು ಅವರ ಹೆಸರು ಶಾರುಕ್ ವಾಯಲಿಲ್ ಶೇಕ್ ಇವರು ಕೂಡ ಕೇರಳ ಮೂಲದ ವ್ಯಕ್ತಿ. ಇಲ್ಲಿ ವಿಚಿತ್ರ ಎನಿಸಿದರು ಒಂದು ವಿಚಾರ ಎಂದರೆ ಮಮ್ಮೀಕಾ ಮತ್ತು ಶರೀಕ್ ಅಕ್ಕ ಪಕ್ಕದ ಮನೆಯವರು. ಶರಿಕ್ ಅವರು ಹೇಳುವ ಪ್ರಕಾರ ಅವರು ನನ್ನ ನೆರೆ ಮನೆಯವರು. ನಾನು ಬಾಲ್ಯದಿಂದ ಅವರನ್ನು ನೋಡುತ್ತಾ ಬೆಳೆದಿದ್ದೇನೆ. ನನಗೆ ಅವರು ಕೇವಲ ಪಕ್ಕದ ಮನೆಯವರೆಲ್ಲ ಒಳ್ಳೆಯ ಗೆಳೆಯ ಕೂಡ ಹೌದು. ನಾನು 9 ವರ್ಷದ ಹುಡುಗ ಆಗ ನಾನು ಈಜಲು ಕೆರೆಗೆ ಹೋಗಿದ್ದಾಗ ಮುಳುಗಿದ್ದೆ, ಅಂದೆ ನಾನು ಹೋಗಬೇಕಾಗಿತ್ತು ಆದರೆ ಅಂದು ನನ್ನ ಕಾಪಡಿದವರು ಇದೆ ಮಮ್ಮಿಕಾ, ಆಗಿನಿಂದ ಶುರುವಾದ ನಮ್ಮ ಗೆಳೆತನ ಈಗಿನ ವರೆಗೂ ಇದೆ. ಇಂದು ನಾನು ಅವರನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡು ಫೋಟೋ ಶೂಟ್ ಮಾಡಲು ನಿರ್ಧರಿಸಿದ್ದೆ, ಆದರೆ ಅದು ಇಷ್ಟೊಂದು ವೈರಲ್ ಆಗುತ್ತದೆ ಎಂದು ಅಂದು ಕೊಂಡಿರಲಿಲ್ಲ ಎನ್ನುತ್ತಾರೆ. ಅದೇನೇ ಇರಲಿ ಅಂದು ಮಮ್ಮಿಕಾ ಅವರು ಮಾಡಿದ ಒಳ್ಳೆಯ ಕೆಲಸ ಇಂದು ಅವರು ಇಷ್ಟೊಂದು ಫೇಮಸ್ ಆಗಲು ಕಾರಣ ಎಂದರು ತಪ್ಪಾಗಲಿಕ್ಕಿಲ್ಲ.