ಸ್ಮಾರ್ಟ್ ಜನಗಳಿರುವ ದಕ್ಷಿಣ ಕನ್ನಡ ಜಿಲ್ಲೆಯ ಸ್ಮಾರ್ಟ್ ಸಿಟಿ ಯೋಜನೆ ಏಕೆ ಸ್ಮಾರ್ಟ್ ಆಗಿ ನಡೆಯುತ್ತಿಲ್ಲ?

511

ಸ್ಮಾರ್ಟ್ ಸಿಟಿ ಯೋಜನೆಗಳು ನಮ್ಮ ಭಾರತದ ಹೆಮ್ಮೆಯ ಪ್ರಧಾನಿ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದು. ದೇಶದ ಆಯ್ದ ಕೆಲ ಜಿಲ್ಲೆಗಳನ್ನು ಆರಿಸಿ ಈ ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ. ಆದರೆ ಈ ಯೋಜನೆಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದೆ ಎಂಬ ಪ್ರಶ್ನೆಗಳು ಈಗ ಉದ್ಭವ ಆಗಿದೆ. ಆದರೆ ಈ ಒಂದು ಪ್ರಶ್ನೆ ಏಳಲು ಕಾರಣ ಯೋಜನೆಯ ಅನುಷ್ಠಾನ ಮತ್ತು ಕೆಲಸದ ವೇಗ.

ಈ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಆದ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಒಂದು. ಅದು ನಮ್ಮೆಲ್ಲರ ಹೆಮ್ಮೆ ಕೂಡ ಹೌದು. ದಕ್ಷಿಣ ಕನ್ನಡ ಜಿಲ್ಲೆಯನ್ನು ಬುದ್ದಿವಂತರ ಜಿಲ್ಲೆ ಎಂದೇ ಕರೆಯುತ್ತಾರೆ. ಹೀಗಿರುವಾಗ ಇಲ್ಲಿನ ಯೋಜನೆಗಳು ಕಾರ್ಯ ರೂಪಕ್ಕೆ ಬರಲು ಇಷ್ಟೊಂದು ಕಾಲಾವಕಾಶ ಯಾಕೆ ತೆಗೆದುಕೊಳ್ಳುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಮಂಗಳೂರು ಸಿಟಿ ಒಳಗೆ ಹಲವಾರು ಕಮರ್ಷಿಯಲ್ ಸ್ಟ್ರೀಟ್ ಗಳಿವೆ. ಅಂತಹ ಒಂದು ಸ್ಟ್ರೀಟ್ ಗಳಲ್ಲಿ ಕೆ ಎಸ್ ರಾವ್ ರೋಡ್ ಕೂಡ ಒಂದು. ಅತೀ ಹೆಚ್ಚು ಜನ ಸಂದಣಿ ಸೇರುವ ಜಾಗ ಇದು. ಮಂಗಳೂರು ನಗರದ ಕೇಂದ್ರ ಭಾಗ ಎಂದರೂ ತಪ್ಪಾಗದು. ಸಿಟಿ ಸೆಂಟರ್ ಮಾಲ್ ಇದ್ದು ಹಲವಾರು ಜನ ಇಲ್ಲಿ ದಿನ ನಿತ್ಯ ಸಂಚರಿಸುತ್ತಾರೆ, ಅದೆಷ್ಟೋ ವಾಹನಗಳು ಇಲ್ಲಿ ಸಂಚರಿಸುತ್ತದೆ.

ಆದರೆ ಈಗ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಅಗೆದು ಹಾಕಿದ ರಸ್ತೆಗಳು ಹಾಗೆ ಇದ್ದು ಒಬ್ಬರೋ ಇಬ್ಬರೋ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದು ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಇದು ಜನಗಳಿಗೆ ಅತೀವ ತೊಂದರೆ ಉಂಟು ಮಾಡುತ್ತಿದ್ದು. ಟ್ರಾಫಿಕ್ ಜಾಮ್ ಆಗುತ್ತಿದ್ದು ,ಜನರ ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ಅಗತ್ಯ ಕ್ರಮ ತೆಗೆದುಕೊಂಡು ಕಾಮಗಾರಿ ವೇಗ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರ ಮನವಿ ಮಾಡುತ್ತಿದ್ದಾರೆ.

Leave A Reply

Your email address will not be published.