ಹಕ್ಕಿಗಳಿಗೆ ಗೂಡು ಕಟ್ಟಿ ಒಂದು ದೊಡ್ಡ ಬರ್ಡ್ ಹೌಸ್ ಆನ್ ನಿರ್ಮಿಸಿದ್ದಾರೆ ಈ ರೈತರು. ಎಲ್ಲಿದೆ ಇದು ಇದು ಮಾಡಲು ತಗುಲಿದ ವೆಚ್ಚ ಎಷ್ಟು?

1,050

ಇತ್ತೀಚಿನ ದಿನಗಳಲ್ಲಿ ಆಧುನೀಕರಣದ ಹೆಸರಿನಲ್ಲಿ ಎಲ್ಲಾ ಕಾದು ಮರ ಗಿಡಗಳನ್ನು ನಾಶ ಮಾಡುತ್ತಾ ಕಟ್ಟಡ ದ ಮೇಲೆ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಮನುಷ್ಯರು. ಆದರೆ ಅದೇ ಕಾಡು ಮರ ಗಿಡಗಳನ್ನು ನಂಬಿಕೊಂಡು ಬದುಕುವ ಜೀವಿಗಳ ಬಗೆಗೆ ಯೋಚನೆ ಕೂಡ ಮಾಡಲಿಲ್ಲ ಎನ್ನುವುದು ಬಹಳ ವಿಪರ್ಯಾಸದ ಸಂಗತಿ. ಅದಕ್ಕೆ ಹೇಳುವುದು ಮನುಷ್ಯರಿಗೆ ಸ್ವಾರ್ಥ ಹೆಚ್ಚು ಎಂದು. ತನ್ನ ಸ್ವಾರ್ಥಕ್ಕಾಗಿ ಮುಖ ಪ್ರಾಣಿಗಳ ಸಂತತಿಯನ್ನು ಅಳಿವಿನ ಅಂಚಿಗೆ ಸಿಲುಕಿಸಿದ್ದು ಇದೆ ಮನುಷ್ಯರು. ಹಾಗಾದರೆ ಇಲ್ಲಿ ಈ ಮುಖ ಪ್ರಾಣಿಗಳ ರೋಧನೆ ಹಾಗಾದರೆ ಯಾರಿಗೆ ಅರ್ಥವಾಗುತ್ತದೆ ? ಪ್ರಕೃತಿಯ ಮಡಿಲಲ್ಲಿ ಪ್ರಕೃತಿ ದತ್ತ ಸಂಪತ್ತನ್ನು ಬಳಸಿಕೊಂಡು ಅದನ್ನು ಉಳಿಸುವ ಕಾರ್ಯ ಮಾಡುವ ಜನರಿದ್ದಾರೆ ಅದು ರೈತರು ಮಾತ್ರ. ಅವರಿಗೆ ಮಾತ್ರ ಗೊತ್ತು ಇದರ ಬೆಲೆ.

ಹಾಗಾಗಿ ಇಲ್ಲೊಂದು ಮಾದರಿ ರೈತರ ಗುಂಪು ಅಂತಹುದೇ ಒಂದು ಉಲ್ಲೆಯ ಕೆಲಸ ಮಾಡಿದೆ ಬನ್ನಿ ತಿಳಿಯೋಣ ಇದರ ಬಗ್ಗೆ. ಇವರ ಹೆಸರು ಭಗವಾನ್ ಜಿ ಭಾಯಿ , ಗುಜರಾತ್ ಮೂಲದ ರೈತ ಇವರು. ಇವರು ಇವರ ಸಹ ರೈತರ ಜೊತೆ ಸೇರಿ ಮನುಷ್ಯನು ಸ್ವಾರ್ಥಕ್ಕಾಗಿ ಮರಗಿಡ ನಾಶ ಮಾಡುತ್ತಾ ಇದ್ದಾನೆ ಈ ಹಕ್ಕಿಗಳ ಗತಿ ಏನು ಎಂದು ಅರಿತು ತಮ್ಮ ಹಳ್ಳಿಯಲ್ಲಿ 2500 ಮಣ್ಣಿನ ಮಡಕೆ ತಯಾರಿಸಿ ಅದರಿಂದ ದೊಡ್ಡದಾದ ಬರ್ಡ್ ಹೌಸ್ ಒಂದನ್ನು ಮಾಡಿದ್ದಾರೆ. ನೋಡಲು ಶಿವಲಿಂಗ ಆಕಾರದಲ್ಲಿ ಇರುವ ಈ ನಿರ್ಮಾಣ ಅದೆಷ್ಟೋ ಹಕ್ಕಿಗಳಿಗೆ ಆದರೆ ಕಲ್ಪಿಸಿದೆ. ಇವರು 100 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾರೆ.

ತಮ್ಮದೇ ಜಾಗದಲ್ಲಿ 20 ಲಕ್ಷ ರೂಪಾಯಿ ಖರ್ಚು ಮಾಡಿ ಇದನ್ನು ಮಾಡಿದ್ದಾರೆ. ಇದು 140 ಉದ್ದ 70 ಫೀಟ್ ಅಗಲ ಮತ್ತು 40ಫೀಟ್ ಎತ್ತರ ಹೊಂದಿದೆ. ಪ್ರತಿ ದಿನ ಇವರು 50 ರಿಂದ 60ಕಿಲೋ ಧಾನ್ಯಗಳನ್ನು ಈ ಹಕ್ಕಿಗಳಿಗೆ ಹಾಕುತ್ತಾರೆ. ಅದೇನೇ ಆಗಲಿ ಸ್ವಾರ್ಥ ತುಂಬಿದ ಜಗತ್ತಿನಲ್ಲಿ ಇಂತಹ ಮಾದರಿ ವ್ಯಕ್ತಿ ಇರುವುದರಿಂದಲೇ ಇನ್ನು ಈ ಭೂಮಿ ಬದುಕುಳಿದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗೆಯೇ ಹೆಸರಿಗೆ ತಕ್ಕಂತೆ ಅವರು ಭಗವಾನ್ ಆಗಿ ಅದೆಷ್ಟೋ ಹಕ್ಕಿಗಳನ್ನು ಪೋಷಿಸುತ್ತಿದ್ದಾರೆ. ಇವರ ಈ ಮಹಾನ್ ಕಾರ್ಯ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸೋಣ.

Leave A Reply

Your email address will not be published.