ಹಣ್ಣಿನ ವ್ಯಾಪಾರೀ ಮಗನ ಈ ಐಡಿಯಾ ದಿಂದ ವ್ಯಾಪಾರ ೩೦೦ ಕೋಟಿ ರೂಪಾಯಿ ವರೆಗೆ ವೃದ್ಧಿ. ಏನ್ ಐಡಿಯಾ ಅಂತೀರಾ?

355

ಬಡತನ ಎಂಬುದು ಸಾಧನೆ ಮಾಡದಿರಲು ಕಾರಣ ಅಲ್ಲ ಬದಲಾಗಿ ಒಂದು ನೆಪ ಅಷ್ಟೇ . ಜೀವನದಲ್ಲಿ ಏನಾದ್ರೂ ಮಾಡಬೇಕು ಎಂದು ಹಠ ಕಟ್ಟಿ ನಿಂತರೆ ಮಾಡಿಯೇ ತೀರಬೇಕು. ಅಂತಹ ಒಂದು ಮಾದರಿ ವ್ಯಕ್ತಿಯ ಕಥೆ ಇದು. ಬಡತನ ಇದ್ದರೂ ತಮ್ಮ ಕಸುಬಿನಿಂದಲೆ ಹೊಸ ಪ್ರಯೋಗ ಮಾಡಿ ಯಶಸ್ಸು ಕಂಡ ಕಥೆ ಇದು. ಇದನ್ನು ಶೇರ್ ಮಾಡಿ ಇನ್ನು ಹೆಚ್ಚಿನ ಜನರಿಗೆ ಮಾಹಿತಿ ತಲುಪಿಸಿ ಅವರಿಗೆ ಉಪಯೋಗವಾದರೂ ಆಗಬಹುದು. ಬನ್ನಿ ತಿಳಿಯೋಣ.

ಇವರ ಹೆಸರು ರಘುನಂದನ್ ಶ್ರೀನಿವಾಸ್ ಕಾಮತ್ ಮೂಲತಃ ಕರ್ನಾಟಕದ ಪುತ್ತುರಿನವರು. ತಂದೆ ಹಣ್ಣಿನ ಮತ್ತು ಕಟ್ಟಿಗೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ. ಇವರು 7 ಜನ ಮಕ್ಕಳು ಕುಟುಂಬದ ಹೊರೆ ಜಾಸ್ತಿ ಆದಾಗ ರಘುನಂದನ್ ಅವರು ಕೂಡ ಕೆಲಸ ಮಾಡಲು ನಿರ್ಧರಿಸಿ ಮುಂಬೈ ಗೆ ಹೋದರು . ಅಲ್ಲಿ ಆಗಾಗಾಗಲೆ ಅವರ ಅಣ್ಣಂದಿರು ಸಣ್ಣ ಡಾಬಾ ನಡೆಸುತ್ತಿದ್ದರು. ಇವರು ಅದರಲ್ಲೇ ಕೆಲಸ ಮುಂದುವರೆಸಿದರು ಅಲ್ಲಿ ಅವರಿಗೆ ಐಸ್ ಕ್ರೀಮ್ ಮಾರುವ ಅಂಗಡಿ ಕಂಡು ಕಂಡು ಏನಾದರೂ ಮಾಡಬೇಕು ಎಂದು ಆಲೋಚನೆ ಆಗಲೇ ಬಂದಿತ್ತು.

ಹೀಗೆ 1983 ರಲ್ಲೀ ಇವರ ಮದುವೆ ಆಯಿತು ಆ ಸಮಯದಲ್ಲಿ ಕಾಮತ್ ಅವರು ಸ್ವಲ್ಪ ಮಟ್ಟಿಗೆ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಹಂತಕ್ಕೆ ತಲುಪಿದ್ದರು. ಹೀಗೆ ಅವರ ಅಂದಿನ ನಿರ್ಧಾರದಿಂದ ಆರಂಭ ಗೊಂಡಿದ್ದು “natural icecream Mumbai”. ಹೌದು ಇದನ್ನು ದೇಶಾದ್ಯಂತ ಹಲವಾರು ಔಟ್ ಲೆಟ್ ಹೊಂದಿದೆ. ಅತ್ಯಂತ ಜನಪ್ರಿಯ ಕೂಡ ಹೌದು. ಇವರ ಐಸ್ ಕ್ರೀಮ್ ವಿಶೇಷತೆ ಎಂದರೆ ಇದು ಹಣ್ಣಿನಿಂದ ತಯಾರಿಸಿದ ಮತ್ತು ಯಾವುದೇ ರೀತಿಯ ಬೆರಕೆ ಮಾಡುವುದಿಲ್ಲ . ಬರೀ ಹಣ್ಣು ಹಾಲು ಸಕ್ಕರೆಯಿಂದ ಇದನ್ನು ತಯಾರಿಸಿ ಮಾರಲಾಗುತ್ತದೆ.

ಆರಂಭದಲ್ಲಿ 5 ಫ್ಲೇವರ್ ನಿಂಡ ಆರಂಭ ಗೊಂಡ ಈ ಸಂಸ್ಥೆ ಈಗ ಮಾರುಕಟ್ಟೆಯಲ್ಲಿ 20 ಫ್ಲೇವರ್ ವರೆಗೂ ಇದ್ದೂ, ಇಡೀ ಭಾರತದಾದ್ಯಂತ 135 ಔಟ್ ಲೆಟ್ ಇದ್ದು. ಇದರ ವಾರ್ಷಿಕ ವಹಿವಾಟು 300 ಕೋಟಿ ರೂಪಾಯಿ ವರೆಗೂ ಇದೆ. ಅದೇನೇ ಆಗಲಿ ತಾವು ಮಾಡುತ್ತಿದ್ದ ಹಣ್ಣಿನ ವ್ಯಾಪಾರದಿಂದ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಕಂಡರು. ನೀವು ಇದು ವರೆಗೂ ಇದನ್ನು ಟೇಸ್ಟ್ ಮಾಡಿಲ್ಲ ಎಂದಾದರೆ ಖಂಡಿತಾ ಒಮ್ಮೆ ಟೇಸ್ಟ್ ಮಾಡಿ. ಹೆಸರಿಗೆ ಮಾತ್ರ ನ್ಯಾಚುರಲ್ ಅಲ್ಲ ಟೇಸ್ಟ್ ಕೂಡ ನ್ಯಾಚುರಲ್ ಆಗೆ ಇದೆ.

Leave A Reply

Your email address will not be published.