ಹಣ, ಚಿನ್ನ ಮತ್ತು ಹೆಣ್ಣು ಕೊಡುವ ಮುನ್ನ ನೋಡಿ ಕೊಡಬೇಕು: 50 ಲಕ್ಷ, 1 ಕೆಜಿ ಹಣ ಕೊಟ್ಟು ವೈದ್ಯೆಯನ್ನು ಮದುವೆ ಮಾಡಿಕೊಟ್ಟರು ಈ ಭೂಪ ಏನು ಮಾಡಿದ್ದಾನೆ ಗೊತ್ತೇ??
ಮಗಳ ಮದುವೆ ಮಾಡುವ ಮೊದಲು ತಂದೆ ತಾಯಿಯರು ಹುಡುಗನ ಬಗ್ಗೆ ಸರಿಯಾಗಿ ವಿಚಾರಿಸಿ ತಿಳಿದುಕೊಳ್ಳಬೇಕು, ಈಗಿನ ಕಾಲದಲ್ಲಿ ಯಾರನ್ನೇ ಆದರೂ ನಂಬುವುದು ಬಹಳ ಕಷ್ಟವಾಗುತ್ತದೆ. ಯಾರು ಬೇಕಾದರು ಒಳ್ಳೆಯವರ ಹಾಗೆ ನಟಿಸಿ ಮೋಸ ಮಾಡಬಹುದು. ಇಂಥದ್ದೇ ಒಂದು ಘಟನೆ ಈಗ ಬಳ್ಳಾರಿಯಲ್ಲಿ. ಬಳ್ಳಾರಿ ಮೂಲದ ರಘುರಾಮ್ ಎನ್ನುವ ವ್ಯಕ್ತಿ ಹೈದರಾಬಾದ್ ನಲ್ಲಿ ಡಾಕ್ಟರ್ ಆಗಿರುವ ಮೌನಿಕಾ ಅವರ ಮನೆಯವರಿಗೆ ಸುಳ್ಳು ಹೇಳಿ ಮದುವೆಯಾಗಿ, ಪ್ರತಿದಿನ ಪತ್ನಿಗೆ ಹಣಕ್ಕಾಗಿ ಕಾಟ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ತನಗೆ ಆಸ್ಟ್ರೇಲಿಯಾದಲ್ಲಿ ಕೆಲಸ ಇದೆ ಎಂದು ಸುಳ್ಳು ಹೇಳಿದ ರಘುರಾಮ್ ರೆಡ್ಡಿ ಡಾ.ಮೌನಿಕಾ ಜೊತೆಗೆ 2019 ಮದುವೆಯಾಗಿದ್ದನು, ಮದುವೆ ಸಮಯದಲ್ಲಿ ಮೌನಿಕಾ ಮನೆಯವರು ₹50 ಲಕ್ಷ ರೂಪಾಯಿ ಹಣ ಹಾಗೂ 1 ಕೆಜಿ ಗೋಲ್ಡ್ ಅನ್ನು ವರದಕ್ಷಿಣೆಯಾಗಿ ನೀಡಿದ್ದರು. ಅಷ್ಟೆಲ್ಲಾ ಕೊಟ್ಟಿದ್ದರು ಸಹ, ರಘುರಾಮ್ ರೆಡ್ಡಿ ಹಣಕ್ಕಾಗಿ ಹೆಂಡತಿಗೆ ಪ್ರತಿದಿನ ಹಿಂಸೆ ನೀಡಿದ್ದಾನೆ. ಆತನಿಗೆ ಯಾವುದೇ ಕೆಲಸ ಇರಲಿಲ್ಲ, ಸುಳ್ಳು ಹೇಳಿ ಮದುವೆಯಾಗಿ, ಪ್ರತಿದಿನ ಡಾಕ್ಟರ್ ಗೆ ಚಿತ್ರಹಿಂಸೆ ನೀಡುತ್ತಿದ್ದ, ಇದನ್ನು ತಡೆಯಲಾಗದೆ ಮೌನಿಕಾ ಮನೆಬಿಟ್ಟು ಹೊರಬಂದಿದ್ದರು. ಆಗ ಸುಮ್ಮನಾಗದ ರಘುರಾಮ್ ಮೌನಿಕಾ ಅವರಿಗೆ ವಿಚ್ಛೇದನ ಕೊಡದೆ ಎರಡನೇ ಮದುವೆ ಆಗಿದ್ದಾನೆ.
ಈ ವಿಚಾರ ಗೊತ್ತಾದ ಬಳಿಕ ಮೌನಿಕಾ ಮತ್ತು ಆಕೆಯ ಮನೆಯವರ ಮೇಲೆ ರಕ್ತ ಬರುವ ಮಟ್ಟಿಗೆ ಹಲ್ಲೆ ಮಾಡಿದ್ದಾನೆ. ಇಷ್ಟೆಲ್ಲಾ ಆದ ನಂತರ ಮೌನಿಕಾ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ರಘುರಾಮ್ ರೆಡ್ಡಿ, ತಂದೆ ನಾಗಿ ರೆಡ್ಡಿ, ಸಹೋದರ ಹರೀಶ್ ಈ ಮೂವರನ್ನು ಪೊಲೀಸರು ಬಂಧಿಸಿದ್ದು, ಈ ಕುಟುಂಬದ ಏಳು ಜನರ ಮೇಲೆ ದೂರು ದಾಖಲಾಗಿದೆ. ಆದರೆ ಇನ್ನು ನಾಲ್ವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಘಟನೆಗಳು ನಡೆಯುತ್ತಲೆ ಇದೆ, ಹಾಗಾಗಿ ಹೆಣ್ಣು ಮಗು ಇರುವ ಕುಟುಂಬದವರು ಬಹಳ ಎಚ್ಚರಿಕೆಯಿಂದ ಮದುವೆ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು.