ಹಳೆ ಟ್ರಾಕ್ಟಾರ್ ನ ಜೀಪ್ ಮಾಡಿದ ವ್ಯಕ್ತಿ. ವ್ಯಕ್ತಿಯ ಟ್ಯಾಲೆಂಟ್ ಗೆ ಉಘೇ ಎಂದ ಆನಂದ್ ಮಹಿಂದ್ರಾ.
ಸಾಮಾಜಿಕ ಜಾಲತಾಣ ಅಂದರೇನೇ ಹಾಗೆ. ಒಂದಲ್ಲ ಒಂದು ಫೋಟೋ ಅಥವಾ ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚಿಗೆ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿ ಟ್ರ್ಯಾಕ್ಟರ್ ಅನ್ನು ಜೀಪ್ ಆಗಿ ಮಾರ್ಪಾಡು ಮಾಡಿ ಹೊಸ ರೂಪ ನೀಡಿದ್ದಾನೆ. ಇದು ವೈರಲ್ ಆಗುತ್ತಿದ್ದಂತೆಯೇ ಮಹಿಂದ್ರಾ & ಮಹಿಂದ್ರಾ ಚೇರ್ಮನ್ ಆನಂದ್ ಮಹಿಂದ್ರಾ ಕೂಡ ಇದರ ಬಗ್ಗೆ ಪ್ರಶಂಸೆ ಮಾಡದೇ ಇರಲು ಆಗಲಿಲ್ಲ. ಇದಕ್ಕೆ ಅವರು ಕೂಡ ತೆಗೆದುಕೊಂಡ ಮಾಧ್ಯಮ ಸಾಮಾಜಿಕ ಜಾಲತಾಣ.
ಮೈಯ ರಿಂಬಾಯಿ ( Maia Rymbai ) ಮೇಘಾಲಯದ ವ್ಯಕ್ತಿ ಟ್ರ್ಯಾಕ್ಟರ್ ಅನ್ನು ಜೀಪ್ ಆಗಿ ಪರಿವರ್ತಿಸಿದ್ದಾರೆ. ನೀವು ಫೋಟೋ ನೋಡಿದರೆ ಕೂಡ ಗೊತ್ತಾಗುತ್ತೆ, ಟ್ರ್ಯಾಕ್ಟರ್ ಪೂರ್ತಿ ಜೀಪ್ ನ ಲುಕ್ ಅಲ್ಲಿ ಕಾಣುತ್ತಿದೆ. ಈ ಮಾರ್ಪಾಡು ಬಹಳ ಜನರಿಗೆ ಒಂತರ ಸಂತಸ ತಂದಿದ್ದರೆ, ಇನ್ನು ಕೆಲವರು ಈ ಕೆಲಸಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಈ ಹೊಸ ಅನ್ವೇಷಣೆಗೆ ಜನರು ಕೂಡ ಹೊಸ ಹೆಸರು ನೀಡಿದ್ದಾರೆ. ಈ ದೇಶೀ ಅನ್ವೇಷಣೆಗೆ ಜೀಪ್ ಟ್ರಾಕ್ಟಾರ್ ಅನ್ನುವ ಹೆಸರು ಒಬ್ಬರು ಕೊಟ್ಟಿದ್ದಾರೆ.
ಇನ್ನು ಆನಂದ್ ಮಹಿಂದ್ರಾ ಟ್ವೀಟ್ ಮಾಡುತ್ತ strange looking beast ಎನ್ನುತ್ತಾ ಇದು ಡಿಸ್ನಿ ಕ್ಯಾರೆಕ್ಟಾರ್ ಅಲ್ಲಿ ಬರುವ ಒಂದು ಪ್ರೀತಿಯ ಪಾತ್ರದ ನೆನಪು ಬರುವಂತಿದೆ ಎನ್ನುತ್ತಾ ಟ್ವೀಟ್ ಮಾಡಿದ್ದಾರೆ. ಆನಂದ್ ಮಹಿಂದ್ರಾ ಇಂತಹ ಅನೇಕ ಅನ್ವೇಷಣೆ ಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಹಾಗೇನೇ ಅವರು ಈ ಸಾಮಾಜಿಕ ಜಾಲತಾಣವನ್ನು ಮಾಧ್ಯಮವಾಗಿ ಬಳಸುತ್ತಿರುತ್ತಾರೆ. ಈವರೆಗೂ ಇದಕ್ಕೆ ೪ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ ಹಾಗೇನೇ ಈ ವ್ಯಕ್ತಿ ಇಂದು ಎಲ್ಲರಿಗು ಪರಿಚಯವಾಗಿದ್ದಾನೆ. ನಮ್ಮ ದೇಶ ಎಷ್ಟು ಕೌಶಲ್ಯ ದಿಂದ ಕೂಡಿದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ.