ಹುಡುಗನ ಅದೊಂದು ವಿಚಾರಕ್ಕಾಗಿ ರಸ್ತೆಯಲ್ಲಿಯೇ ಬಡಿದಾಡಿಕೊಂಡ ಕಾಲೇಜಿನ 2 ಹುಡುಗಿಯರು. ಕೊನೆಗೂ ಹುಡುಗ ಬೇಸತ್ತು ಮಾಡಿದ್ದೇನು ಗೊತ್ತೇ??
ಬಾಯ್ ಫ್ರೆಂಡ್ ಗಾಗಿ ಇಬ್ಬರು ಹುಡುಗಿಯರು ಬಸ್ ನಿಲ್ದಾಣದಲ್ಲಿ ಕಿತ್ತಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪೃಠಾನ್ ಎಂಬ ಊರಿನಲ್ಲಿ ನಡೆದಿದೆ. ಕಾಲೇಜು ಹುಡುಗಿಯರಿಬ್ಬರ ನಡುವೆ ಬಾಯ್ ಫ್ರೆಂಡ್ ವಿಚಾರಕ್ಕೆ ಜಗಳ ನಡೆದಿದೆ. ಒಬ್ಬನೇ ಹುಡುಗನ ವಿಷಯಕ್ಕೆ ಇಬ್ಬರು ಹುಡುಗಿಯರು ಕಿತ್ತಾಡಿಕೊಂಡಿದ್ದಾರೆ. ಸಾರ್ವಜನಿಕರ ನಡುವೆಯೇ ಈ ರೀತಿ ಮಾಡಿಕೊಂಡಿದ್ದು, ಅಲ್ಲಿ ನೆರೆದಿದ್ದ ಜನರಿಗೆ ಕಿರಿ ಕಿರಿ ಉಂಟು ಮಾಡಿದೆ.
ಒಬ್ಬನೇ ಹುಡುಗನನ್ನು ಈ ಇಬ್ಬರು ಹುಡುಗಿಯರು ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಒಬ್ಬ ಹುಡುಗಿಯ ಜೊತೆಗೆ ಆ ಹುಡುಗ ಬಸ್ ಸ್ಟ್ಯಾಂಡ್ ಗೆ ಬಂದಿದ್ದು, ಆ ವಿಷಯ ಇನ್ನೊಬ್ಬ ಹುಡುಗಿಗೂ ಗೊತ್ತಾಗಿ, ಆಕೆ ಕೋಪ ಮಾಡಿಕೊಂಡು, ಬಸ್ ಸ್ಟ್ಯಾಂಡ್ ಗೆ ಬಂದಿದ್ದಾಳೆ. ಅಲ್ಲಿ ಹುಡುಗನ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಇಬ್ಬರು ಬಾಯ್ ಫ್ರೆಂಡ್ ವಿಚಾರಕ್ಕೆ ಮಾತಿಗೆ ಮಾತು ಬೆಳೆಸಿ ಜಗಳಕ್ಕೆ ನಿಂತಿದ್ದಾರೆ. ಇಬ್ಬರ ನಡುವಿನ ಜಗಳ ತಾರಕಕ್ಕೆ ಏರಿ, ಇಬ್ಬರು ಸುತ್ತ ಇರುವವರಿಗೆ ಇರಿಟೇಟ್ ಆಗುವ ಮಟ್ಟಕ್ಕೆ ಜಗಳ ಆಡಿದ್ದಾರೆ.
ಹುಡುಗಿಯರ ಜಗಳ ನೋಡಿ ಜೊತೆಗಿದ್ದ ಹುಡುಗ ಆ ಸ್ಥಳದಿಂದಲೇ ಪರಾರಿ ಆಗಿದ್ದಾನೆ. ಜಡೆ ಜಗಳ ನೋಡಲಾಗದೆ ಆ ಹುಡುಗ ಓಡಿ ಹೋಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಇನ್ನು ಅಲ್ಲೇ ಇದ್ದ ಪೊಲೀಸರು ಜಗಳ ಆಡುತ್ತಿದ್ದ ಹುಡುಗಿಯರನ್ನು ಕರೆದುಕೊಂಡು ಹೋಗಿದ್ದಾರೆ. ಒಬ್ಬ ಹುಡುಗನ ವಿಷಯಕ್ಕೆ ಈ ರೀತಿಯ ಜಗಳಗಳು ಹುಡುಗಿಯರ ನಡುವೆ ಬೀದಿಯಲ್ಲಿ ಜಗಳ ಆಗಿರುವ ಘಟನೆಗಳು ನಡೆದಿದೆ, ಆದರೆ ಬಸ್ ಸ್ಟ್ಯಾಂಡ್ ನಲ್ಲೂ ಜಗಳ ಆಗಿರುವುದು ನಿಜಕ್ಕೂ ವಿಚಿತ್ರವಾದ ಘಟನೆ ಆಗಿದೆ.