ಹೆಚ್ಚಾಗುತ್ತಿರುವ ಬಿಸಿಲಿನ ಬೇಗೆಗೆ ಯಾವೆಲ್ಲ ಜ್ಯೂಸ್ ಕುಡಿದರೆ ದೇಹವನ್ನು ತಂಪಾಗಿ ಇಡಬಹುದು?

512

ಇನ್ನು ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚಾಗುತ್ತಾ ಹೋಗುತ್ತದೆ. ಬೇಸಿಗೆ ಕಾಲ ಸನ್ನಿಹಿತ ಆಗುವ ಎಲ್ಲಾ ಲಕ್ಷಣಗಳು ವಾತಾವರಣದಲ್ಲಿ ಕಾಣುತ್ತಿದೆ . ಅಷ್ಟರ ಮಟ್ಟಿಗೆ ಸೂರ್ಯ ಸುಡುತ್ತಿದ್ದನೆ. ಇಂತಹ ಸಂದರ್ಭದಲ್ಲಿ ಒಟ್ಟಾರೆಯಾಗಿ ಆಹಾರ ಪದಾರ್ಥ ಸೇವನೆ ಆರೋಗ್ಯವನ್ನು ಹಾಳು ಮಾಡಬಹುದು. ಆದಷ್ಟು ದೇಹವನ್ನು ತಂಪಾಗಿ ಇರಿಸಬೇಕು. ಈ ಬಿಸಿಲಿನ ಬೇಗೆಗೆ ದೇಹ ಮತ್ತಷ್ಟು ಉಷ್ಣಾಂಶ ಹೆಚ್ಚಿದರೆ ಅದು ಅಡ್ಡ ಪರಿಣಾಮ ಬೀರುತ್ತದೆ . ಹಾಗಾದರೆ ಯಾವೆಲ್ಲ ಹಣ್ಣಿನ ಜ್ಯೂಸ್ ಕುಡಿದರೆ ದೇಹ ತಂಪಾಗಿ ಇರುತ್ತದೆ ಬನ್ನಿ ತಿಳಿಯೋಣ.

1 ಮನೆಯಲ್ಲಿ ದಿನಾಲೂ ನಾವು ಅಡುಗೆಗೆ ಬಳಸುವ ತೆಂಗಿನ ಕಾಯಿಯ ನೀರನ್ನು ಬಿಸಾಡುತ್ತೇವೆ. ಆದರೆ ಈ ಬೇಸಿಗೆ ಸಂದರ್ಭದಲ್ಲಿ ಇದನ್ನು ಕುಡಿದರೆ ಅದು ದೇಹವನ್ನು ತಣ್ಣನೆ ಇಡುತ್ತದೆ. 2 ಬಿಸಬಿಸಿ ಬಿಸಿಲಿನ ಬೇಗೆಗೆ ತಣ್ಣನೆಯ ಮಜ್ಜಿಗೆ ಹೊಟ್ಟೆಗೆ ಬಿದ್ದರೆ ತಂಪಾಗುತ್ತದೆ. ಮಜ್ಜಿಗೆ ದೇಹಕ್ಕೆ ಒಳ್ಳೆಯದು. ಬಿಸಿಲಿನ ಬೆಗೆಯನ್ನು ಬೇಗನೆ ನೀಗಿಸುತ್ತದೆ. 3 ಅಲೋವೆರಾ ಜ್ಯೂಸ್ ಕೂಡ ಅತೀ ಹೆಚ್ಚು ನೀರಿನ ಅಂಶ ಹೊಂದಿದ್ದು ದೇಹಕ್ಕೆ ಅತ್ಯುತ್ತಮ. 4.ಮಿಂಟ್ ಜ್ಯೂಸ್ ಕೂಡ ದೇಹದಲ್ಲಿ ಬಿಸಿಲಿನ ಬೇಗೆಯನ್ನು ಕಡಿಮೆ ಮಾಡುತ್ತದೆ.

5 ಕಲ್ಲಂಗಡಿ ಹಣ್ಣಿನ ಜ್ಯೂಸ್ ಕೂಡ ಅತೀ ಹೆಚ್ಚು ನೀರಿನ ಅಂಶ ಹೊಂದಿದ್ದು ದೇಹವನ್ನು ಡಿ ಹೈಡ್ರೇಟ್ ಆಗುವುದರಿಂದ ಕಾಪಾಡುತ್ತದೆ. 6 ಮುಳ್ಳು ಸೌತೆಕಾಯಿ ಕೂಡ ನೀರಿನ ಅಂಶ ಹೊಂದಿದ್ದು, ಯಾವುದೇ ಮಸಾಲೆಯನ್ನು ಬೇರೆಸದೆ ಹಾಗೆ ತಿಂದರೆ ಅತೀ ಉತ್ತಮ. 7 ಹಸಿ ಮೆಣಸು, ಇದು ನಿಮಗೆ ಅಚ್ಚರಿ ಎನಿಸಿದರೂ ಸತ್ಯ ಸಂಗತಿ ಇದು ಕೂಡ ಬಿಸಿಯಾದ ದೇಹವನ್ನು ತಣ್ಣಗೆ ಮಾಡುತ್ತದೆ. 8 ನಿಂಬೆ ಹಣ್ಣಿನ ರಸ ದೇಹವನ್ನು ತಣ್ಣನೆ ಇಡಲು ಸಹಕಾರಿ ಆಗುತ್ತದೆ. ಈ ಮೇಲ್ಕಂಡ ಹಣ್ಣಿನ ರಸಗಳನ್ನು ಆದಷ್ಟು ಸೇವಿಸಿಬಿಸಿಲಿನ ಬೇಗೆಗೆ ನಿಮ್ಮ ದೇಹವನ್ನು ರಕ್ಷಣೆ ಮಾಡಿರಿ.

Leave A Reply

Your email address will not be published.