ಹೆಚ್ಚು ಬೆಲೆ ಕೊಟ್ಟು ಕಿತ್ತಳೆ ಜ್ಯೂಸ್ ತಂದಿದ್ದೀರಿ ಎಂದು ಗಂಡನಿಗೆ ಬೈದ ಹೆಂಡತಿ. ಹಿಂತಿರುಗಿಸಲು ಹೋದಾಗ ಆದ ಘಟನೆ ಏನು? ಓದಿದರೆ ನೀವು ಕೂಡ ಚಕಿತರಾಗುವಿರಿ.

472

ಜೀವನದಲ್ಲಿ ಮದುವೆ ಅನ್ನುವುದು ಅವಿಭಾಜ್ಯ ಅಂಗ . ಕೆಲವರು ಮದುವೆಯ ನಂತರ ಜೀವನ ನರಕ ಎಂದರೆ ಕೆಲವರು ಮದುವೆ ಆದ ನಂತರದ ದಿನಗಳಲ್ಲಿ ಖುಷಿಯಾಗಿ ಇರುತ್ತಾರೆ. ಇದೆಲ್ಲವೂ ಗಂಡ ಮತ್ತು ಹೆಂಡತಿಯ ಹೊಂದಾಣಿಕೆಯಲ್ಲಿ ಇರುವ ವಿಚಾರಗಳು. ಅದೇನೇ ಆದರೂ ಎಲ್ಲಾ ಮನೆಯಲ್ಲೂ ಹೆಂಡತಿಯಾದವಳದ್ದು ಒಂದು ಕೈ ಮೇಲೆ ಇರುತ್ತದೆ ಎನ್ನುತ್ತಾರೆ ಹೆಚ್ಚಿನ ಮದುವೆ ಯಾದ ಗಂಡಸರು. ಅದೇನೇ ಇರಲಿ ನಾವು ಇಂದು ತಿಳಿಯಲು ಹೊರಟ ವಿಚಾರ ಕೂಡ ಒಂದು ಕುಟುಂಬಕ್ಕೆ ಸಂಬಂಧ ಪಟ್ಟದ್ದು. ತುಂಬಾ ಕುತೂಹಲ ವಿಚಾರ ಇದು. ಅವರ ಜೀವನದ ದಿಕ್ಕನ್ನೇ ಬದಲಿಸಿದ ಘಟನೆ. ಏನಿದು ಬನ್ನಿ ತಿಳಿಯುವ.

ಪಾಶ್ಚಾತ್ಯ ದೇಶವೊಂದರಲ್ಲಿ ಗಂಡ ಒಬ್ಬ ವಾಕಿಂಗ್ ಹೋಗಿದ್ದಾಗ ಮನೆ ಪಕ್ಕದಲ್ಲೇ ಇದ್ದ ಸೂಪರ್ ಮಾರ್ಕೆಟ್ ಇಂದ 5 ಸೆಂಟ್ (ಅಲ್ಲಿನ ಕರೆನ್ಸಿ) ಕೊಟ್ಟು 1 ಬಾಟಲ್ ಕಿತ್ತಳೆ ಜ್ಯೂಸ್ ತಂದಿದ್ದರು. ಮನೆಯಲ್ಲಿ ಬಂದು ಹೆಂಡತಿಯ ಕೈಯಲ್ಲಿ ಕೊಟ್ಟಾಗ ಎಷ್ಟು ಎಂದು ಕೇಳಿದಳು. ಆಗ ಅವರು 5 ಸೆಂಟ್ ಕೊಟ್ಟು ತಂದೆ ಎಂದಾಗ ಶುರು ಆಗಿದ್ದು ನೋಡಿ ಬೈಗುಳ. ಹೆಂಡತಿ ಬೈಯುತ್ತಾ ನಾನು ಅಲ್ಲೇ ಹೋಗಿದ್ದೆ, ಇದೆ ಜ್ಯೂಸ್ ಅಲ್ಲಿ ಸೇಲ್ ಗೆ ಹಾಕಿದ್ದಾರೆ ಬರಿ 2.5 ಸೆಂಟ್ ಗೆ ಸಿಗುತ್ತದೆ 5 ಸೆಂಟ್ ಕೊಟ್ಟು ತಂದಿದ್ದೀರಿ ಹೋಗಿ ಹಿಂತಿರುಗಿಸಿ ಬನ್ನಿ ಎಂದು ಗದರಿಸದರು. ಎಲ್ಲಾ ಮನೆಯಲ್ಲೂ ಇದೆ ಪಾಡು ಎಂದರೆ ತಪ್ಪಾಗಲಾರದು. ಗಂಡ ತುಟಿಕ್ ಪಿಟಿಕ್ ಎನ್ನದೆ ಅದನ್ನು ಹಿಡಿದು ಹಿಂತಿರುಗಿಸಲು ಹೋದಾಗ. ಅವರು ಹಿಂಪಡೆಯಲು ಒಪ್ಪಿಕೊಂಡರು. ಹಾಗೆ ಹಿಂತಿರುಗಿಸಿ ಮತ್ತೆ 2.5 ಸೆಂಟ್ ಗೆ ಬಿಲ್ ಮಾಡಲು ಹೋದಾಗ ಕೌಂಟರ್ ನಲ್ಲಿ ಲಾಟರಿ ಟಿಕೆಟ್ ಒಂದಿತ್ತು ನೋಡಿ. ಮಿಕ್ಕುಳಿದ 2.5 ಸೆಂಟ್ ಹಿತಿರುಗಿಸುವುದು ಬೇಡ ನನಗೆ ಒಂದು ಲಾಟರಿ ಟಿಕೆಟ್ ಕೊಡಿ ಎಂದು ಹೇಳಿ ಪಡೆದು ಮನೆಗೆ ಬಂದರು.

ಜೀವನದಲ್ಲಿ ಆಗುವುದು ಎಲ್ಲಾ ಒಳ್ಳೆಯದಕ್ಕೆ ಎನ್ನುವ ವಾಡಿಕೆ ಇದೆ. ಒಂದರ್ಥದಲ್ಲಿ ಅದು ಸತ್ಯ ತಾಳ್ಮೆ ಎಂಬುವುದು ಜೀವನದಲ್ಲಿ ಮುಖ್ಯ ಆಗಲೇ ಏನಾದರೂ ಸಾಧಿಸಬಹುದು. ಹೀಗೆ ತಂಡ ಲಾಟರಿ ಟಿಕೆಟ್ ಅವರ ಜೀವನವನ್ನೇ ಬದಲಿಸಿತು. ಆ ಲಾಟರಿ ಟಿಕೆಟ್ ಡ್ರಾ ದಲ್ಲಿ ಇವರದ್ದೇ ಟಿಕೆಟ್ ಗೆ ಬಹುಮಾನ ಬಂದಿತ್ತು. ಅದು ಸಣ್ಣ ಮೊತ್ತವಲ್ಲ 2200 ಕೋಟಿ ರೂಪಾಯಿ. ಹೌದು ನೀವು ಸೊನ್ನೆ ಎಷ್ಟಿರಬಹುದು ಎಂದು ಲೆಕ್ಕ ಹಾಕಬಹುದು. ಆದರೆ ಇದು ಸತ್ಯ ಘಟನೆ ಇಂತಹದೇ ಘಟನೆಗಳು ಅದೆಷ್ಟೋ ಜನರ ಜೀವನದ ದಿಕ್ಕನ್ನೇ ಬದಲಿಸಿದೆ.

Leave A Reply

Your email address will not be published.