೨೦೦ ಅಡಿ ಕಣಿವೆಗೆ ಬಿದ್ದರೂ ಏನು ಆಗಲಿಲ್ಲ ಈ ಕಾರಿನಲ್ಲಿದ್ದ ಪ್ರಯಾಣಿಕರಿಗೆ. ಇದೆ ಕಾರಣಕ್ಕೆ ಭಾರತದಲ್ಲಿ ಟಾಟಾ ಕಾರುಗಳ ಬೇಡಿಕೆ ಹೆಚ್ಚು.
ಕಾರುಗಳನ್ನು ಹೊಂದುವುದು ಇತ್ತೀಚಿನ ದಿನಗಳಲ್ಲಿ ಶೋಕಿಯ ಹಾಗೆ ಆಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಒಂದು ಕಾರು ಇದ್ದೆ ಇರುತ್ತದೆ. ಸಣ್ಣದೋ ದೊಡ್ಡದೋ ಕಾರುಗಳನ್ನು ಮಾತ್ರ ನಾವು ಕಾಣಬಹುದು. ಭಾರತದಲ್ಲಿ ಇತ್ತಿಚಿನ ಕೆಲ ವರ್ಷಗಳಲ್ಲಿ ಈ ಕ್ರೇಜ್ ಹೆಚ್ಚಾಗಿದೆ. ಆದರೆ ನಾವು ಇಂದು ತಿಳಿಯಲು ಹೊರಟ ಈ ಕಾರು ನಮ್ಮ ದೇಶದ ಹಿರಿಮೆಯನ್ನು ಹೆಚ್ಚಿಸಿದೆ. ಯಾಕೆಂದರೆ 200 ಅಡಿ ಆಳಕ್ಕೆ ಬಿದ್ದರೂ ತನ್ನ ಸೇಫ್ಟಿ ರೇಟಿಂಗ್ ಗೆ ತಾನು ಬದ್ದ ಎಂಬಂತೆ ಯಾವುದೇ ಅಪಾಯ ಇಲ್ಲದಂತೆ ಕಾರಿನಲಿದ್ದವರನ್ನು ರಕ್ಷಿಸಿದೆ. ಯಾವುದು ಆ ಕಂಪನಿ ? ಬನ್ನಿ ತಿಳಿಯೋಣ.
ಭಾರತ ಎಂದರೆ ಮೊದಲಿಗೆ ನೆನಪಾಗುವುದು ಟಾಟಾ ಎಂದರೂ ತಪ್ಪಾಗಲಿಕ್ಕಿಲ್ಲ. ನೀವು ಹಾಗೆ a du ಕೊಂಡಿದ್ದರೆ ಅದು ಸತ್ಯ ಆ ಕಾರಿನ ಕಂಪನಿ ಮತ್ಯಾವುದೋ ಅಲ್ಲ ಭಾರತ ದೇಶದ ಹೆಮ್ಮೆಯ ಟಾಟಾ ಮೋಟಾರ್ಸ್. ಟಾಟಾ ಮೋಟಾರ್ಸ್ ಗೆ ಸೇರಿದ ಟಾಟಾ Nexon ಕಾರ್ ಅದು. ಭಾರತದ ಸೇಫ್ಟಿ ಕಾರ್ ಎಂದೇ ಕರೆಯುತ್ತಾರೆ ಇದನ್ನು. ಇದೀಗ ಅದು ಮತ್ತೆ ಸಾಭಿತಾಗಿದೆ. ಹಾಗಾದರೆ ನಡೆದ ಘಟನೆ ಏನು ತಿಳಿಯೋಣ ಬನ್ನಿ.
ಹಿಮಾಚಲ ಪ್ರದೇಶದಲ್ಲಿ ನಡೆದ ಘಟನೆ ಇದು, ಹಿಮಾಚಲ ಎಂದಾಗ ನೆನಪಾಗುವುದು ದುರ್ಘಮ ದಾರಿಗಳು. ಮೈನಸ್ ಡಿಗ್ರಿ ವಾತಾವರಣದಲ್ಲಿ ಕಾರೊಂದು ಚಲಿಸುತ್ತಾ ಇದ್ದಾಗ, ಹಿಮಾವೃತ ಆಗಿದ್ದ ಕಾರಣ ದಾರಿ ಸರಿಯಾಗಿ ಕಾಣದೆ , ದಾರಿ ತಪ್ಪಿ ಕಾರು ಆಳ ಪ್ರಪಾತಕ್ಕೆ ಬಿದ್ದಿದೆ. ಸರಿಸುಮಾರು 200 ಅಡಿ ಆಳಕ್ಕೆ ಬಿದ್ದರೂ ಕಾರಿನ ಒಳಗೆ ಇದ್ದವರಿಗೆ ಯಾವುದೇ ರೀತಿಯ ಹಾನಿ ಆಗಿಲ್ಲ. ವಾಹನವು ಕೂಡ ಹೇಳಿಕೊಳ್ಳುವಷ್ಟು ಹಾನಿ ಆಗಿಲ್ಲ. ಇದೆ ಕಾರಣಕ್ಕೆ ಇದೀಗ ಜನರು ಟಾಟ ಕಂಪನಿಯ ಈ ಕಾರನ್ನು ಮತ್ತು ನಮ್ಮ ದೇಶದ ರತ್ನ ರತನ್ ಟಾಟಾ ಅವರನ್ನು ಹೊಗಳುತ್ತಾ ಇದ್ದಾರೆ.