೩ನೆ ವರ್ಷದಿಂದ ಚೆಸ್ ಆಡಲು ಕಲಿತ ಈ ಹುಡುಗ ಇಂದು ವಿಶ್ವ ಚಾಂಪಿಯನ್ ಆನ್ ಸೋಲಿಸಿಬಿಟ್ಟನಲ್ಲ. ಈತನ ಮನೆಯ ಪರಿಸ್ಥಿತಿ ಹೇಗಿದೆ?

367

ಮಕ್ಕಳು ಎಂದರೆ ಬರಿ ಆಟ ಪಾಠಗಳಲ್ಲಿ ಕಾಲ ಕಳೆಯುತ್ತಾರೆ. ಅದರಲ್ಲೂ ಇತ್ತೀಚಿನ ಜನರೇಷನ್ ಅಂತೂ ಟಿವಿ ಮೊಬೈಲ್ ಒಳಗಡೆ ಮುಳುಗಿ ಹೋಗುತ್ತಾರೆ. ಅದೊಂದೇ ಪ್ರಪಂಚ ಅವರಿಗೆ , ಆದರೆ ಇಲ್ಲೊಬ್ಬ ತಂದೆ ತಾಯಿ ಮಕ್ಕಳನ್ನು ಟಿವಿಯಿಂದ ದೂರ ಇಡಬೇಕು ಎಂಬ ಯೋಚನೆಯಿಂದ ಮಾಡಿದ್ದ ಯೋಜನೆ ಇಂದು ಭಾರತೀಯರೆಲ್ಲರೂ ಹೆಮ್ಮೆಯಿಂದ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದೆ. ಹೌದು ಇಂದು ಇವರು ವಿಶ್ವ ಚಾಂಪಿಯನ್ ಆಟಗಾರನಿಗೆ ಸೋಲುಣಿಸಿದ್ದಾರೆ. ಬನ್ನಿ ತಿಳಿಯೋಣ ಇವರ ಬಗೆಗೆ.

ಇವರ ಹೆಸರು ಪ್ರಗ್ನಾನಂದ ಚೆನ್ನೈ ಮೂಲದ ಇವರ ತಂದೆ ಪೋಲಿಯೋ ಪೀಡಿತರು. ಒಬ್ಬಾಕೆ ಅಕ್ಕ ಇಂದು ಈತ ಈ ಆಟ ಆಡಬೇಕಾದರೆ ಅದಕ್ಕೆ ಕಾರಣ ಅಕ್ಕ ವೈಶಾಲಿ. ಇವರು ಚಿಕ್ಕದಿದ್ದಾಗ ಟಿವಿ ಯಿಂದ ದೂರ ಇರಲು ಚೆಸ್ ಆಟ ಕಳಿಸಿದ್ದರು ಆದರೆ ಮುಂದಕ್ಕೆ ಅದರಲ್ಲೇ ಮುಂದುವರೆದರು. ಅಕ್ಕನನ್ನು ನೋಡಿ ತಮ್ಮನೂ ಈ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡ . ಕೇವಲ ಮೂರು ವರ್ಷ ಪ್ರಾಯದಲ್ಲಿ ಈತ ಆಡಲು ಶುರು ಮಾಡಿದ್ದ. ಅದನ್ನೇ ಮುಂದುವರೆಸಿ ಇಂದು ರಾತ್ರಿ ರಾತ್ರಿ ಇಡೀ ದೇಶಕ್ಕೆ ಚಿರಪರಿಚಿತ ವ್ಯಕ್ತಿ ಆಗಿದ್ದಾನೆ. ನಿನ್ನೆಯ ವರೆಗೆ ಈತನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇಂದು ಈತ ನಮ್ಮ ದೇಶ ಹೆಮ್ಮೆ ಪಡುವ ಕೆಲಸ ಮಾಡಿದ್ದಾನೆ.

ಇವರು ಆನ್ಲೈನ್ ರಾಪಿಡ್ ಚದುರಂಗ ಟೂರ್ನಮೆಂಟ್ ನಲ್ಲಿ ತಮ್ಮ 8ನೆಯ ಸುತ್ತಿನಲ್ಲಿ ನಾರ್ವೆ ದೇಶದ ವರ್ಲ್ಡ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ. ಹೌದು ಇದು ಎಲ್ಲಾ ಭಾರತೀಯರು ಹೆಮ್ಮೆ ಪಡುವ ವಿಚಾರ ಈಗ. ಸಣ್ಣ ಹುದು ಒಬ್ಬ ವಿಶ್ವ ಚಾಂಪಿಯನ್ ಆಟಗಾರನಿಗೆ ಸೋಲುಣಿಸುದುವುದು ಸಣ್ಣ ಕೆಲಸ ಅಲ್ಲ. ಅವರ ಶ್ರದ್ಧೆ ಮನೆಯವರ ನಂಬಿಕೆ ಅಕ್ಕನ ಪ್ರೋತ್ಸಾಹ ಅವರನ್ನು ಈ ಮಟ್ಟಕ್ಕೆ ತಂದಿದೆ ಎಂದರೆ ಸುಳ್ಳಾಗದು. ಮನೆಯಲ್ಲಿ ಮಾತನ್ನು ಕೇಳದೆ ಟಿವಿಯ ಮುಂದೆ ಕೂರುವ ಮಕ್ಕಳಿಗೆ ನೀವು ಕೂಡ ಇಂತಹ ಒಂದು ಪ್ರಯೋಗ ಮಾಡಿ ನೋಡಿರಿ. ನಿಮ್ಮ ಮಕ್ಕಳು ಕೂಡ ಇದರಲ್ಲಿ ಯಶಸ್ಸು ಕಾಣಬಹುದು.

Leave A Reply

Your email address will not be published.