೬೦ ಲಕ್ಷ ರೂಪಾಯಿಗಳ ಸಾಲ ಪಡೆದು ಪ್ರಾರಂಭಿಸಿದರು ಬಿದಿರಿನ ಈ ಉದ್ಯಮ ಇಂದು ಇವರು ಕೋಟ್ಯಧಿಪತಿಗಳಾಗಿದ್ದರೆ?

1,238

ಕೆಲಸ ಯಾವುದೇ ಇರಬಹುದು ಆದರೆ ಮನಸಿಟ್ಟು ಕಷ್ಟಪಟ್ಟು ಮಾಡಿದರೆ ಅದರ ಫಲ ಸಿಕ್ಕೇ ಸಿಗುತ್ತದೆ. ಇದಕ್ಕೆ ಸಾಕ್ಷಿ ಇಂದು ನಾವು ಹೇಳ ಹೊರಟಿರುವ ದಂಪತಿಗಳ ಕಥೆ. ಈ ದಂಪತಿಗಳು ಬಿದಿರಿನಿಂದ ಪೀಠೋಪಕರಣ ತಯಾರಿಸುವ ನಿರ್ಧಾರ ಮಾಡಿದ್ದರು. ಇದಕ್ಕೆ ಅನೇಕ ಜನ ಇದು ಒಂದು ಹಂತಕ್ಕೆ ತಲುಪುವುದಿಲ್ಲ, ಇಂದಿನ ಕಾಲದಲ್ಲಿ ಇದೆಲ್ಲ ಮಾರಾಟವಾಗುವುದಿಲ್ಲ ಎಂದು ಕೂಡ ಹೇಳಿದ್ದರು. ಆದರೂ ಈ ದಂಪತಿ ಹೇಗೆ ಯಶಸ್ಸು ಕಂಡರು? ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಹೈದೆರಾಬಾದ್ ನಲ್ಲಿ ವಾಸಿಸುವ ಈ ದಂಪತಿ ಹೆಸರು ಅರುಣಾ ಹಾಗು ಪ್ರಶಾಂತ್ ಲಿಂಗಂ. ಇವರಿಬ್ಬರ ಮಾಡುವೆ ಆಗಿ ಒಟ್ಟು ೧೫ ವರ್ಷಗಳಾಗಿವೆ. ಒಂದು ದಿನ ಮಾರುಕಟ್ಟೆಗೆ ಹೋಗುವಾಗ ಬಿದಿರಿನ ಪೀಠೋಪಕರಣ ನೋಡಿದರು. ಅಂದೇ ಅವರಿಗೆ ಈ ಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಬೇಕು ಅನ್ನುವ ಆಲೋಚನೆ ಬಂದಿತ್ತು. ಅಂದು ಅವರ ಬಳಿ ಈ ಆಲೋಚನೆ ಅಷ್ಟೇ ಇತ್ತು ವಿನಃ ಬೇರಾವುದೂ ಸೌಲಭ್ಯ ಇರಲಿಲ್ಲ. ಮನೆಗೆ ಬಂದು ತಮ್ಮ ಹೆತ್ತವರ ಬಳಿ ಇದರ ಬಗ್ಗೆ ಸಮಾಲೋಚನೆ ನಡೆಸಿದರು, ಆದರೆ ಈ ಉದ್ಯಮದ ಉಪಾಯ ತಂದೆ ತಾಯಿ ತಿರಸ್ಕರಿಸಿದರು. ನಂತರ ಈ ಇಬ್ಬರು ದಂಪತಿಗಳು ಕೂಡ ಒಂದು ಫಾರೆಸ್ಟ್ ಸ್ಟಡಿ ಟೂರ್ ನಡೆಸಿದರು. ಈ ಕ್ಷೇತ್ರದ ಬಗ್ಗೆ ಅರಿತರು. ಈ ಉದ್ಯಮ ಎಷ್ಟು ದೊಡ್ಡದು ಎಂದು ಅರಿತರು.

೨೦೦೮ ರಲ್ಲಿ ಈ ಉದ್ಯಮ ಶುರು ಮಾಡಿದರು ಎಂದು ಹಿಂದಿ ಸಮಾಚಾರ ಪತ್ರಿಕೆ ದೈನಿಕ್ ಭಾಸ್ಕರ್ ಪ್ರಕಟ ಮಾಡಿತ್ತು. ಈ ಉದ್ಯಮ ಇನ್ನು ಎತ್ತರಕ್ಕೆ ಕೊಂಡು ಹೋಗಲು ಬ್ಯಾಂಕ್ ಇಂದ ೬೦ ಲಕ್ಷದ ಸಾಲ ಕೂಡ ಪಡೆದರು. ಇದರ ಜೊತೆಗೆ ಅಲ್ಲಿ ಹಳ್ಳಿಯಲ್ಲಿರುವ ಜನರಿಗೆ ಹಾಗೇನೇ ಆದಿವಾಸಿಗಳಿಗೆ ಟ್ರೇನಿಂಗ ಕೂಡ ನೀಡುತ್ತಿದ್ದಾರೆ. ಇದರ ಮೂಲಕ ಸೇರಿ ಆ ಜನರು ಕೂಡ ಈ ಉದ್ಯಮದ ಬಗ್ಗೆ ಜ್ಞಾನ ಪಡೆಯುತ್ತಿದ್ದಾರೆ. ಶುರುವಿನಲ್ಲಿ ಉದ್ಯಮ ಬೆಳೆಸಲು ತುಂಬಾ ಕಷ್ಟಪಟ್ಟರಾದರು ಕೂಡ ಇಂದು ಒಂದು ನೆಲೆ ಕಂಡುಕೊಂಡಿದ್ದಾರೆ ಈ ಉದ್ಯಮದಿಂದ.

Leave A Reply

Your email address will not be published.