೬ ತಿಂಗಳಿಗೊಮ್ಮೆ ಟವರ್ ಹತ್ತಿ ಈ ಕೆಲಸ ಮಾಡುವುದಕ್ಕೆ ಸಿಗುತ್ತದೆ ೨೦,೦೦೦ ಡಾಲರ್. ಯಾಕಿಷ್ಟೊಂದು ಹಣ ಅಂತೀರಾ?
ಕೆಲಸ ಎಂದರೆ ಹಾಗೆ ನೋಡಿ ಹೊಟ್ಟೆ ಪಾಡಿಗೆ ಮಾಡುವ ಕಾಯಕ ಅದು. ಒಂದು ಕೆಲಸ ಮಾಡದೆ ಇದ್ದರೂ ಹೊಟ್ಟೆಗೆ ಉಣ್ಣುವುದು ಕಷ್ಟ. ಅದು ಈಗಿನ ಕಾಲದಲ್ಲಿ ಇಬ್ಬರು ಕೆಲಸ ಮಾಡಿದರು ಸಾಕಾಗುವುದಿಲ್ಲ. ಈಗಿನ ಜೀವನ ಶೈಲಿಯಲ್ಲಿ ಎಷ್ಟು ಹಣ ಇದ್ದರೂ ಸಾಲುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಕೇವಲ 6 ತಿಂಗಳಿಗೊಮ್ಮೆ ಕೆಲಸ ಮಾಡುತ್ತಾನೆ. ಹೌದು ಅಚ್ಚರಿ ಎನಿಸಿದರು ಸತ್ಯ . ಈತ ಮಾಡುವುದು 6 ತಿಂಗಳಿಗೊಮ್ಮೆ ಅದು ಒಂದೇ ಕೆಲಸ ಅದು ಅಲ್ಪ ಸಮಯದ ಕೆಲಸ ಇದಕ್ಕೆ ಆತನಿಗೆ ಸಿಗುತ್ತದೆ ಕೈತುಂಬಾ ಸಂಬಳ . ಬನ್ನಿ ಏನಿದು ಕೆಲಸ ತಿಳಿಯೋಣ.
ಸೌತ್ ದಕೋಟಾದಲ್ಲಿ ಅತ್ಯಂತ ಎತ್ತರದ ಟವರ್ ಗಳಲ್ಲಿ ಒಂದು ಟವರ್ ಇದೆ. ಹೌದು ಎ ಡಿ ಎಲ್ ಟಿ ಸಂಸ್ಥೆಗೆ ಸೇರಿದ ಈ ಟವರ್ ಬರೋಬ್ಬರಿ 609 ಮೀಟರ್ ಎತ್ತರ ಇದೆ. ಹಾಗಾದರೆ ಈ ಟವರ್ ಮತ್ತು ಈ ವ್ಯಕ್ತಿಯ ಕೆಲಸಕ್ಕೆ ಏನು ಸಂಬಂಧ ಎಂದು ಯೋಚಿಸುತ್ತಾ ಇದ್ದಾರೆ ಖಂಡಿತಾ ಇದೆ. ಮಾರ್ಕ್ಸ್ ತೋಮೋಸೋವಿಕ್ ಆತನ ಹೆಸರು ಆತ ಕೂಡ ಸೌಟ್ ದಕೋಟಾದಲ್ಲಿ ವಾಸ ಮಾಡುತ್ತಾನೆ.
ಅತ್ಯಂತ ಎತ್ತರದ ಟವರ್ ಗಳ ಪಟ್ಟಿಯಲ್ಲಿರುವ ಟವರ್ ಅನ್ನು ಹತ್ತುವುದೆ ಈತನ ಕೆಲಸ. ಪ್ರತಿ 6 ತಿಂಗಳಿಗೊಮ್ಮೆ ಈ ಟವರ್ ಅನ್ನು ಹತ್ತುತ್ತಾರೆ ಇವರು. ಹೌದು ವರ್ಷದಲ್ಲಿ ಬರಿ ಎರಡು ಬಾರಿ ಮಾತ್ರ ಈ ಟವರ್ ಹತ್ತಲಾಗುತ್ತದೆ. ಅದೇ ಆತನ ಕೆಲಸ ಮತ್ತು ಈ ಟವರ್ ಅನ್ನು ಆತ ಸುಮ್ಮನೆ ಹತ್ತುವುದಿಲ್ಲ. ಬದಲಾಗಿ ಅದಕ್ಕೆ ಹತ್ತಿ ಅದರ ಮೇಲಿನ ಬಲ್ಬ್ ಒಂದನ್ನು ಚೇಂಜ್ ಮಾಡಿ ಮತ್ತೆ ಕೆಳಕ್ಕೆ ಬರುತ್ತಾನೆ. ಅದಕ್ಕಾಗಿ ಆತನಿಗೆ ಕಂಪನಿ ಕೊಡುವ ಸಂಭಾವನೆ ಎಷ್ಟು ಗೊತ್ತೆ? ಬರೋಬ್ಬರಿ 14 ಲಕ್ಷ ರೂಪಾಯಿ ಹಣ ಈತನಿಗೆ ಸಿಗುತ್ತದೆ. ಹೌದು ಕಂಪನಿ ಈತನಿಗೆ ವರ್ಷಕ್ಕೆ 28ಲಕ್ಷ ಹಣ 2 ಬಾರಿ ಟವರ್ ಹತ್ತಲು ನೀಡುತ್ತದೆ. ಅಚ್ಚರಿ ಎನಿಸಿದರೂ ಇದು ಸತ್ಯ ಸಂಗತಿ.