ಅಮೆರಿಕಕ್ಕೆ ಭೇಟಿ ನೀಡಿದಾಗ ಅಧ್ಯಕ್ಷ ಒಬಾಮಾ ಆಯೋಜಿಸಿದ್ದ ಔತಣಕೂಟವನ್ನ ಮೋದಿ ನಿರಾಕರಿಸಲು ಕಾರಣವೇನು ಗೊತ್ತೇ??

327

ನಮಸ್ಕಾರ ಸ್ನೇಹಿತರೇ ವಿಶ್ವದ ದೊಡ್ಡಣ್ಣ ಅಮೇರಿಕಾಕ್ಕೇ ಭಾರತದ ಪ್ರಧಾನ ಮಂತ್ರಿ ಭೇಟಿ ನೀಡಿದ್ದ ವೇಳೆಯಲ್ಲಿ ನಡೆದ ಒಂದು ಘಟನೆ ಈಗ ಹೆಚ್ಚು ಸುದ್ದಿಯಾಗುತ್ತಿದೆ. ಅಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ , ನರೇಂದ್ರ ಮೋದಿಯವರಿಗೆಂದೇ ವಿಶೇಷವಾದ ಔತಣಕೂಟವನ್ನ ಏರ್ಪಡಿಸಿದ್ದರಂತೆ. ಆದರೇ ನರೇಂದ್ರ ಮೋದಿ ಆ ಔತಣಕೂಟವನ್ನ ನಯವಾಗಿ ನಿರಾಕರಿಸಿದರಂತೆ. ಕೇವಲ ಬಿಸಿನೀರಿಗೆ ನಿಂಬೆ ಹಣ್ಣಿನ ರಸವನ್ನ ಬೆರೆಸಿ ಕುಡಿಯುವ ಮೂಲಕ ಅಲ್ಲಿದ್ದ ಪ್ರತಿನಿಧಿಗಳೇ ಅವಕ್ಕಾಗುವಂತೆ ಮಾಡಿದರಂತೆ.

ಅಷ್ಟಕ್ಕೂ ಭಾರತದ ಪ್ರಧಾನಿ, ಆ ಔತಣಕೂಟವನ್ನ ನಿರಾಕರಿಸಿ, ಕೇವಲ ನಿಂಬೆರಸ ಕುಡಿದಿದ್ದರ ಹಿಂದಿನ ಸ್ವಾರಸ್ಯಕರ ಘಟನೆ ಬಯಲಾಗಿದೆ. ಹೇಳಿಕೇಳಿ ನರೇಂದ್ರ ಮೋದಿ ಒಬ್ಬ ದೊಡ್ಡ ದೈವ ಭಕ್ತ. ನವರಾತ್ರಿ ಉಪಾಸನೆ ವೇಳೆ, ಒಂಬತ್ತು ದಿನಗಳ ಕಾಲ ಕೇವಲ ಬಿಸಿ ನೀರನ್ನು ಸೇವಿಸುತ್ತಾ ದುರ್ಗಾ ಮಾತೆಯ ಅನುಷ್ಠಾನದಲ್ಲಿ ನಿರತರಾಗಿರುತ್ತಾರೆ. ಆ ಒಂಬತ್ತು ದಿನ ಬಿಸಿನೀರನ್ನ ಬಿಟ್ಟರೇ ಮೋದಿ ಬೇರೆ ಏನನ್ನೂ ಸೇವಿಸುವುದಿಲ್ಲವಂತೆ. ಈ ಘಟನೆ ತಿಳಿದ ಒಬಾಮಾ , ಏಕೆ ಹೀಗೆ ಎಂದು ಮೋದಿಯವರ ಬಳಿ ಕೇಳಿದಾಗ, ಮೋದಿ ಉತ್ತರ ಇನ್ನು ಸೊಗಸಾಗಿತ್ತಂತೆ.

ನಾನು ನನ್ನ ಇಷ್ಟಾರ್ಥ ಸಿದ್ದಿ ಹಾಗೂ ದೇವರ ಮೇಲಿನ ನಂಬಿಕೆ ಕಾರಣಕ್ಕೆ ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ಹಾಗೂ ವ್ರತದಲ್ಲಿ ತೊಡಗಿರುತ್ತೆನೆ ಎಂದು ಹೇಳಿದರಂತೆ. ಭಾರತದಂತಹ ದೊಡ್ಡ ದೇಶದ ಪ್ರಧಾನಿ , ತನ್ನ ದೇಶದ ಪ್ರಜೆಗಳ ಒಳಿತಿಗಾಗಿ ಇಂತಹ ಉಪವಾಸ ಮಾಡುತ್ತಾರೆಯೇ ಎಂದು ಆಶ್ಚರ್ಯಚಕಿತರಾದರಂತೆ ಬರಾಕ್ ಒಬಾಮಾ. ಒಟ್ಟಿನಲ್ಲಿ ನರೇಂದ್ರ ಮೋದಿ ತಮ್ಮ ಕಠಿಣ ಉಪವಾಸ ಹಾಗೂ ಅನುಷ್ಠಾನಗಳ ಮೂಲಕ ತಾವು ಕೇವಲ ಪ್ರಧಾನ ಮಂತ್ರಿಯಲ್ಲ, ಪ್ರಧಾನ ಸೇವಕ ಎಂಬುದನ್ನ ದಿನೇ ದಿನೇ ನಿರೂಪಿಸುತ್ತಿದ್ದಾರೆ.

Leave A Reply

Your email address will not be published.