ಎಲ್ಲರೂ ಇಷ್ಟ ಪಟ್ಟು ಎರಡೆರಡು ಸಲ ಹಾಕಿಸಿಕೊಂಡು ತಿನ್ನುವ ಹಾಗೆ ವಾಂಗಿಬಾತ್ ಅನ್ನು ಯಾವುದೇ ಅಂಗಡಿ ಪವರ್ ಇಲ್ಲದೆ ಹೀಗೆ ಮಾಡಿ

430

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ವಾಂಗಿಬಾತ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯಲ್ಲಿ ವಾಂಗಿಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು: 2 ಲೋಟ ಅಕ್ಕಿ, ಕಾಲು ಕೆಜಿ ವಾಂಗಿಬಾತ್ ಬದನೆಕಾಯಿ, 2 ಈರುಳ್ಳಿ, 4 ಚಮಚ ತೆಂಗಿನಕಾಯಿ ತುರಿ, ಕಾಲು ಕಟ್ಟು ಮೆಂತ್ಯ ಸೊಪ್ಪು, 3 ಚಮಚ ಹಸಿ ಬಟಾಣಿ,15 ಬ್ಯಾಡಿಗೆ ಮೆಣಸಿನಕಾಯಿ, 50ml ಎಣ್ಣೆ, 2 ಟೊಮ್ಯಾಟೋ, 5 ಏಲಕ್ಕಿ, 3 ಸ್ಟಾರ್ ಹೂವು, 6 ಲವಂಗ, 4 ಚಕ್ಕೆ, 2 ಕಲ್ಲು ಹೂವು, ಸ್ವಲ್ಪ ಅನಾನಸ್ ಮೊಗ್ಗು, 1 ಗಡ್ಡೆ ಬೆಳ್ಳುಳ್ಳಿ, 1 ಇಂಚಿನ ಶುಂಠಿ, ಸ್ವಲ್ಪ ಇಂಗು, 1 ಚಮಚ ಧನಿಯಾ, 1 ಚಮಚ ಸೋಂಪು ಕಾಳು, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಹೋಟೆಲ್ ಶೈಲಿಯಲ್ಲಿ ವಾಂಗಿಬಾತ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಅರ್ಧದಷ್ಟು ಸಣ್ಣಗೆ ಹಚ್ಚಿದ ಈರುಳ್ಳಿ, ಬ್ಯಾಡಿಗೆ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು , ಶುಂಠಿ, ಧನಿಯಾ, ಅರಿಶಿನಪುಡಿ, ಇಂಗು,4 ಏಲಕ್ಕಿ, 2 ಸ್ಟಾರ್ ಹೂವು, 4 ಲವಂಗ, ಸ್ವಲ್ಪ ಚಕ್ಕೆ, 2 ಕಲ್ಲು ಹೂವು,ಸ್ವಲ್ಪ ಅನಾನಸ್ ಮೊಗ್ಗು, ಅರ್ಧ ಚಮಚ ಸೋಂಪು ಕಾಳು ಹಾಗೂ 1 ಚಮಚದಷ್ಟು ಎಣ್ಣೆಯನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ, ತೆಂಗಿನಕಾಯಿ ತುರಿ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನ ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 2 ಚಕ್ಕೆ, 2 ಲವಂಗ, 1 ಏಲಕ್ಕಿ, 1 ಸ್ಟಾರ್ ಹೂವು, ಸೋಂಪು ಕಾಳು, ಸಣ್ಣಗೆ ಹಚ್ಚಿದ ಮೆಂತ್ಯ ಸೊಪ್ಪನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮ್ಯಾಟೊವನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಚ್ಚಿದ ಬದನೆಕಾಯಿಯನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಸಿಬಟಾಣಿಯನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡ ಮಸಾಲಾ, 3 ಲೋಟ ನೀರು ಹಾಗೂ 10 ನಿಮಿಷಗಳ ಕಾಲ ನೆನೆಸಿದ ಅಕ್ಕಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ಹೋಟೆಲ್ ಶೈಲಿಯಲ್ಲಿ ವಾಂಗಿಬಾತ್ ಸವಿಯಲು ಸಿದ್ದ.

Leave A Reply

Your email address will not be published.