ನಿಮ್ಮ ಕೈಯಲ್ಲಿ ಇದೊಂದು ಗುರುತು ಇದೆಯಾ?? ಇದೊಂದು ಇದ್ದರೇ ಸಾಕು, ನಿಮಗೆ ಐಷಾರಾಮಿ ಬದುಕು ಸಿಗುವುದು ಖಚಿತ. ಹೇಗೆ ನೋಡಬೇಕು ಗೊತ್ತೇ??

124

ಜ್ಯೋತಿಷ್ಯ ಶಾಸ್ತ್ರದ ಮತ್ತೊಂದು ವಿಭಾಗ ಎಂದು ಹಸ್ತ ಸಾಮುದ್ರಿಕ ಶಾಸ್ತ್ರವನ್ನು ಕರೆಯಲಾಗುತ್ತದೆ. ಇದರ ಪ್ರಕಾರ ಕೈಯಲ್ಲಿ ಹಲವು ರೇಖೆಗಳಿವೆ, ಮದುವೆಯ ರೇಖೆ, ಆಯುಷ್ಯದ ರೇಖೆ, ಅದೃಷ್ಟದ ರೇಖೆ, ಹಣದ ರೇಖೆ, ಅನ್ನದ ರೇಖೆ ಹೀಗೆ ಪ್ರತಿಯೊಂದು ವಿಚಾರಕ್ಕೂ ಬೇರೆ ಬೇರೆ ರೇಖೆಗಳಿವೆ. ಈ ರೇಖೆಗಳ ಪ್ರಕಾರ ಒಬ್ಬ ಮನುಷ್ಯನ ಜೀವನದ ಬಗ್ಗೆ ತಿಳಿಸುತ್ತಾರೆ. ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಕೈಯಲ್ಲಿ ಕೆಲವು ಚಿಹ್ನೆಗಳು ಇರುತ್ತವೆ, ಆ ಚಿಹ್ನೆಗಳು ಇದ್ದರೆ, ಆ ವ್ಯಕ್ತಿ ಬಹಳ ಆದೃಷ್ಟವಂತ ಎಂದು ಹೇಳುತ್ತಾರೆ. ಆ ಚಿಹ್ನೆಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ತ್ರಿಕೋನ, ದ್ವೀಪ ಹಹು ಕಲಶದಂತಹ ಚಿಹ್ನೆಗಳು ಇದ್ದರೆ ಅದು ಶುಭ ಎಂದು ಹೇಳಲಾಗುತ್ತದೆ. ಅಂಗೈಯಲ್ಲಿ ಮೀನಿನ ಗುರುತು ಇರುವವರು ಜೀವನದಲ್ಲಿ ಶ್ರೀಮಂತರಾಗುತ್ತಾರೆ, ದಿಢೀರ್ ಧನಲಾಭ ಪಡೆಯುತ್ತಾರೆ. ಜೊತೆಗೆ ಜೀವನದಲ್ಲಿ ಬಹಳ ಗೌರವ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಅಂಗೈಯಲ್ಲಿ ದೇವಸ್ಥಾನ ಅಥವಾ ಸ್ವಸ್ತಿಕ್ ಚಿಹ್ನೆ ಇರುವ ವ್ಯಕ್ತಿಗಳು ಬಹಳ ಅದೃಷ್ಟವಂತರು ಎಂದು ಹೇಳುತ್ತಾರೆ. ಇವರು ಜೀವನದಲ್ಲಿ ಬಹಳ ಉನ್ನತ ಸ್ಥಾನವನ್ನು ತಲುಪುತ್ತಾರೆ ಎಂದು ಸಹ ಹೇಳಲಾಗುತ್ತದೆ..

ಅಂಗೈಯಲ್ಲಿ ರಥ ಅಥವಾ ತ್ರಿಶೂಲದ ಗುರುತು ಜೀವನದಲ್ಲಿ ಬಹಳ ಯಶಸ್ಸು ಪಡೆಯುತ್ತಾರೆ ಎಂದು ಅರ್ಥ, ಕೆಲಸ ಮಾಡುವ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ತಲುಪುತ್ತಾರೆ. ಯಾವುದೇ ಕೆಲಸ ಶುರು ಮಾಡಿದರು ಯಶಸ್ಸು ಇವರದ್ದಾಗುತ್ತದೆ. ಕಮಲದ ಹೂವು ಲಕ್ಷ್ಮಿದೇವಿಗೆ ಬಹಳ ಪ್ರಿಯವಾದ ಹೂವು, ಪೂಜೆ ಪುನಸ್ಕಾರಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಹೂವಿನ ಚಿಹ್ನೆಯನ್ನು ಕೈಯಲ್ಲಿ ಹೊಂದಿರುವವರಿಗೆ ಜೀವನದಲ್ಲಿ ಹೆಚ್ಚಿನ ಸಂಪತ್ತು ಪ್ರಾಪ್ತಿಯಾಗುತ್ತದೆ, ಲಕ್ಷ್ಮೀದೇವಿ ಕೃಪೆ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.

Leave A Reply

Your email address will not be published.