ಬಾತ್ರೂಮ್ನಲ್ಲಿ ಇಂತಹ ವಸ್ತುಗಳನ್ನು ಇಟ್ಟುಕೊಳ್ಳಲೇಬಾರದು, ಇಲ್ಲದಿದ್ರೆ ಕೈಯಲ್ಲಿ ಇರೋ ಹಣ ಮಂಗಮಾಯ ಆಗುತ್ತದೆ?? ಯಾವ್ಯಾವು ಗೊತ್ತೇ??

164

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಹಣವನ್ನು ಸಂಪಾದಿಸಿ ಶ್ರೀಮಂತ ಜೀವನವನ್ನು ನಡೆಸಬೇಕು ಎನ್ನುವ ಕನಸನ್ನು ಹೊಂದಿರುತ್ತಾರೆ. ಆದರೆ ಎಲ್ಲರೂ ಅಂದುಕೊಂಡ ಹಾಗೆ ಎಲ್ಲವೂ ನಡೆಯಬೇಕಲ್ಲವೇ. ಅದರಲ್ಲೂ ಕೆಲವೊಂದು ವಾಸ್ತುದೋಷದ ಕಾರಣದಿಂದಾಗಿಯೂ ಕೂಡ ಕೆಲವೊಮ್ಮೆ ಆರ್ಥಿಕ ಸ್ಥಿತಿ ಕೆಲ ಮಟ್ಟಕ್ಕೆ ಹೋಗುತ್ತದೆ. ಅದರಲ್ಲೂ ವಾಸ್ತು ಶಾಸ್ತ್ರದ ಪ್ರಕಾರ ಬಾತ್ ರೂಂನಲ್ಲಿ ಕೆಲವೊಂದು ವಸ್ತುಗಳನ್ನು ಇಡಲೇಬಾರದು. ಹಾಗಿದ್ದರೆ, ಬಾತ್ರೂಮ್ ನಲ್ಲಿ ಇಡಬಾರದ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಸಾತ್ವಿಕತೆಗೆ ಪ್ರತೀಕವಾಗಿರುವ ಸಸ್ಯಗಳನ್ನು ಬಾತ್ ರೂಮ್ನಲ್ಲಿ ನೀಡಬಾರದು. ಕೇವಲ ಇಷ್ಟು ಮಾತ್ರವಲ್ಲದೆ ಬಾತ್ ರೂಮ್ನಲ್ಲಿ ಯಾವುದೇ ಫೋಟೋಗಳನ್ನು ತೂಗು ಹಾಕಬಾರದು ಇದರಿಂದಾಗಿ ನಕರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ. ಸ್ಥಾನಗ್ರಹದಲ್ಲಿ ಯಾವತ್ತೂ ಕೂಡ ಅಲಂಕಾರಿಕ ವಸ್ತುಗಳನ್ನು ಹಾಕಬಾರದು ಇದರಿಂದಾಗಿ ಮನೆಯ ಖರ್ಚು ಹೆಚ್ಚಾಗಿ ಹಣ ನೀರಿನಂತೆ ಹರಿದು ಹೋಗುತ್ತದೆ. ಎಲ್ಲದಕ್ಕಿಂತ ಪ್ರಮುಖವಾಗಿ ಕೆಲವರು ಬಾತ್ರೂಮ್ ಗಾಗಿ ಬೇರೆ ಚಪ್ಪಲಿಗಳನ್ನು ಬಳಸುತ್ತಾರೆ ಆದರೆ ಒಂದು ವೇಳೆ ನೀವು ಕೂಡ ಹೇಗೆ ಬಳಸುತ್ತಿದ್ದರೆ ಅವುಗಳನ್ನು ಬಾಗಿಲಿನಿಂದ ಹೊರಗೆ ಇಡಿ ಹಾಗೂ ಶುಚಿಯಾಗಿಡಿ. ಕೆಲವರು ಸ್ನಾನವಾದ ನಂತರ ಬಟ್ಟೆಗಳನ್ನು ಅಲ್ಲೇ ನೆನೆಸಿಡುತ್ತಾರೆ ಹೀಗೆ ಯಾವತ್ತೂ ಕೂಡ ಮಾಡಬೇಡಿ. ಬಾತ್ ರೂಮ್ನಲ್ಲಿ ಒದ್ದೆ ಬಟ್ಟೆಗಳನ್ನು ಇಡುವುದು ಅಶುಭವಾಗಿರುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಬಾತ್ರೂಮ್ ನಲ್ಲಿ ಕೂಡ ಕನ್ನಡಿ ಇಟ್ಟುಕೊಳ್ಳುತ್ತಾರೆ.

ಆದರೆ ವಾಸ್ತು ಶಾಸ್ತ್ರದ ಪ್ರಕಾರ ಬಾತ್ರೂಮ್ ನಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳುವುದು ಅಷ್ಟೊಂದು ಶುಭಕರವಲ್ಲ, ಅಷ್ಟಕ್ಕೂ ನೀವು ಇಟ್ಟುಕೊಳ್ಳಲೇಬೇಕು ಎಂದಾದರೆ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು. ಅದರಲ್ಲೂ ಹೊಡೆದಿರುವ ಗಾಜಿನ ಕನ್ನಡಿಯನ್ನು ಬಾತ್ರೂಮ್ ನಲ್ಲಿ ಇಟ್ಟುಕೊಳ್ಳಲೇಬಾರದು ಇದು ನಕರಾತ್ಮಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ತಾಮ್ರವನ್ನು ಶುದ್ಧ ಲೋಹವೆಂದು ಪರಿಗಣಿಸಿ ದೇವರ ಉಪಯೋಗಕ್ಕೆ ಮಾತ್ರ ಇರುವಂತಹ ಲೋಹ ಎಂಬುದಾಗಿ ಗುರುತಿಸಲಾಗುತ್ತದೆ ಹೀಗಾಗಿ ಇಂತಹ ಪವಿತ್ರ ಲೋಹವನ್ನು ಬಾತ್ರೂಮ್ ನಲ್ಲಿ ಉಪಯೋಗಿಸಬೇಡಿ. ಈ ಮೇಲ್ಗಡೆ ದಾಖಲಾಗಿರುವ ಎಲ್ಲಾ ವಾಸ್ತು ಪರಿಹಾರಗಳನ್ನು ನೀವು ಫಾಲೋ ಮಾಡುವ ಕಾರಣದಿಂದಾಗಿ ನಿಮ್ಮ ಮನೆಯಲ್ಲಿ ವಾಸ್ತುದೋಷ ದೂರವಾಗಬಹುದು ನಿಮ್ಮ ಮನೆಯಲ್ಲಿ ಆರ್ಥಿಕ ಸಮೃದ್ಧಿ ನೆಲೆಸಬಹುದು ಎಂಬುದಾಗಿ ನಂಬಲಾಗಿದೆ.

Leave A Reply

Your email address will not be published.