ರಾಕೆಟ್ ಹಿಂದೆ ಕಾಣುವ ಬಿಳಿ ಬಣ್ಣದ ಹೊಗೆ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಬಗ್ಗೆ ಇಲ್ಲಿದೆ ಕುತೂಹಲಕಾರಿ ವಿಷಯಗಳು.

127

ನೀವು ಕೆಲವೊಮ್ಮೆ ಆಕಾಶ ನೋಡುವಾಗ ವಿಮಾನಗಳ ಹಿಂದೆ ಬಿಳಿ ಬಣ್ಣದ ಗೆರೆಗಳನ್ನು ಕಾಣಬಹುದು. ಇದನ್ನು ನೀವು ಈ ವಿಮಾನಗಳು ಬಿಡುವ ಹೊಗೆ ಅಂತ ಎನಿಸಿರಬಹುದು. ಆದರೆ ಇದರ ಹಿಂದಿದೆ ಬೇರೆ ಕಾರಣಗಳು. NASA ಪ್ರಕಾರ ವಿಮಾನಗಳು ಹೋಗುವಾಗ ಕಾಣುವ ಈ ಬಿಳಿ ಹೊಗೆಗಳನ್ನು ಕಂಟ್ರೆಲ್ಸ್ ಅಂತ ಕರೆಯುತ್ತಾರೆ. ಈ ಕಂಟ್ರೆಲ್ಸ್ ಒಂದು ಪ್ರಕಾರ ಮೋಡಗಳಾಗಿರುತ್ತವೆ. ಆದರೆ ಈ ಮೋಡಗಳು ಸಾಮಾನ್ಯ ಮೋಡಗಳಿಗಿಂತ ಬಿನ್ನವಾಗಿರುತ್ತದೆ. ಈ ಮೋಡಗಳು ಕೇವಲ ವಿಮಾನ ಅಥವಾ ರಾಕೆಟ್ ಗಳು ಚಲಿಸಿದ ನಂತರವೇ ರೂಪುಗೊಳ್ಳುತ್ತವೆ.

ಇನ್ನೊಂದು ವರದಿ ಪ್ರಕಾರ ಇಂತ ಮೋಡಗಳು ವಿಮಾನ ಭೂಮಿಯಿಂದ ೮ ಕಿಲೋಮೀಟರ್ ಮೇಲೆ ಹಾಗೂ ೪೦° ಡಿಗ್ರಿ ತಾಪಮಾನದಿಂದ ಸಂಚರಿಸುವಾಗ ರೂಪುಗೊಳ್ಳುತ್ತವೆ. ರಾಕೆಟ್ ಅಥವಾ ವಿಮಾನಗಳ ಎಕ್ಸಾಸ್ಟ್ ಗಳಿಂದ ಏರೋಸಾಲ್ಸ್ ಬಿಡುಗಡೆಗೊಳ್ಳುತ್ತದೆ. ಆಕಾಶದಲ್ಲಿರುವ ನೀರಿನ ಅಂಶಗಳು ಇವುಗಳೊಂದಿಗೆ ಸೇರಿ ಕಂಟ್ರೆಲ್ಸ್ ರೂಪುಗೊಳ್ಳುತ್ತದೆ.

ರಾಕೆಟ್ ಹಾಗು ವಿಮಾನಗಳು ಹೋದ ಸ್ವಲ್ಪ ಸಮಯದ ನಂತರ ಈ ಹೊಗೆಗಳು ಮಾಯ ಆಗುವುದನ್ನು ಕೂಡ ನೀವು ನೋಡಿರುತ್ತಿರ. ಹಾಗೇನೆ ಆಕಾಶದಲ್ಲಿ ಈ ಕಂಟ್ರೆಲ್ಸ್ ಜೋರಾದ ಗಾಳಿಯಿಂದ ಬೇರೆ ಕಡೆಗೆ ಕೂಡಾ ಚಲಿಸುತ್ತದೆ. ಅದರಿಂದ ಕೂಡಾ ಮಾಯವಾಗುತ್ತದೆ. ಮೊದಲ ಬಾರಿಗೆ ಈ ಕಂಟ್ರೆಲ್ಸ್ ಎನ್ನುವ ಮೋಡಗಳು ಎರಡನೇ ವಿಶ್ವ ಯು’ದ್ದದ ಸಮಯದಲ್ಲಿ ಕಾಣಿಸಿತ್ತು. ಅಂದರೆ ೧೯೨೦ ನೇ ಇಸವಿಯಲ್ಲಿ.

ಈ ಕಂಟ್ರೆಲ್ಸ್ ಕಾರಣದಿಂದ ಯು’ದ್ದ ವಿಮಾನಗಳು‌ ಸೈ’ನಿಕರಿಗೆ ಕಾಣಸಿಗುತ್ತಿತ್ತು, ಅದೇ ಕಾರಣದಿಂದ ಪೈಲಟ್ ಗಳು ಸೆ’ರೆಯಾಗುತ್ತಿದ್ದರು. ಅಲ್ಲದೇ ಈ ಕಂಟ್ರೆಲ್ಸ್ ಮೋಡದಿಂದ ಅನೇಕ ವಿಮಾನಗಳು ಒಂದಕ್ಕೊಂದು ತಾಗಿ ಅಪಘಾತ ಆಗಿದ್ದು ಉದಾಹರಣೆಗಳಿವೆ. ಕಾರಣ ಪೈಲಟ್ ಗಳಿಗೆ ಮುಂದೆ ಇರುವ ವಿಮಾನ‌ ಕಾಣದೇ‌ ಇರುವುದು.

Leave A Reply

Your email address will not be published.