ರಾಷ್ಟ್ರನೀತಿಯನ್ನು ಪಾಲಿಸುತ್ತಿರುವ ಏಕೈಕ ಪಕ್ಷ BJP ಆದರೂ ಜನ ವಿರೋಧಿಸುತ್ತಿರುವುದೇಕೆ??

1,418

ನಮ್ಮ ದೇಶದಲ್ಲಿ ಕೇವಲ ರಾಜಕಾರಣ ಆಗುತ್ತಿದೆ, ರಾಷ್ಟ್ರನೀತಿಯನ್ನು ಯಾರು ಕೂಡ ಪಾಲಿಸುತ್ತಿಲ್ಲ. ಅದನ್ನು ಪಾಲಿಸುತ್ತಿರುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ. ನಮ್ಮ ಜನ ಯಾವಾಗಲು ಜಪಾನ್, ಚೀನಾ ದೇಶಗಳ ಉದಾಹರಣೆ ಕೊಟ್ಟು ಭಾರತವನ್ನು ಜರೆಯುತ್ತಾರೆ. ಇಲ್ಲಿನ ಸಮಸ್ಯೆಯನ್ನು ಎತ್ತಿ ಹಿಡಿಯುತ್ತಾರೆ. ಆದರೆ ಜಪಾನ್ ಹಾಗು ಚೀನಾ ದೇಶಗಳ ಜನರು ಪಾಲಿಸುತ್ತಿರುವ ರಾಷ್ಟ್ರಧರ್ಮ ನಮ್ಮಲ್ಲೂ ಪಾಲಿಸಿ ಎಂದರೆ ಒಬ್ಬರು ತಯಾರಿಲ್ಲ. ಚೀನಾ ಹಾಗು ಜಪಾನ್ ದೇಶವನ್ನು ಬಲಿಷ್ಠ ಮಾಡಿದ್ದು ಅಲ್ಲಿನ ಜನರು. ಅವರ ಸಂವೇದನಾಶೀಲತೆ ಹಾಗು ರಾಷ್ಟ್ರ ಭಕ್ತಿ.

ನಮ್ಮ ದೇಶ ಸ್ವತಂತ್ರವಾಗಿ ೭೦ ವರ್ಷ ಕಳೆದರೂ ನಾವು ಮತ ನೀಡುವುದು ಅಂಬಾನಿ ಮನೆ ಮುಂದೆ ಕಾರಿನಲ್ಲಿ ಬಾಂಬ್ ಇಡುವವರಿಗೆ, ಪ್ರತಿ ತಿಂಗಳು ೧೦೦ ಕೋಟಿ ಹಫ್ತಾ ವಸೂಲಿ ಮಾಡುವ ಸರಕಾರಕ್ಕೆ ಹಾಗು ಜಾತ್ಯತೀತತೆ ಎಂದು ಹೇಳಿ ಕೇವಲ ಅಲ್ಪಸಂಖ್ಯಾತರ ಕಡೆ ಮಾತ್ರ ಒಲವು ತೋರಿಸಿ ತುಷ್ಟಿಕರಣ ಮಾಡುವ ರಾಜಕೀಯ ಪಕ್ಷಗಳಿಗೆ. ಪ್ರಸ್ತುತ ಕೇಂದ್ರ ಸರಕಾರ ತನಗೆ ಸಂವಿಧಾನ ನೀಡಿರುವ ಅಧಿಕಾರದ ಅಡಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಡುತ್ತಿದೆ, ರಾಜ್ಯ ಸರಕಾರಗಳಿಗೆ ಎಚ್ಚರಿಕೆ ಹಾಗು ಸಲಹೆಗಳನ್ನೂ ಕೊಡುತ್ತಿದೆ. ಆದರೆ ಕೆಲವು ರಾಜ್ಯ ಸರಕಾರಗಳು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಅರೋಗ್ಯ, ಶಿಕ್ಷಣ ಹಾಗು ಕಾನೂನು ವ್ಯವಸ್ಥೆ ರಾಜ್ಯ ಸರಕಾರಗಳ ಹಿಡಿತದಲ್ಲಿ ಬರುತ್ತದೆ.

ಈ ಕೊರೋನಾ ಸಂದರ್ಭದಲ್ಲಿ ಚುನಾವಣೆ ಬೇಕಾಗಿರಲಿಲ್ಲ, ಆದರೆ ಯಾವೊಂದು ವಿಪಕ್ಷಗಳು ಕೂಡ ಚುನಾವಣೆ ಬೇಡ ಅಂತ ಹೇಳಲಿಲ್ಲ. ಯಾವ ಪಕ್ಷಗಳು ಕೂಡ ಚುನಾವಣೆ ಬೇಡ ಎಂದು ಹೇಳದಿರುವಾಗ ಬಿಜೆಪಿ ಮಾತ್ರ ಯಾಕೆ ಬೇಡ ಹೇಳಿ ನಷ್ಟ ಮಾಡಿಕೊಳ್ಳಬೇಕು? ಚುನಾವಣೆ ಗೆದ್ದು ಮತ್ತೆ ಅಸಮರ್ಥ ಪಕ್ಷವನ್ನು ಗೆಲ್ಲಿಸಬೇಕೇ?

ಇದೆ ಮಾತನ್ನು ಅಮಿತ್ ಶಾ ಒಂದು ಸಂದರ್ಶನದಲ್ಲಿ ಹೇಳಿದ್ದು. ಅವಾಗಿಂದಲೇ ಈ ವಿಪಕ್ಷಗಳು ಚುನಾವಣಾ ರ್ಯಾಲಿ ಮಾಡುವುದನ್ನು ನಿಲ್ಲಿಸಿದ್ದು. ಕೇಂದ್ರ ಸರಕಾರ ಮನಸ್ಸು ಮಾಡಿದ್ದಾರೆ ಇನ್ನು ೧೫ ದಿನಗಳ ಲೊಕ್ಡೌನ್ ಮಾಡಿ ಪರಿಸ್ಥಿತಿ ನಿಯಂತ್ರಿಸಬಹುದಿತ್ತು ಎನ್ನುವುದಕ್ಕೆ ನನ್ನ ಸಹಮತವು ಇದೆ ಆದರೆ ಇದಕ್ಕಿಂತ ಮೊದಲಿನ ಲೊಕ್ಡೌನ್ ಸಮಯದಲ್ಲಿ ವಿಪಕ್ಷಗಳು ಮಾತ್ರ ಅಲ್ಲದೆ ಜನರು ಕೂಡ ಸರಕಾರವನ್ನು ಬೈದದ್ದು ನೀವು ನೋಡಬಹುದು. ವಿಪಕ್ಷಗಳು ಆರ್ಥಿಕತೆ, ನಿರುದ್ಯೋಗ, ಬಡತನ, ಪಲಾಯನ, ಹಸಿವು ಅಂತ ಕಿರುಚಾಡಿದ್ದು ನೀವು ನೋಡೀದ್ದೀರಿ. ಈ ಬಾರಿಯ ಲೊಕ್ಡೌನ್ ಮಾಡುವ ಒಂದು ವಾರ ಮುಂಚೆ ತನಕ ಕಳೆದ ಲೊಕ್ಡೌನ್ ನ ವಿರುದ್ಧ ಮಾತಾಡುತ್ತಿದ್ದರು.

 

Leave A Reply

Your email address will not be published.