2024ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಬಿಜೆಪಿ – 7 ಸಂಸದರಿಗೆ ಕೋಕ್?? ಯಾರ್ಯಾರಿಗೆ ಗೊತ್ತೇ?

410

ನಮಸ್ಕಾರ ಸ್ನೇಹಿತರೇ 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಸಂಸದರ ಪೈಕಿ 26 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರು.ಇದು ಕರ್ನಾಟಕದ ಮಟ್ಟಿಗೆ ದಾಖಲೆಯೇ ಸರಿ. ಈಗ ಇದೇ ರೀತಿ 2024ರ ಚುನಾವಣೆಗೆ ಈಗಿನಿಂದಲೇ ಕಣ್ಣಿಟ್ಟಿರುವ ಬಿಜೆಪಿ 2019ರ ಫಲಿತಾಂಶವನ್ನು ಪುನರ್ ಪ್ರತಿಷ್ಠಾಪಿಸುವಲ್ಲಿ ಸಿದ್ದತೆ ಆರಂಭಿಸಿದೆ.

ಬಿಜೆಪಿ ಪಕ್ಷದ ಆಂತರಿಕ ನಿಯಮಗಳ ಪ್ರಕಾರ 75ವರ್ಷ ಮೇಲ್ಪಟ್ಟವರಿಗೆ ಸ್ಪರ್ಧೆಗೆ ಅವಕಾಶವಿಲ್ಲ. ಅದೇ ರೀತಿ ಹೊಸಬರಿಗೆ, ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದೇ ಆದರೇ ಬಿಜೆಪಿ ಪಕ್ಷದ ಇಮೇಜ್ ಮತ್ತಷ್ಟು ಹೆಚ್ಚುತ್ತದೆ ಎಂಬ ಮಾತುಗಳು ಕೇಳಲಾರಂಭಿಸಿವೆ. ಈ ನಿಟ್ಟಿನಲ್ಲಿ ರಾಜ್ಯದ ಹಾಲಿ ಏಳು ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾದ ಸದಾನಂದ ಗೌಡ, ಚಿಕ್ಕಬಳ್ಳಾಪುರ ಸಂಸದರಾದ ಬಚ್ಚೇಗೌಡ, ಚಾಮರಾಜನಗರದ ಸಂಸದರಾದ ಶ್ರೀನಿವಾಸ ಪ್ರಸಾದ್, ಬಾಗಲಕೋಟೆ ಸಂಸದರಾದ ಗದ್ದಿಗೌಡರ್, ತುಮಕೂರು ಸಂಸದರಾದ ಬಸವರಾಜು, ವಿಜಯಪುರ ಸಂಸದರಾದ ರಮೇಶ್ ಜಿಗಜಿಣಗಿ, ಬೆಳಗಾವಿ ಸಂಸದೆ ಮಂಗಲಾ ಅಂಗಡಿಯವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಲಾಗಿದೆ. ಅವರ ಬದಲಾಗಿ ಆ ಕ್ಷೇತ್ರದಲ್ಲಿನ ಹೊಸ ಮುಖಗಳಿಗೆ ಟಿಕೇಟ್ ನೀಡಲು ಈಗಿನಿಂದಲೇ ಶೋಧ ಶುರುವಾಗಿದೆ ಎಂಬ ಮಾಹಿತಿ ಹೊರಬಂದಿದೆ. ಸಂಸದರು ಯಾರೇ ಆಗಲಿ, ದೆಹಲಿಯಲ್ಲಿ ಕರ್ನಾಟಕ ಹಾಗೂ ಕನ್ನಡದ ಪರ ಗಟ್ಟಿ ಕೂಗು ಕೇಳಿ ಬಂದರೇ ಸಾಕು ಎಂಬುದು ಸಾಮಾನ್ಯ ಕನ್ನಡಿಗನ ಅಭಿಪ್ರಾಯ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.