22 ವರ್ಷ ನಿಯತ್ತಿನಿಂದ ಕೆಲಸ ಮಾಡಿದಕ್ಕೆ ಸಿಕ್ಕಿತ್ತು ತಕ್ಕ ಬಹುಮಾನ. ಯಾವ ಕಂಪನಿ?

830

ಜೀವನದಲ್ಲಿ ಕಷ್ಟಗಳು ಅಡೆತಡೆಗಳು ಸಮಸ್ಯೆಗಳು ಬಂದೆ ಬರುತ್ತದೆ. ಆದರೆ ಕಷ್ಟಗಳನ್ನು ಎದುರಿಸಲು ಹಣದ ಅವಶ್ಯಕತೆ ಇರುತ್ತದೆ. ಇದನ್ನು ಹೊಂದಿಸಿ ಕೊಳ್ಳಲು ಕೆಲಸ ಎಂಬುವುದು ಬೇಕೆ ಬೇಕು. ಇತ್ತೀಚಿನ ದಿನಗಳಲ್ಲಿ ಜನರು ಒಂದೇ ಕೆಲಸ ನಂಬಿಕೊಂಡು ಕೂರುವುದಿಲ್ಲ ಬದಲಾಗಿ ಪದೇ ಪದೇ ಕೆಲಸ ಬದಲಾಯಿಸುತ್ತಾ ಇರುತ್ತಾರೆ. ಇದರಿಂದ ಅವರಿಗೆ ಒಳ್ಳೆಯ ಸಂಪಾದನೆ ಏನೋ ಆಗಬಹುದು ಆದರೆ ವೃತ್ತಿಯ ಕ್ಷೇತ್ರದಲ್ಲಿ ಇಮೇಜ್ ಹಾಳಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಂಸ್ಥೆಗಾಗಿ 22 ವರ್ಷಗಳ ದುಡಿದು ಅದನ್ನು ಮೆಲ್ಸ್ತರಕ್ಕೆ ತಂದಿದ್ದಾನೆ. ಅದಕ್ಕಾಗಿ ಕಂಪನಿಯು ಕೂಡ ಆತನನ್ನು ಬಿಡಲಿಲ್ಲ. ಆತ ನಂಬಲಾರದ ಗಿಫ್ಟ್ ಒಂದನ್ನು ಕೊಟ್ಟಿದೆ. ಹೌದು ಏನಿದು ವಿಚಾರ ಯಾವುದು ಆ ಕಾರ್ ಬನ್ನಿ ತಿಳಿಯೋಣ.

ಇವರ ಹೆಸರು ಅನಿಷ್ ಎಂದು. 22 ವರ್ಷಗಳಿಂದ ಅವರು ಬ್ಯುಸಿನೆಸ್ ಡೆವಲ್ಮೆಂಟ್ ಆಫೀಸರ್ ಆಗಿ ಕೆಲಸ ಮಾಡುತ್ತಾ ಇದ್ದರು. Myk ಎಂಬ ಕಂಪನಿಯಲ್ಲಿ ಇವರು ವೃತ್ತಿ ನಿರ್ವಹಿಸುತ್ತಾ ಇದ್ದರು. ಶಾಜಿ ಎಂಬವರ ಒಡೆತನಕ್ಕೆ ಸೇರಿದ ಈ ಕಂಪನಿಯಲ್ಲಿ ಅವರಿಗಾಗಿ 22 ವರ್ಷಗಳ ಕಾಲ ದುಡಿದಿದ್ದಾರೆ ಆನಿಷ್. ಆದರೆ ಇದಕ್ಕೆ ಉತ್ತರ ಎಂಬಂತೆ ಕಂಪನಿ ಕೂಡ ಅವರನ್ನು ಗೌರವಿಸಿದೆ.

ಕೇರಳ ಮೂಲದ ಇವರ ಕಂಪನಿ ರಿಟೇಲ್ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರುಕಟ್ಟೆ ಮಾಡುತ್ತದೆ. ಇದೆ ಕಂಪನಿಗೆ ಕಳೆದ 22 ವರ್ಷಗಳಿಂದ ಅನೀಶ್ ತಮ್ಮ ಸೇವೆಯನ್ನು ಸಲೀಸಾಗಿ ನಡೆಸುತ್ತಿದ್ದಾರೆ. ಅದೆಷ್ಟೇ ಪರ ವಿರೋಧಗಳು ನಡೆದರೂ ಇವರ ಕಂಪನಿ ಮಾತ್ರ ಇವರ ಕೈ ಬಿಡಲಿಲ್ಲ. ತಮ್ಮ 22 ವರ್ಷದ ಹಳೆಯ ಕೆಲಸಗಾರನಿಗೆ ಗುರುತಿಸಿ ಗೌರವಿಸಿದೆ. ಅನೀಶ್ ಎಂಬ ಇವರಿಗೆ ಕಂಪನಿಯ ಒಡೆಯ ಶಾಜಿ ಅವರು ಮರ್ಸಿಡಿಸ್ ಬೆಂಝ್ ಜಿ ಎಲ್ ಎ ಕ್ಲಾಸ್ 220 ಅನ್ನು ಗಿಫ್ಟ್ ರೂಪದಲ್ಲಿ ನೀಡಿದೆ . ಇದರ ಬೆಲೆ ಬರೋಬ್ಬರಿ 45 ಲಕ್ಷ ಆಗುತ್ತದೆ.

Leave A Reply

Your email address will not be published.