25 ವರ್ಷಗಳ ಹಿಂದೆ ಮಾಡಿದ್ದ ಒಂದು ಸಣ್ಣ ಕೆಲಸಕ್ಕೆ ಇಂದು ಅಮೆರಿಕಾ ಬಂದು ಸಹಾಯ ಹಸ್ತ ಚಾಚುವಂತೆ ಮಾಡಿದೆ.

806

ಮನುಷ್ಯ ಜೀವನ ಸಾರ್ಥಕತೆ ಕಾಣುವುದು ನಾವು ಮತ್ತೊಬ್ಬರ ಕಷ್ಟಕ್ಕೆ ಮಿಡಿದಾಗ ಮಾತ್ರ. ಕೃಷ್ಣ ಪರಮಾತ್ಮ ಕೂಡ ಇದೆ ವಿಷಯವನ್ನು ಹೇಳಿದ್ದ ಜೀವನದಲ್ಲಿ ಮತ್ತೊಬ್ಬರ ಖುಷಿಗೆ ಕಾರಣನಾಗು ನಿನ್ನ ಖುಷಿಗೆ ಮತ್ತೊಬ್ಬ ಕಾರಣನಾಗುತ್ತಾನೆ. ಅದೇನೇ ಇರಲಿ ಜೀವನ ಎಂದ ಮೇಲೆ ಮತ್ತೊಬ್ಬರ ನೋವಿಗೆ ಸ್ಪಂದಿಸಿದರೆ ಮಾತ್ರ ಆ ಬದುಕಿಗೆ ಬೆಲೆ. ಇಲ್ಲವಾದರೆ ಮನುಷ್ಯ ಜೀವನದಲ್ಲಿ ಹುಟ್ಟಿಯು ವ್ಯರ್ಥ ಎಂದರೂ ತಪ್ಪಾಗಾಲರದು. ಹೀಗೆ ಒಂದು ನಡೆದ ಘಟನೆ ಇಂದು ಸಹಾಯ ಹಸ್ತ ನೀಡಿದ್ದ ಕುಟುಂಬಕ್ಕೆ ಇಂದು ಕಷ್ಟ ಕಾಲದಲ್ಲಿ ನೆರವಾಗಿದೆ.

12 ವರ್ಷಗಳ ಹಿಂದೆ 2010 ರಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ಈ ಒಂದು ಘಟನೆ ಮತ್ತೆ ಸಾಬೀತು ಮಾಡಿದೆ ಮಾನವೀಯ ಮೌಲ್ಯಗಳಿಗೆ ಇನ್ನೂ ಬೆಲೆ ಇದೆ ಎಂದು. ಆ ಮಕ್ಕಳ ಹೆಸರು ಪ್ರಣವ್ ಮತ್ತು ಸುಚಿತ್ರಾ ಇವರು ಅಣ್ಣ ಮತ್ತು ತಂಗಿ. 12 ವರ್ಷಗಳ ಹಿಂದೆ ಇವರಿಬ್ಬರೂ ತಮ್ಮ ತಂದೆಯ ಜೊತೆಗೆ ತಿರುಗಾಡಲು ಹೋಗಿದ್ದಾಗ ಮಕ್ಕಳು ತಂದೆಯಲ್ಲಿ ಕಡಲೆಕಾಯಿ ಬೇಕು ಎಂದು ಹಠ ಹಿಡಿದು ಕೂಗಿದ್ದರು. ತಂದೆ ಎಲ್ಲಾ ಸವಲತ್ತು ಇದ್ದರೂ ಆ ದಿನ ತನ್ನ ಪರ್ಸ್ ಮನೆಯಲ್ಲೇ ಬಿಟ್ಟು ಬಂದಿದ್ದರು. ಕಿಸೆಯಲ್ಲಿ ಬೇರೆ ಯಾವುದೇ ಹಣ ಇದ್ದಿರಲಿಲ್ಲ. ಆದರೆ ಈ ಮಕ್ಕಳ ಮುಗ್ಧತೆ ಕಂಡು ಪೆದ್ದ ಸತ್ತಾಯ ಎನ್ನುವವರು ಮಕ್ಕಳಿಗೆ ಉಚಿತವಾಗಿ ಕಡಲೆ ಕಾಯಿ ಕೊಟ್ಟು ಹಣ ಬೇಡ ಮಕ್ಕಳು ತಿನ್ನಲಿ ಎಂದಿದ್ದರು.

ಆದರೆ ಮಕ್ಕಳು ನಾವು ಮುಂದೆ ದೊಡ್ಡವರಾದ ಮೇಲೆ ನಿಮ್ಮ ಬಳಿ ಬರುತ್ತೇವೆ ಎಂದಿದ್ದರು. ಮಕ್ಕಳು ಏನೋ ಹೇಳುತ್ತಾರೆ ಎಂದು ಅವರು ತುಸು ನಕ್ಕು ಮಕ್ಕಳನ್ನು ಕಳುಹಿಸಿದ್ದರು. ಆದರೆ ಇಂದು ಅವರು ಮಾಡಿದ ಸಹಾಯ ಅವರಿಗೆ ವರದಾನವಾಗಿದೆ. ಹೌದು ಪ್ರಣವ್ ಮತ್ತು ಸುಚಿತ್ರಾ ಅಮೆರಿಕಾದಲ್ಲಿ ನೆಲೆಸಿದ್ದು ಸ್ವಲ್ಪ ದಿನಗಳ ಹಿಂದೆ ಪೆದ್ದ ಸತ್ತಾಯಾ ಅವರು ತೀರಿಕೊಂಡ ವಿಚಾರ ಅವರಿಗೆ ತಿಳಿದು ಬಂದಿದೆ. ಈ ವಿಷಯ ತಿಳಿದ ಕೂಡಲೇ ಇಬ್ಬರು ಕೂಡ ಭಾರತಕ್ಕೆ ಆಗಮಿಸಿದ್ದಾರೆ.

ಸತ್ತಾಯ ಅವರ ಪತ್ನಿಗೆ 25000 ರೂಪಾಯಿ ಹಣವನ್ನು ಕೊಟ್ಟು ಜೀವನಕ್ಕೆ ಆಧಾರ ಆಗಿದ್ದಾರೆ. ಅವರ ಪತ್ನಿ ತುಂಬಾ ಖುಷಿ ಪಟ್ಟು ಮಾನವೀಯತೆ ನೆಲೆಯಲ್ಲಿ ಮಾಡಿದ್ದ ಸಹಾಯಕ್ಕೆ ಪ್ರತೀಕಾರ ಸಿಕ್ಕಿದ್ದು ಕಂಡು ಆನಂದ ಬಾಷ್ಪ ಹರಿಸಿದ್ದಾರೆ.ಅದೇನೇ ಇರಲಿ ಎಷ್ಟು ಕೊಟ್ಟಿದ್ದಾರೆ ಎನ್ನುವುದು ಮುಖ್ಯವಲ್ಲ ಮಾಡಿದ ಉಪಕಾರ ನೆನಪಿನಲ್ಲಿ ಇಟ್ಟುಕೊಂಡು ಹುಡುಕಿಕೊಂಡು ಬಂದು ಸಹಾಯ ಹಸ್ತ ಚಾಚಿರುವುದು ನಿಜಕ್ಕೂ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಕೆಲಸವಾಗಿದೆ.

Leave A Reply

Your email address will not be published.