3.5 ಕೋಟಿ ಸಂಬಳದ Netflix ಕೆಲಸ ಬಿಟ್ಟ ಭೂಪ. ಈತ ಕೊಟ್ಟ ಕಾರಣವೇನು ಗೊತ್ತ? ಇದಕ್ಕೆ ನೀವೇನನ್ನುತ್ತೀರೋ?

306

೩.೫ ಕೋಟಿ ಸಂಬಳ ಪ್ರತಿದಿನ ಉಚಿತ ಆಹಾರ, ಅನಿಯಮಿತ ರಜೆ, ಇದು ನೆಟ್ಫ್ಲಿಕ್ಸ್ ಅಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ನೀಡುವ ಕೆಲವು ಸೌಲಭ್ಯಗಳಾಗಿವೆ. ಇದು ನಮ್ಮ ನಿಮ್ಮಂಥವರಿಗೆ ಒಂದು ಡ್ರೀಮ್ ಜಾಬ್ ಎಂದರೆ ತಪ್ಪಾಗಲಾರದು. ಅನೇಕರು ಇಂತಹ ಕೆಲಸಕ್ಕೆ ಕಾಯುತ್ತ ಇರವುತ್ತಾರೆ. ಆದರೆ ಇಲ್ಲೊಬ್ಬ ಇಂತಹ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾನೆ. ಇವನು ಕೊಟ್ಟ ಕಾರಣ ಕೇಳಿದರೆ ನಗುವುದೋ ಅಳುವುದೋ ಗೊತ್ತಾಗಲ್ಲ. ಇದರ ಹಿಂದಿನ ಕಾರಣವೇನು ನೀವೇ ನೋಡಿ.

ಮೈಕ್ ಲಿನ್ ಎನ್ನುವ ವ್ಯಕ್ತಿ ಯುನೈಟೆಡ್ ಕಿಂಗ್ಡಮ್ ಅಲ್ಲಿ OTT ಪ್ಲಾಟ್ಫಾರ್ಮ್ ಆದ Netflix ಅಲ್ಲಿ ಇಂಜಿನಿಯರ್ ಆಗಿ ಸೇರಿಕೊಂಡವರು. ವರ್ಷಕ್ಕೆ ಇವರಿಗೆ ಸಿಗುತ್ತಿದ್ದ ಸಂಬಳ ೩.೫ ಕೋಟಿ. ೨೦೧೭ ರಲ್ಲಿ ಅಮೆಜಾನ್ ಅಲ್ಲಿ ಕೆಲಸ ಬಿಟ್ಟ ನಂತರ ನೆಟ್ಫ್ಲಿಸ್ ಕಂಪನಿ ಅಲ್ಲಿ ಹಿರಿಯ ಸಾಫ್ಟ್ವೇರ್ ಇಂಜಿನೀರ್ ಆಗಿ ಕೆಲಸ ಪಡೆದಿದ್ದರು. ಸೇರುವಾಗ ಇವರು ಪರ್ಮನೆಂಟ್ ಆಗಿ ನೆಟ್ಫ್ಲಿಸ್ ಅಲ್ಲಿಯೇ ಕೆಲಸ ಮಾಡುತ್ತಿರುತ್ತೇನೆ ಎಂದು ಭಾವಿಸಿದ್ದರಂತೆ. ಇದು ಸ್ವತಃ ಅವರೇ ಲಿನ್ಕಡೆನ್ ಅಲ್ಲಿ ಬರೆದುಕೊಂಡಿರುವಂತಹದು.

ಇವರು ಕೆಲಸ ಬಿಡಲು ಕಾರಣವೇನು ಗೊತ್ತೇ? ತಮ್ಮ ಆರಂಭಿಕ ದಿನಗಳಲ್ಲಿ ಇವರು ಕೆಲಸದ ಬಗ್ಗೆ ಸಾಕಷ್ಟು ಕಲಿತಿದ್ದಾರೆ ಅಂತೇ. ಈ ನೆಟ್ಫ್ಲಿಸ್ ಅಲ್ಲಿ ಕೆಲಸ ಮಾಡಿ ಗಳಿಸುವ ಹಣ ನಾವು MBA ಕಲಿಯಲು ಸಾಲ ಮಾಡುವಂತೆ ಎಂದು ಹೇಳಿದ್ದಾರೆ. ಅಷ್ಟೇ ಇದಕ್ಕೆ ಮಹತ್ವ. ಪ್ರತಿಯೊಂದು ಉತ್ಪನ್ನದ ನಿರ್ಧಾರದ ಬಗ್ಗೆ ಮೆಮೋಗಳನ್ನು ಕಂಪನಿ ಮಾಡಿತ್ತು. ಇದರಿಂದ ನಾನು ತುಂಬಾ ಕಲಿತಿದ್ದೇನೆ. ಆದರೆ ಕೆಲವೇ ವರ್ಷಗಳಲ್ಲಿ ಉತ್ಸಾಹ ಕಡಿಮೆಯಾಗುತ್ತ ಬಂತು. ಮನೆಯಿಂದಲೇ ಕೆಲಸ ಬಂದ ನಂತರ ನನಗೆ ಈ ಕೆಲಸವನ್ನು ಆನಂದಿಸಲು ಸಾಧ್ಯವಾಗಲೇ ಇಲ್ಲ. ಹಾಗಾಗಿ ನಾನು ಈ ಕೆಲಸದಿಂದ ಬೋರ್ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.