36 ವರ್ಷಗಳಿಗೊಮ್ಮೆ ಅರಳುವ ಈ ಹೂವು ಈ ಬಾರಿ ಹಿಮಾಲಯದ ತಪ್ಪಲಲ್ಲಿ ಅರಳಿದೆ? ಯಾವುದು ಆ ಹೂವು ಏನಿದರ ಮಹತ್ವ?
ಈ ಪ್ರಪಂಚವೇ ಒಂದು ರಹಸ್ಯ. ಇಲ್ಲಿ ನಡೆಯುವ ಕೆಲವು ಘಟನೆಗಳು ಎಂತವರನ್ನು ಅಚ್ಚರಿ ಪಡಿಸುತ್ತದೆ. ಅದರ ಹಿಂದಿನ ರಹಸ್ಯ ಕಾರಣಗಳನ್ನು ಭೆದಿಸಿದವರು ಯಾರು ಇಲ್ಲ. ಹಾಗೆ ಒಂದೊಮ್ಮೆ ಪ್ರಕೃತಿಗೆ ವಿರುದ್ಧ ಕಂಡುಹಿಡಿಯಲು ಪ್ರಯತ್ನಿಸಿದರು ಪ್ರಕೃತಿ ಅದಕ್ಕೆ ಬಿಡುವುದಿಲ್ಲ. ಹೌದು ಅದೆಷ್ಟೋ ರಹಸ್ಯಗಳು ಅಡಗಿರುವ ಈ ಹಿಮಾಲಯದ ತಪ್ಪಲಲ್ಲಿ ಈ ಪುಷ್ಪವು ಒಂದು ರಹಸ್ಯ. 36 ವರ್ಷಗಳಿಗೊಮ್ಮೆ ಅರಳುವ ಈ ಪುಷ್ಪದ ಹಿಂದಿನ ರಹಸ್ಯ ಇಂದಿಗೂ ರಹಸ್ಯವಾಗಿ ಉಳಿದಿದೆ.
ಅಂತಹುದೇ ಒಂದು ಅಚ್ಚರಿಯ ಘಟನೆ 36 ವರ್ಷದ ಬಳಿಕ ಮತ್ತೆ ನಡೆದಿದೆ. ಹೌದು ಹಿಮಾಲಯ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಆದರೆ ಇಲ್ಲಿಗೆ ಹೋಗುವುದು ಎಲ್ಲರ ಕನಸಾದರು ಎಲ್ಲರಿಗೂ ಇಲ್ಲಿ ಹೋಗುವ ಗುಂಡಿಗೆ ಬರುವುದಿಲ್ಲ. ಅದೆಷ್ಟೋ ರಹಸ್ಯಗಳನ್ನು ತನ್ನೊಳಗೆ ಅಡಗಿಸಿ ಇಟ್ಟಿರುವ ಹಿಮಾಲಯದ ತಪ್ಪಲು ಪರಶಿವನ ವಾಸ ಸ್ಥಾನ ಎಂದೇ ನಂಬಲಾಗಿದೆ. ಹೌದು ಪರ ಶಿವನಿಗೂ ಈ ಹಿಮಾಲಯಕ್ಕೆ ಬಹಳ ದೊಡ್ಡ ನಂಟು. ಶಿವನಿಂದ ಈ ಹಿಮಾಲಯ ಪರ್ವತ ಇಂದಿಗೂ ನಿಂತಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಹೌದು ಹಾಗಾದರೆ ಶಿವನಿಗೂ ಈ 36 ವರ್ಷದ ಬಳಿಕ ಅರಳಿರುವ ಹೂವಿಗು ಏನು ಸಂಬಂಧ . ಸಂಬಂಧ ಖಂಡಿತಾ ಇದೆ ಅದು ಏನೆಂದು ತಿಳಿಯೋಣ.
ಶಿವನ ಕೊರಳಲ್ಲಿರುವ ನಾಗಾನಿಗು ಈ ಪುಷ್ಪಕ್ಕು ಸಂಬಂಧ ಇದೆ. 36 ವರ್ಷದ ಬಳಿಕ ಅರಳಿದ ಈ ಹೂವು ಮತ್ಯಾವುದೇ ಅಲ್ಲ ಅದು “ನಾಗ ಪುಷ್ಪ” ಹೌದು ಅತೀ ವಿರಳ ವಾಗಿ 36 ವರ್ಷಕ್ಕೊಮ್ಮೆ ಅರಳುವ ಈ ಹೂವು ಜನರನ್ನು ಆಕರ್ಷಿಸುತ್ತದೆ. ನೋಡಲು ಶೇಷ ನಾಗನ ರೂಪದಲ್ಲಿದ್ದು. ಹಾವು ಹೆಡೆ ಬಿಚ್ಚಿ ನಿಂತ ರೂಪದಲ್ಲಿ ಇದು ಕಾಣುತ್ತದೆ. ಹೌದು ಇದನ್ನು ಪರಶಿವನ ಕೋರಳಲ್ಲಿರುವ ಸರ್ಪ ಎಂದೇ ನಂಬಲಾಗುತ್ತದೆ. ಹಿಮಾಲಯದ ತಪ್ಪಲಲ್ಲಿ ಮಾತ್ರ ಕಾಣ ಸಿಗುವ ಈ ಪುಷ್ಪ ಎಲ್ಲರ ಮನಸ್ಸನ್ನೂ ಆಕರ್ಷಿಸುತ್ತಿದೆ.