69 ನೇ ವಯಸ್ಸಿನಲ್ಲಿ ತನ್ನದೇ ಕೋಟಿ ಬೆಲೆ ಬಾಳುವ ಬ್ರಾಂಡ್ ಸ್ಥಾಪಿಸಿದ ಮಹಿಳೆ. ಇವರು ಪ್ರಾರಂಭ ಮಾಡಿದ ಉದ್ಯಮವೇನು?

1,060

೬೮ ವಯಸ್ಸಿಗೆ ನಿವೃತ್ತಿ ಆದರೆ ಸಾಕು ಆಮೇಲೆ ಆರಾಮವಾಗಿ ಕಾಲಕಳೆಯಬಹುದು ಎಂದು ಅನೇಕರು ಚಿಂತಿಸುದ್ದಿದ್ದರೆ. ಅದು ಬಿಡಿ ನಮ್ಮ ೨೫-೩೦ ವರ್ಷದ ಯುವಕ ಯುವತಿಯರೇ ದುಡಿಯಲು ಪ್ರೋತ್ಸಾಹ ತೋರುತ್ತಿಲ್ಲ ಅಂತದರಲ್ಲಿ ಈ ೬೯ ವರ್ಷದ ಮಹಿಳೆ ತನ್ನ ನಿವೃತ್ತಿ ವಯಸ್ಸಿನಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಿ ಇಂದು ದೊಡ್ಡ ಬ್ರಾಂಡ್ ಅನ್ನೇ ತಯಾರಿಸಿದ್ದಾರೆ. ರಾಧಾ ಎನ್ನುವ ಈ ಮಹಿಳೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವ ರೆಡಿ ಟು ಈಟ್ ಪ್ಯಾಕ್ ಮಾಡಿದ ಆಹಾರವನ್ನು ತಯಾರು ಮಾಡುವವರು ಈ ರಾಧಾ. ಇಂದು ಇವರ ವಯಸ್ಸು ೭೮ ವರ್ಷ.

ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುವ ಸಾಮಾನ್ಯರಿಗೆ ಈ ಫುಡ್ ಸ್ಟಾರ್ಟ್ ಅಪ್ ಇಂದ ತಯಾರಾಗೋ ತ್ರಿಗುಣಿ ಫುಡ್ಸ್ ಎನ್ನುವ ಆಹಾರ ಸವಿದಿರಲೇ ಬೇಕು. ರಾಧಾ ಅವರು ತ್ರಿಗುಣಿ ಇಸ್ ಈಟ್ಸ್ ಎಂಬ ಕಂಪನಿ ನಡೆಸುತ್ತಿದ್ದಾರೆ. ಇಂದು ಇಂದು ತ್ರಿಗುಣಿ ಫುಡ್ಸ್ ಎಂದು ಪ್ರಸಿದ್ಧವಾಗಿದೆ. ಬ್ರಾಂಡ್ ಒಂದು ದಶಕದಷ್ಟು ಹಳೆಯದಾದರೂ ಸಹ ಇಂದು ಕೂಡ ದಿನನಿತ್ಯ ಕೆಲಸಕ್ಕೆ ಹೋಗುತ್ತಾರೆ. ಇದಕ್ಕಿಂತ ಮೊದಲು ಅನೇಕ ವ್ಯವಹಾರ ಶುರು ಮಾಡಿದ್ದರು ಕೂಡ ಕೈ ಹಿಡಿಯಲಿಲ್ಲ. ಕೊನೆಗೆ ಈ ಆರೋಗ್ಯಕರ ಹಾಗು ಯಾವುದೇ ಸಂರಕ್ಷಕಗಳಿಲ್ಲದ ಪ್ಯಾಕೆಜ್ಡ್ ಆಹಾರಗಳ ಮೂಲಕ ಯಶಸ್ಸನ್ನು ಪಡೆದರು.

ರಾಧಾ ಅವರು ಬಾಲ್ಯದ ಸಮಯದಲ್ಲಿ ಅವರ ತಾಯಿ ಇವರಿಗೆ ತೋಟಗಾರಿಕೆ ಅಡುಗೆ ಹಾಗು ನೇಯ್ಗೆ ಬಗೆಗಿನ ಪುಸ್ತಕಗಳನ್ನು ನೀಡುತ್ತಿದ್ದರು. ಅದನ್ನು ರಾಧಾ ಅವರು ಗಂಟೆಕಟ್ಟಲೆ ಓದುತ್ತಿದ್ದರು. ಬಾಲ್ಯದಲ್ಲಿ ಅಡುಗೆ ಮನೆ ಕಡೆ ಜಾಸ್ತಿ ಹೋಗದೆ ಇದ್ದರು ಕೂಡ ಅಡುಗೆಯ ಬಗ್ಗೆ ತುಂಬಾ ಒಲವನ್ನು ಹೊಂದಿದ್ದರು. ರಾಧಾ ಅವರು ಟ್ರಾವೆಲ್ ಏಜನ್ಸಿ ಅಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರ ೪೦ ನೇ ವಯಸಿನಲ್ಲಿ ಕೆಲಸ ತೊರೆದು ತಮ್ಮ ಸ್ವಂತ ಉದ್ಯಮ ಪ್ರಾರಂಭಿಸಲು ನಿರ್ಧರಿಸಿದರು. ೧೯೮೭ ರಲ್ಲಿ ಜವಳಿ ರಫ್ತು ಮಾಡುವ ಕಂಪನಿ ಪ್ರಾರಂಭಿಸಿದರು.ಆ ಕಂಪನಿ ಹೆಸರು ಚಿಮಿಸ್ ಎಸ್ಪಿಯೊರ್ಟ್ಸ್ ಎಂದು ಹೆಸರಿಟ್ಟರು. ಇದು ಅವರಿಗೆ ತುಂಬಾ ಯಶಸ್ಸು ಕೊಟ್ಟಿತು. ಅದೇ ರೀತಿ ಬಟ್ಟೆ ಸರಿ ಇಲ್ಲ ಎಂದು ಯಾವುದೇ ಬಟ್ಟೆ ಹಿಂದೆ ಬಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದರ ಯಶಸ್ಸಿನ ನಂತರ ಅವರು ಆಹಾರದ ಉದ್ಯಮ ಪ್ರಾರಂಭಿಸಬೇಕು ಎಂದು ಕನಸು ಕಾಣುತ್ತ್ತಿದ್ದರು. ಅದರಲ್ಲಿ ಯಾವುದೇ ಉದ್ಯಮ ಮಾಡಿದರು ಯಶಸ್ಸು ಖಂಡಿತ ಸಿಗುತ್ತದೆ ಎಂದು ಅವರು ನಂಬಿದ್ದರು. ಅದೇ ರೀತಿ ರೆಡಿ ಟು ಈಟ್ ಎನ್ನುವ ಪ್ಯಾಕ್ ಮಾಡಿದ ಆಹಾರ ದ ಪರಿಕಲ್ಪನೆ ಮೂಲಕ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾರಾಟ ಮಾಡುವ ಉದ್ಯಮ ಪ್ರಾರಂಭಿಸಿದರು. ೨೦೧೦ ರಲ್ಲಿ ಅಂದರೆ ತಮ್ಮ ೬೯ ನೇ ವಯಸ್ಸಿನಲ್ಲಿ ತಮ್ಮ ಗಾರ್ಮೆಂಟ್ ನ ಸಣ್ಣ ಕೊನೆಯಲ್ಲಿ ತ್ರಿಗುಣಿ ಈಟ್ಸ್ ಎನ್ನುವ ಫುಡ್ ಕಂಪನಿ ಪ್ರಾರಂಭಿಸಿದರು. ಇವರ ಮುಖ್ಯ ಗ್ರಾಹಕರು ಇಂಡಿಗೋ ಏರ್ಲೈನ್ಸ್ ಆಗಿದೆ. ಇವರ ಲಾಭದ ಶೇಕಡಾ ೮೦ ರಷ್ಟು ಇಂಡಿಗೋ ಇಂದ ಬರುತ್ತಿದೆ.

ಪ್ರಸ್ತುತ ಇವರ ಬಳಿ ೧೫ ಬೇರೆ ಬೇರೆ ಬಗೆಯ ಆಹಾರದ ವಿಧಗಳಿವೆ. ಇದು ಸುಮಾರು ೬ ತಿಂಗಳು ಶೆಲ್ಫ್ ತನಕ ಹಾಳಾಗದೆ ಇರುತ್ತದೆ. ಇವರ ಈ ಫುಡ್ ಐಟಂ ಭಾರತಾದ್ಯಂತ ಲಭ್ಯವಿದೆ. ಇವರ ಒಂದು ಪೊಟ್ಟಣದ ಬೆಲೆ ೮೦-೧೨೦ ರವರೆಗೆ ಇದೆ. ಇದನ್ನು ಅಮೆಜಾನ್ ಅಥವಾ ಅವರ ಕಂಪನಿ ವೆಬೈಸೈಟ್ https://ezeeats.com/ ಮೂಲಕ ಖರೀದಿ ಮಾಡಬಹುದಾಗಿದೆ. ಅವರಿಗೆ ೭೮ ವರ್ಷ ವಯಸಾಗಿದ್ದರು ಕೂಡ ಇಂದಿಗೂ ಅದೇ ಉತ್ಸಾಹದಿಂದ ಈ ವ್ಯಾಪಾರದ ಅಡುಗೆ ಕೆಲಸ ಮಾಡುತ್ತಾರೆ. ಇವರಿಗೆ ಈ ಅಡುಗೆ ಮಾಡುವುದು ಒಂದು ಉತ್ಸಾಹವಂತೆ ಆ ಕೆಲಸ ಮಾಡಲು ಅವರಿಗೆ ಅವಕಾಶ ಸಿಕ್ಕಿರುವುದು ಬಹಳ ಸಂತಸದ ವಿಷಯ ಎಂದು ಹೇಳಿದ್ದಾರೆ.

Leave A Reply

Your email address will not be published.