9 ವರ್ಷದ ಸಹೋದರಿ, 14 ವರ್ಷದ ಅಣ್ಣ ಇಬ್ಬರು ಸೇರಿ ಕ್ರಿಪ್ಟೋ ಮೈನಿಂಗ್ ಮಾಡಿ ಕೋಟಿ ಕೋಟಿ ಹಣ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ?

2,406

ಕ್ರಿಪ್ಟೋ ಕರೆನ್ಸಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿದಿನ ಒಂದಲ್ಲ ಒಂದು ಸುದ್ದಿ ಬರುತ್ತಲೇ ಇರುತ್ತದೆ. ಅನೇಕ ಜನ ಈ ಕ್ರಿಪ್ಟೋ ಮೈನಿಂಗ್ ಮಾಡುವ ಮೂಲಕ ಹಣ ಗಳಿಸಿದ್ದಾರೆ. ಕೆಲವರಂತೂ ಇದರಿಂದಲೇ ಯಾವುದೇ ಕೆಲಸ ಮಾಡದೇ ಶ್ರೀಮಂತರಾದ ಉದಾಹರಣೆ ಕೂಡ ಇದೆ. ಇದರ ಲಿಸ್ಟ್ ಅಲ್ಲಿ ಚಿಕ್ಕ ಮಕ್ಕಳು ಕೂಡ ಹಿಂದೆ ಬಿದ್ದಿಲ್ಲ. ಮಕ್ಕಳ ಲಿಸ್ಟ್ ಮಾಡಿದರೆ ಅನೇಕ ಮಕ್ಕಳು ಕ್ರಿಪ್ಟೋ ಮೂಲಕ ಹಣ ಗಳಿಸುತ್ತಿದ್ದಾರೆ. ಇದರಲ್ಲಿ ಶ್ರೀಮಂತರಾದವರು ಇದ್ದಾರೆ ಹಾಗೇನೇ ಬಡವರಾದವರು ಇದ್ದಾರೆ.

ಅಮೇರಿಕಾದಲ್ಲಿ ಇರುವಂತಹ ಭಾರತೀಯ ಮೂಲದ ೧೪ ವರ್ಷದ ಇಶಾನ್ ಥಾಕುರ್ ಹಾಗು ಆ ಹುಡುಗನ ೯ ವರ್ಷದ ತಂಗಿ ಅನನ್ಯ ಥಾಕುರ್ ಈ ಕ್ರಿಪ್ಟೋ ಮೂಲಕ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದಾರೆ. ಕಳೆದ ಏಳು ತಿಂಗಳಲ್ಲಿ ಇಬ್ಬರು ಸೇರಿಸಿ ೧ ಕೋಟಿ ೧೯ ಲಕ್ಷ ರೂಪಾಯಿ ಗಳಿಸಿದ್ದಾರೆ. ಅಕ್ಟೋಬರ್ ಒಂದೇ ತಿಂಗಳಲ್ಲಿ ಈ ಇಬ್ಬರು ಸೇರಿ ೪೭ ಲಕ್ಷದ ೬೭ ಸಾವಿರ ರೂಪಾಯಿಗಳಷ್ಟು ಹಣ ಗಳಿಸಿದ್ದಾರೆ. cnbc ಚಾನೆಲ್ ನ ವರದಿ ಪ್ರಕಾರ ಸಹೋದರ ಅಮೇರಿಕಾದ ಟೆಕ್ಸಾಸ್ ಅಲ್ಲಿ ಹೈಸ್ಕೂಲ್ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ತಂಗಿ ನಾಲ್ಕನೇ ತರಗತಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ತಮ್ಮ ರಜಾ ದಿನಗಳಲ್ಲಿ ಈ ಇಬ್ಬರು ಮಕ್ಕಳು ಬಿಟ್ ಕಾಯಿನ್ ಹಾಗು ಎಥೆರೀಯಂ ಎನ್ನುವ ಕ್ರಿಪ್ಟೋ ಮೈನ್ ಮಾಡುತ್ತಿದ್ದರು. ಮೊದಲ ದಿನ ಕೇವಲ ೨೨೩ ರೂಪಾಯಿಗಳಷ್ಟೇ ಗಳಿಸಿದರು. ಮುಂದೆ ಮುಂದೆ ಹೋಗುತ್ತಾ ಇವರಿಬ್ಬರು ಹೆಚ್ಚು ಹೆಚ್ಚು ಹಣ ಗಳಿಸಲು ಪ್ರಾರಂಭಿಸಿದರು.ಇಶಾನ್ ಪ್ರಕಾರ ಈ ಕ್ರಿಪ್ಟೋ ಮಾಹಿತಿ ಅವರಿಗೆ ಯೌಟ್ಯೂಬ್ ಹಾಗು ಇಂಟರ್ನೆಟ್ ಮೂಲಕ ಸಿಗುತ್ತಿತ್ತು ಅದನ್ನು ನೋಡಿ ಈ ಮೈನಿಂಗ್ ಪ್ರಾರಂಭಿಸಿದರಂತೆ. ಇವರಿಬ್ಬರು ಈ ಕ್ರಿಪ್ಟೋ ಮೈನಿಂಗ್ ಮಾರ್ಚ್ ೨೦೨೧ ರಲ್ಲಿ ಪ್ರಾರಂಭಿಸಿದರಂತೆ.

ಮೊದಲ ತಿಂಗಳು ಕೇವಲ ೩ ಡಾಲರ್ ಅಂದರೆ ಭಾರತದ ೨೨೫ ರೂಪಾಯಿಗಳಷ್ಟೇ ಗಳಿಸಿದರು. ಮೊದಲ ತಿಂಗಳ ಕೊನೆವರೆಗೆ ಇವರು ೭೪ ಸಾವಿರ ದಷ್ಟು ಹಣ ಗಳಿಸಿದರಂತೆ. ಏಪ್ರಿಲ್ ೨೦೨೧ ರಲ್ಲಿ ಇವರಿಬ್ಬರದ್ದೇ ಫ್ಲಿಕರ್ ಟೆಕ್ನಾಲಜಿ ಎನ್ನುವ ಕಂಪನಿ ಶುರು ಮಾಡಿದರು. ತಮ್ಮ ಉದ್ಯಮ ಬೆಳೆಸಲು ಇನ್ನು ಹೆಚ್ಚಿನ ಶ್ರಮ ಪಡುತ್ತಿದ್ದಾರೆ. ಇಂದು ಕೋಟಿ ಗಟ್ಟಲೆ ಹಣ ಸಂಪಾದಿಸಿದರು ಕೂಡ ಅವರಿಗೆ ಶುರುವಿನಲ್ಲ ಸಂಪಾದಿಸುತ್ತಿದ್ದ ೨೨೩ ರೂಪಾಯಿ ಗಳಿಸಿದಾಗ ಎಷ್ಟು ಹೆಮ್ಮೆ ಇತ್ತೋ ಇಂದು ಕೂಡ ಅಷ್ಟೇ ಇದೆ ಎನ್ನುತ್ತಾರೆ ಇಶಾನ್ ಥಾಕುರ್. ಈ ಆರ್ಟಿಕಲ್ ಕೇವಲ ಮಾಹಿತಿ ಗೆ ನೀಡಿದ್ದು ಇದು ಯಾವುದೇ ಕ್ರಿಪ್ಟೋ ಗೆ ಇನ್ವೆಸ್ಟ್ಮೆಂಟ್ ಮಾಡಲು ನಾವು ಹೇಳುತ್ತಿಲ್ಲ.

Leave A Reply

Your email address will not be published.