Entertainment

OTT Platform: ಸಿನೆಮಾ ಕುರಿತು ಎತ್ತಿದ ಕಳವಳಕ್ಕೆ ಸರಕಾರ ಸಹಾಯಸ್ತ ಚಾಚಿದೆ. ಬರಲಿದೆ ಸರಕಾರಿ ಸ್ವಾಮ್ಯದ ಸ್ವಂತ OTT.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊನ್ನೆ ಮಂಡಿಸಿದ ಬಜೆಟ್ ಅಲ್ಲಿ ಸರಕಾರಿ ಸ್ವಾಮ್ಯದ OTT ವೇದಿಕೆ ತರಲು ಅನುಮತಿ ನೀಡಿದ್ದಾರೆ. ಕರ್ನಾಟಕ ರಾಜ್ಯದ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಸರಕಾರ ಕೈಗೊಂಡಿದೆ. ಕನ್ನಡದ ಹೆಸರಾಂತ ನಂತರದ ರಕ್ಷಿತ್ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಅಲ್ಲದೆ ಅನೇಕ ನಟರು OTT ಬಗೆಗಿನ ಕಳವಳ ವ್ಯಕ್ತ ಪಡಿಸಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಈ ನಿರ್ಧಾರ ಕೈಗೊಂಡಿದೆ.

OTT ಪ್ಲಾಟ್ಫಾರ್ಮ್ ಗಳಾದ NETFLIX ಹಾಗು ಪ್ರೈಮ್ ಅಲ್ಲದೆ ಇನ್ನು ಅನೇಕ OTT ಗಳು ಕನ್ನಡ ಸಿನೆಮಾ ವನ್ನು ಖರೀದಿ ಮಾಡುವ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇದರಿಂದ ಕನ್ನಡ ಭಾಷೆಗಳ ಸಿನೆಮಾಗಳು ಈ ದೈತ್ಯ OTT ಗಳಲ್ಲಿ ಕಾಣಸಿಗುತ್ತಿಲ್ಲ. ಇದೀಗ ಕರ್ನಾಟಕ ಸರಕಾರ ತನ್ನದೇ ಸ್ವಂತ OTT ತರುತ್ತಿದ್ದು 3 ಕೋಟಿ ಗಳಷ್ಟು ಹಣ ಬಜೆಟ್ ಸಮಯದಲ್ಲಿ ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಸಂಸ್ಕೃತಿ ಹಾಗು ಪರಂಪರೆಗಳ ಬಗ್ಗೆ ಸಿನೆಮಾ ಜಗತ್ತಿಗೆ ತೋರಿಸುತ್ತದೆ. ಆದ್ದರಿಂದ ಇಲ್ಲಿನ ನಿರ್ದೇಶಕರು ಹಾಗು ನಂತರ ಸಿನೆಮಾ ಕೌಶಲ್ಯಗಳು ಕೂಡ ಎಲ್ಲರಿಗು ಈ ಹೊಸ OTT ಮೂಲಕ ತಿಳಿಸಲು ಸಾಧ್ಯವಾಗಲಿದೆ. ಅಲ್ಲದೆ ಇದು ಕನ್ನಡಿಗರಿಗೆ ಕೈಗೆಟಕುವ ದರದಲ್ಲಿ ಕೂಡ ಸಿಗಲಿದೆ.

ott

OTT ಮಾತ್ರವಲ್ಲದೆ ರಾಜ್ಯದಲ್ಲಿ ಫಿಲಂ ಸಿಟಿ ಮಾಡಲು ಸರಕಾರ ನಿರ್ಧರಿಸಿದೆ. ಇದನ್ನು ಮೈಸೂರ್ ಅಲ್ಲಿ 500 ಕೋಟಿ ವೆಚ್ಚದಲ್ಲಿ ಕಟ್ಟಲು ಎಲ್ಲ ತಯಾರಿ ನಡೆದಿದೆ. ಇದಕ್ಕಾಗಿ 150 ಎಕರೆ ಜಾಗ ಕೂಡ ನೀಡಲಾಗುತ್ತದೆ. ಇದಲ್ಲದೆ ಒಂದು ಮುಲ್ಟಿಫ್ಲೆಸ್ ಕಾಂಪ್ಲೆಕ್ಸ್ ಕೂಡ 2.5 ಎಕರೆ ಅಲ್ಲಿ ಕಟ್ಟಲಾಗುವುದು. ಇದು ಬೆಂಗಳೂರಿನ ನಂದಿನಿ ಲೇಔಟ್ ಅಲ್ಲಿ ಇರಲಿದೆ.

Leave a Reply

Your email address will not be published. Required fields are marked *