ಬುಲ್ಡೋಜರ್ ಬಾಬಾ ಪರ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್! ಅಷ್ಟಕ್ಕೂ ಸುಪ್ರೀಂ ಕೋರ್ಟ್ ಹೇಳಿದ್ದೇನೆ?

405

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಬುಲ್ಡೋಜರ್ ಕಾರ್ಯಾಚರಣೆ ಎಲ್ಲಿದೆ ಸದ್ದು ಮಾಡಿತ್ತು. ಯಾರೇ ಆಗಲಿ ಕಾನೂನು ವಿರುದ್ಧವಾಗಿ ಕಾನೂನು ಉಲ್ಲಂಘನೆ ಕಾರ್ಯ ಕೆಲಸ ಮಾಡಿದಲ್ಲಿ ಅಕ್ರಮವಾಗಿ ಅವರು ನಿರ್ಮಿಸಿದ ಆಸ್ತಿಪಾಸ್ತಿಗಳನ್ನು ಬುಲ್ಡೋಸರ್ ಮುಖಾಂತರವಾಗಿ ಕೆಡವಿ ಹಾಕಲಾಗುತ್ತಿತ್ತು. ಇದರ ಪರವಿರೋಧ ಬಹಳಷ್ಟು ಚರ್ಚೆಗಳು ಆಗುತ್ತಲೇ ಇತ್ತು. ಇದರ ವಿರುದ್ಧವಾಗಿ ಕೆಲವರು ಕೋರ್ಟ್ ಮೆಟ್ಟಿಲನ್ನು ಕೂಡ ಏರಿದ್ದರು.

ಆದರೆ ಇದೀಗ ಸುಪ್ರೀಂ ಕೋರ್ಟ್ ಈ ವಿಚಾರವಾಗಿ ತೀರ್ಪು ನೀಡಿದ್ದು, ಬುಲ್ಡೋಜರ್ ಬಾಬಾಪರ ಬ್ಯಾಟ್ ಬೀಸಿದೆ. ಅಕ್ರಮವಾಗಿ ಯಾವುದೇ ಕಟ್ಟಡಗಳಾಗಲಿ ಅಥವಾ ಧಾರ್ಮಿಕ ಕೇಂದ್ರಗಳಾಗಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡಿದ್ದರೆ ಅದನ್ನು ಕೆಡವಿ ಹಾಕುವಲ್ಲಿ ಹಿಂದೆ ಮುಂದೆ ನೋಡದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಮುಲ್ಡೋಜರ್ ಬಾಬಾ ವಿರುದ್ಧವಾಗಿ ಮುಖದ್ದಮೆ ಹೂಡಿದ್ದವರಿಗೆ ಬಾರಿ ಮುಖಭಂಗವಾಗಿದೆ.

ಸುಪ್ರೀಂ ಕೋರ್ಟ್ ನನ್ನ ತೀರ್ಪಿನಲ್ಲಿ ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ಎಲ್ಲಾ ಧರ್ಮಗಳಿಗೂ ಸಮಾನವಾದ ಹಕ್ಕು ಇದೆ, ಆದರೆ ಸರ್ಕಾರಿ ಭೂಮಿ ಮಾತ್ರ ಸರ್ಕಾರದ ಸೊತ್ತಾಗಿದ್ದು, ಅದನ್ನು ಅತಿಕ್ರಮಿಸಿ ಯಾವುದೇ ರೀತಿ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಕಟ್ಟುವಂತಿಲ್ಲ. ಜನರ ಅನುಕೂಲತೆಗಾಗಿ ಸರ್ಕಾರಿ ಜಾಗ ಬಳಕೆಯಾಗಬೇಕು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ನೇರವಾಗಿ ಅಥವಾ ಪರೋಕ್ಷವಾಗಿ ಬುಲ್ಡೋಜರ್ ಬಾಬಾ ಅವರ ಕಾರ್ಯಾಚರಣೆ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

Leave A Reply

Your email address will not be published.