ATM ಇಂದ ೧೦,೦೦೦ ಕ್ಕಿಂತ ಅಧಿಕ ಹಣ ಡ್ರಾ ಮಾಡಲು ಇನ್ನು ಮುಂದೆ ಮೊಬೈಲ್ ಬೇಕೆ ಬೇಕು. SBI ನೀಡಿದ ಸೂಚನೆ ನೀವು ನೋಡಲೇ ಬೇಕು.

305

ಭಾರತ ಕೋಟ್ಯಾಂತರ ಜನಸಂಖ್ಯೆ ಹೊಂದಿರುವ ದೇಶ. ಇಲ್ಲಿನ ಜನಸಂಖ್ಯೆ ಅನುಗುಣವಾಗಿ ಬ್ಯಾಂಕುಗಳು ಸಂಖ್ಯೆ ಕೂಡಾ ಅಧಿಕವಾಗಿದೆ. ಸರಕಾರ ಹಾಗು ಖಾಸಗಿ ಸಾಮ್ಯದ ಬ್ಯಾಂಕುಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದಲ್ಲದೆ ಭಾರತದ ಬ್ಯಾಂಕುಗಳಲ್ಲಿ ಕೆಲವು ಉತ್ತಮ ಲಾಭ ಗಳಿಸಿದರೆ ಕೆಲ ಸರಕಾರಿ ಬ್ಯಾಂಕುಗಳು ನಷ್ಟದಲ್ಲಿವೆ. ಆದರೆ ಭಾರತದ ಅತೀ ದೊಡ್ಡ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಲಕ್ಕನುಗುಣವಾಗಿ ಒಂದೊಂದು ನಿಯಮ ಜಾರಿಗೆ ತರುತ್ತಾ ಇದೆ. ಈಗಲೂ ಒಂದು ಹೊಸ ನಿಯಮ ತಮ್ಮ ಗ್ರಾಹಕರಿಗೆ ನೀಡಿದೆ ಅದೇನದು? ಇಲ್ಲಿದೆ ನೋಡಿ.

ಇತ್ತೀಚೆಗೆATM ನಲ್ಲಿ ಹಣ ತೆಗೆಯುವಾಗ ಅನೇಕ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅದೇ ಕಾರಣಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಐಡಿಯಾದೊಂದಿಗೆ ಬಂದಿದೆ. ಇನ್ನು ಮುಂದೆ ಹಣ ತೆಗೆಯಲು ಹೋಗುವಾಗ ಗ್ರಹಕರು ಹತ್ತು ಸಾವಿರಕ್ಕಿಂತ ಅಧಿಕ ಹಣ ತೆಗೆಯುವುದಾದರೆ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ಹಾಕಿದರೆ ಮಾತ್ರ ಈ ಹಣ ತೆಗೆಯಬಹುದಾಗಿದೆ. ಇದು ಒಂದು ಟ್ರಾನ್ಸಾಕ್ಷನ್ ಗೆ ಮಾತ್ರ ಸೀಮಿತವಾಗಿದೆ. ಇನ್ನೊಂದು ಬಾರಿ ಹಣ ತೆಗೆಯುವುದಾದರೆ ಮತ್ತೊಮ್ಮೆ ಇದೇ ಪ್ರಕಾರ ಹಣ ತೆಗೆಯಬೇಕಾಗುತ್ತದೆ.

ಇದು ಹತ್ತು ಸಾವಿರಕ್ಕಿಂತ ಅಧಿಕ ನಗದು ತೆಗೆಯುವುದಕ್ಕೆ ಮಾತ್ರ ಸೀಮಿತ ಎಂದು ಈಗ ಬಂದಿರುವ ಮಾಹಿತಿ ಪ್ರಕಾರ ತಿಳಿದುಬಂದಿದೆ. ಅಲ್ಲದೆ ಈ ನಿಯಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಮಾತ್ರ ಮುಂದೆ ಬರಲಿದೆ. ಮುಂದೆ ಬೇರೆ ಬ್ಯಾಂಕುಗಳು ಕೂಡಾ ಇದನ್ನು ಜಾರಿಗೆ ತರಬಹುದು. ಏನೇ ಆಗಲಿ ಡಿಜಿಟಲ್ ಇಂಡಿಯಾದ ಈ ಸಮಯದಲ್ಲಿ ATM ಹಾಗು ನಗದು ಬಳಕೆ‌ ಬಹಳಷ್ಟು ಕಡಿಮೆ ಆಗಿದೆ. ಆದರೆ ಗ್ರಾಹಕರ ಗೌಪ್ಯತೆ ಹಾಗು ವಂಚನೆ ತಡೆಯಲು ತಂದ ಈ ಯೋಜನೆ ಸಫಲ ಆಗಲಿ ಎನ್ನುವುದು ನಮ್ಮ ಆಶಯ.

Leave A Reply

Your email address will not be published.