Bank News: ಬ್ಯಾಂಕ್ ನವರ ತಪ್ಪಿನಿಂದಾಗಿ ಅಕೌಂಟ್ ಗೆ ಬಂದ 2.5 ಕೋಟಿ. ಈ ಯುವಕ ಏನೆಲ್ಲಾ ಮಾಡಿದ್ದಾನೆ ಗೊತ್ತಾ?
ಬ್ಯಾಂಕಿನಲ್ಲಿ ಒಂದಿಲ್ಲ ಒಂದು ವಿಷಯಕ್ಕೆ ಕಾರಣ ಒಡ್ಡಿ ಗ್ರಾಹಕರ ಹಣ ಕಟ್ ಮಾಡುತ್ತಲೇ ಇರುತ್ತಾರೆ. ಕೇಳಿದರೆ ಹಾರೈಕೆ ಉತ್ತರ ಕೊಟ್ಟು ಸುಮ್ಮನಾಗುವ ಹಾಗೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಾತ್ರ ಬ್ಯಾಂಕಿನ ತಪ್ಪಿನಿಂದಾಗಿ ತನ್ನ ಅಕೌಂಟ್ ಗೆ ಬಿದ್ದ 2.5 ಕೋಟಿ ರೂಪಾಯಿಯನ್ನು ಬ್ಯಾಂಕಿಗೆ ಒಂದು ರೂಪಾಯಿ ಸಿಗದ ಹಾಗೆ ಮಾಡಿದ್ದಾನೆ. ಹೌದು ಅಷ್ಟಕ್ಕೂ ಈತ ಮಾಡಿದ್ದರು ಏನು ಆ ಹಣವನ್ನು ಮುಂದಕ್ಕೆ ಓದಿರಿ.
ಕೇರಳ ಮೂಲದ ಈ ವ್ಯಕ್ತಿಯ ಖಾತೆಗೆ 2.5 ಕೋಟಿ ಬಂದಿತ್ತು. ಈತ ತನ್ನ ಗೆಳೆಯರ ಬಳಿ ಹೇಳಿಕೊಂಡು ಇದರಿಂದ ಏನೆಲ್ಲಾ ತೊಂದರೆ ಆಗುತ್ತದೆ ಎಂಬ ಮಾಹಿತಿ ಎಲ್ಲವನ್ನೂ ಅರಿತು ಈತ ಎಲ್ಲಾ ಹಣವನ್ನು ಖರ್ಚು ಮಾಡಿದ್ದಾನೆ. ಹೌದು ಬಂದ ಹಣದಿಂದ ತನ್ನೆಲ್ಲಾ ಸಾಲಗಳನ್ನು ತೀರಿಸಿ, 3-4 ಐಫೋನ್ ಕೂಡ ಖರೀದಿ ಮಾಡಿದ್ದಾನೆ. ಅಷ್ಟೇ ಅಲ್ಲದೆ ತನ್ನ ಬಳಿ ಇದ್ದ ಡಿಮ್ಯಾಟ್ ಅಕೌಂಟ್ ಬಳಸಿ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದ್ದಾನೆ. ಕ್ರಿಪ್ಟೋ ಕರೆನ್ಸಿ ಯಲ್ಲಿ ಕೂಡ ಹಣವನ್ನು ಹಾಕಿದ್ದಾನೆ. ಅಷ್ಟೇ ಅಲ್ಲದೆ ಆನ್ಲೈನ್ ಶಾಪಿಂಗ್ ಮಾಡಿದ್ದಾನೆ.
ತನ್ನ ನೆರೆಕರೆಯವರು ಸ್ನೇಹಿತರಿಗೆ ಎಲ್ಲಾ ಸಾಲ ಕೊಟ್ಟು ಇದ್ದಾಗ ಕೊಡಿ ಎಂದು ಹೇಳಿದ್ದಾನೆ. ಬ್ಯಾಂಕಿಗೆ ಗೊತ್ತಾಗುವ ಹೊತ್ತಿನಲ್ಲಿ ಈತ ಎಲ್ಲಾ ಹಣವನ್ನು ಖರ್ಚು ಮಾಡಿ ಆಗಿತ್ತು. ಕೇಳಿದಾಗ ನನ್ನ ಅಕೌಂಟ್ ಗೆ ಬಂದ ಹಣ ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾನೆ. ಬ್ಯಾಂಕ್ ಪೊಲೀಸರ ಮೊರೆ ಹೋಗಿದೆ. ಆದರೆ ಈ ವಿಚಾರದಲ್ಲಿ ಪೊಲೀಸರಿಗೆ ಹೆಚ್ಚೇನೂ ಮಾಡಲು ಆಗುವುದಿಲ್ಲ ಕೋರ್ಟ್ ಕೇಸ್ ಆದರೂ ಸೆಕ್ಷನ್ 425 ಅಡಿಯಲ್ಲಿ ಆಗುತ್ತದೆ ಇದರಲ್ಲಿ ಹೆಚ್ಚೆಂದರೆ 3 ತಿಂಗಳು ಜೈಲು ಮತ್ತು ದಂಡ ಕೊಡಬೇಕಾಗುತ್ತದೆ. ಬ್ಯಾಂಕ್ ಮಾತ್ರ ಆದಷ್ಟು ವಸೂಲಿ ಮಾಡಬೇಕು ಎಂದು ತುದಿಗಾಲಲ್ಲಿ ನಿಂತಿದೆ.