ದೇಶದಾದ್ಯಂತ ಬಿಜೆಪಿ ಹೆಚ್ಚು ಹರಡಿಕೊಂಡಿರುವ ಪಕ್ಷ. ಆಮ್ ಆದ್ಮಿ ಪಕ್ಷ ಬಿಟ್ಟು ಬಿಜೆಪಿ ಸೇರಿದ ಮಾಜಿ ಪೊಲೀಸ್ ಭಾಸ್ಕರ್ ರಾವ್.
ಮಾಜಿ ಐಪಿಎಸ್ ಹಾಗು ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ಬಿಟ್ಟು ಭಾರತೀಯ ಜನತಾ ಪಾರ್ಟಿ ಗೆ ಅಧಿಕೃತವಾಗಿ ಆಯ್ಕೆ ಆಗಿದ್ದಾರೆ.
ಆಮ್ ಆದ್ಮಿ ಪಕ್ಷದ ಪ್ರಣಾಳಿಕಾ ಕಮಿಟ್ಟೆ ಛೇರ್ಮನ್ ಆಗಿದ್ದ ಭಾಸ್ಕರ್ ರಾವ್ ಕಳೆದ ವರ್ಷ ಏಪ್ರಿಲ್ ನಲ್ಲಿ ಆಪ್ ಗೆ ಸೇರಿದ್ದರು. ಆದರೆ ಪಕ್ಷದ ಬಗ್ಗೆ ಅಸಮಾಧಾನದಿಂದ ಬುಧವಾರ ಅಂದರೆ ನಿನ್ನೆ ಭಾರತೀಯ ಜನತಾ ಪಕ್ಷಕ್ಕೆ ಅಶೋಕ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಜಾಯಿನ್ ಆಗಿದ್ದಾರೆ. ಅದೇ ರೀತಿ ಭ್ರಾತ್ಷ್ಟಾಚಾರ ವಿರುದ್ಧ ಹೋರಾಡಲು ಡೊನೇಷನ್ ಪಡೆಯುತ್ತೆ ಹಾಗು ಪಕ್ಷದಲ್ಲಿ ಯಾವ ವಿಷಯದಲ್ಲೂ ಪಾರದರ್ಶಕತೆ ಇಲ್ಲ ಎಂದು ಪಕ್ಷ ತೊರೆದಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿ ಯವರ ಕೆಲಸ ನೋಡಿ ಬಿಜೆಪಿ ಗೆ ಸೇರುತ್ತಿದ್ದೇನೆ. ಆಮ್ ಆದ್ಮಿ ಅಲ್ಲಿ ಯಾವುದೇ ಪಾರದರ್ಶಕತೆ ಇಲ್ಲ, ಆಪ್ ಮಲ್ಟಿನ್ಯಾಷನಲ್ ಕಾರ್ಪೋರೇಶನ್ ಕಂಪನಿ ತರಹ ಕೆಲಸ ಮಾಡುತ್ತದೆ. ಭ್ರಷ್ಟಾಚಾರ ವಿರುದ್ಧ ಹೋರಾಟ ಎಂದು ಹೇಳಿಕೊಂಡು ಡೊನೇಷನ್ ಪಡೆದುಕೊಳ್ಳುತ್ತಿದೆ ಎಂದು ಆಪ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಭಾಸ್ಕರ್ ರಾವ್.
ಬಿಜೆಪಿ ಯಲ್ಲಿ ನಾನು ಉತ್ತಮವಾಗಿ ಕೆಲಸ ಮಾಡಬಹುದು. ಈ ಪಕ್ಷ ದೇಶದಾದ್ಯಂತ ಹರಡಿಕೊಂಡಿದೆ. ತನ್ನ ಛಾಪು ಮೂಡಿಸಿದೆ. ಪ್ರಧಾನಮಂತ್ರಿ ಮೋದಿಯವರ ಭವಿಷ್ಯದ ಯೋಚನೆಗಳು ನನ್ನನ್ನು ಬಿಜೆಪಿ ಸೇರುವಂತೆ ಮಾಡಿದೆ. ಆದರೆ ಆಪ್ ಅಲ್ಲಿ ಪಾರದರ್ಶಕತೆ ಇಲ್ಲ. ಈಗಲೇ ಇಬ್ಬರು ಮಂತ್ರಿಗಳು ಭ್ರಷ್ಟಾಚಾರ ಆರೋಪದಲ್ಲಿ ಜೈಲ್ ಅಲ್ಲಿ ಇರುವುದು ನಾಚಿಕೆಗೇಡಿನ ವಿಷಯ. ಪಕ್ಷದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ಆಪ್ ಪಕ್ಷವನ್ನು ಭಾಸ್ಕರ್ ರಾವ್ ದೂರಿದ್ದಾರೆ. input from – Metrosaga