Tata Group: ಭಾರತದ ಅತ್ಯಂತ ಯಶಸ್ವೀ ಉದ್ಯಮಿ ರತನ್ ಟಾಟಾ ಸಹೋದರ ಇಂದು ಯಾವ ಸ್ಥಿತಿಯಲ್ಲಿದ್ದರೆ ಗೊತ್ತೇ? ಅನಾಮದೇಯವಾಗಿ ಇರುವುದೇಕೆ ಇವರು?

165

ಭಾರತದಲ್ಲಿ ಅತ್ಯಂತ ಯಶಸ್ವೀ ಹಾಗು ಅತ್ಯಂತ ಉತ್ತಮ ವ್ಯಕ್ತಿತ್ವ ಹೊಂದಿರುವ ಉದ್ಯಮಿ ಯಾರಾದರೂ ಇದ್ದರೆ, ಮೊದಲಿಗೆ ಕೇಳಿ ಬರುವ ಹೆಸರು ರತನ್ ಟಾಟಾ. ಟಾಟಾ ಕಂಪನಿ, ಸಮೂಹ ಸಂಸ್ಥೆಗಳು ಉತ್ತಮ ಮಟ್ಟದಲ್ಲಿ ಇಂದು ಇದೆ ಎಂದಾದರೆ ಅದಕ್ಕೆ ಕಾರಣ ರತನ್ ಟಾಟಾ ಅವರು ಎಂದರೆ ತಪ್ಪಾಗಲಾರದು. ಇವರು ಉದ್ಯಮಿ ಅಲ್ಲದೆ ಉತ್ತಮ ಹೃದಯ ಹೊಂದಿರುವ ವ್ಯಕ್ತಿ ಕೂಡ. ಇದೆ ಕಾರಣಕ್ಕೆ ದೇಶ ಅಲ್ಲದೆ ವಿಶ್ವದಾದ್ಯಂತ ಇವರಿಗೆ ಅಭಿಮಾನಿಗಳಿದ್ದಾರೆ.

ರತನ್ ಟಾಟಾ ಅವರ ವಯಕ್ತಿಕ ಜೀವನದ ಬಗ್ಗೆ ಎಂದಾದರೂ ತಿಳಿದುಕೊಳ್ಳಲು ಬಯಸಿದ್ದೀರಾ? ಅಂದಹಾಗೆ ಅವರ ಜೀವನದ ಬಗ್ಗೆ ಕೆಲವರಿಗೆ ಮಾತ್ರ ಗೊತ್ತಿದೆ. ರತನ್ ಟಾಟಾ ಬಗ್ಗೆ ಗೊತ್ತಿದೆ, ಆದರೆ ಅವರ ಕಿರಿಯ ಸಹೋದರನ ಬಗ್ಗೆ ಯಾರಿಗೂ ಬಹುಷ್ಯ ಗೊತ್ತೇ ಇರಲಿಕ್ಕಿಲ್ಲ. ರತನ್ ಟಾಟಾ ಅವರು ತಮ್ಮ ಕಿರಿಯ ಸಹೋದರನ ಜೊತೆಯಿರುವ ಬ್ಲಾಕ್ ಅಂಡ್ ವೈಟ್ ಫೋಟೋ ಹಂಚಿಕೊಂಡಿದ್ದಾರೆ. ಇವರ ಬಗ್ಗೆ ಹಾಗಾದರೆ ತಿಳಿದುಕೊಳ್ಳೋಣ.

ರತನ್ ಅವರು ತಮ್ಮ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರ ಜೊತೆಗಿನ ಫೋಟೋ ಅನ್ನು ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ 1945 ರಲ್ಲಿ ತೆಗೆಯಲಾಗಿತ್ತು. ಇದರಲ್ಲಿ ಅವರ ಸಹೋದರ ಹಾಗು ಒಂದು ಸಾಕು ನಾಯಿ ಜೊತೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಳ್ಳುವಾಗ ಭಾವುಕರಾಗಿದ್ದರೆ ರತನ್ ಟಾಟಾ. ಹೃದಯ ಸ್ಪರ್ಶಿ ವಾಕ್ಯ ಕೂಡ ಬರೆದಿದ್ದಾರೆ. ಆ ಸಂತೋಷದ ದಿನಗಳು, ನಮ್ಮ ನಡುವೆ ಯಾರು ಬರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ರತನ್ ಟಾಟಾ ಅವರ ತಮ್ಮ, ಜಿಮ್ಮಿ ಟಾಟಾ ಸಾಮಾನ್ಯ ಜನರಂತೆ ವಾಸಿಸುತ್ತಿದ್ದಾರೆ. ಇವರ ಅಕ್ಕ ಪಕ್ಕದ ಮನೆಯವರಿಗೆ ಕೂಡ ಗೊತ್ತಿರಲಿಕ್ಕಿಲ್ಲ, ಇವರು ರತನ್ ಟಾಟಾ ಅವರ ತಮ್ಮ ಎನ್ನುವುದು. ಮುಂಬೈ ನ ಕೊಲಾಬಾದಲ್ಲಿ ಸಾಮಾನ್ಯರಂತೆ ಎರಡು BHK ಮನೆಯಲ್ಲಿ ವಾಸಿಸುತ್ತಿದ್ದಾರೆ. ಫೋನ್ ಆಗಲಿ, ಟಿವಿ ಆಗಲಿ ಇಲ್ಲ. ಪತ್ರಿಕೆ ಮೂಲಕ ಎಲ್ಲ ಸುದ್ದಿಗಳನ್ನು ತಿಳಿದುಕೊಳ್ಳುತ್ತಾರೆ.

ಜಿಮ್ಮಿ ಟಾಟಾ, ಟಾಟಾ ಸಮೂಹದಲ್ಲಿ ವಿವಿಧ ಪದಗಳಲ್ಲಿ ಕೆಲಸ ಮಾಡಿದ್ದಾರೆ. ದೊಡ್ಡ ಕಂಪನಿ ಮಾಲೀಕರಾಗಿದ್ದರು ಕೂಡ ಅಜ್ಞಾತವಾಗಿ ಜೀವನ ಸಾಗಿಸುತ್ತಿದ್ದಾರೆ. ರತನ್ ಜಿ ಟಾಟಾ ಅವರ ಸ್ವಂತ ಮಗ ಅಲ್ಲ ಇವರು. ಬದಲಾಗಿ ಇವರು ದತ್ತು ಮಗ ಆಗಿದ್ದಾರೆ. ಆದರೂ ಕೂಡ ಇವರು ಉತ್ತಮ ಬಾಂದವ್ಯ ಹೊಂದಿದ್ದಾರೆ. ಇವರು ಉತ್ತಮ ಸ್ಕ್ವ್ಯಾಷ್ ಆಟಗಾರರಾಗಿದ್ದು, ರತನ್ ಟಾಟಾ ರಂತೆಯೇ ಇವರು ಕೂಡ ಯಾವುದೇ ಮಾಡುವೆ ಆಗದೆ ಬ್ರಹ್ಮಚಾರಿಯಾಗಿದ್ದಾರೆ.

Leave A Reply

Your email address will not be published.