ICC Champions Trophy 2025: ಭಾರತ ಪಡೆದ ಬಹುಮಾನ ಮೊತ್ತವೆಷ್ಟು ಗೊತ್ತೇ? ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅಂದರೆ ಸುಳ್ಳಲ್ಲ.
ಭಾರತ ದೇಶವು 2025 ನೆಯ ಸಾಲಿನ ಚಾಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ನ್ಯೂಜಿಲಾಂಡ್ ಅನ್ನು ಮಣಿಸುವ ಮೂಲಕ ಚಾಂಪಿಯನ್ಸ್ ಪಟ್ಟಕ್ಕೇರಿದೆ. ಮತ್ತೊಮ್ಮೆ ರೋಹಿತ್ ಶರ್ಮ (Rohit Sharma) ತಾವು ಸಫಲನಾಯಕನೆಂದು ತಮ್ಮನ್ನು ಟೀಕಿಸುವವರ ವಿರುದ್ಧ ಸಾಬೀತುಪಡಿಸಿಕೊಂಡಿದ್ದಾರೆ. ಚಾಂಪಿಯನ್ ಟ್ರೋಫಿಯಲ್ಲಿ ಒಂದೇ ಒಂದು ಪಂದ್ಯ ಸೋಲದೆ ಅಜೇಯವಾಗಿ ಕಪ್ಪನ್ನು ಪಡೆದಿದೆ. ಪಾಕಿಸ್ತಾನದ ನೇತೃತ್ವದಲ್ಲಿ ನಡೆದ ಈ ಒಂದು ಚಾಂಪಿಯನ್ ಟ್ರೋಫಿ ಭಾರತ ಗೆದ್ದಿರುವುದು ಎಲ್ಲರಿಗೂ ಸಂತಸ ಮೂಡಿಸಿದೆ. ಹಾಗಾದರೆ ಗೆದ್ದ ಭಾರತ ತಂಡಕ್ಕೆ ಬಹುಮಾನ ರೂಪದಲ್ಲಿ ಎಷ್ಟು ಹಣ ಬಂದಿದೆ ಎಂಬುದು ಎಲ್ಲರಿಗೂ ಇದೆ. ಇಂದು ನಾವು ನಿಮಗೆ ಈ ಒಂದು ಆರ್ಟಿಕಲ್ ಮೂಲಕ ಭಾರತ ಎಷ್ಟು ಹಣ ಗೆದ್ದಿದೆ ಎಂದು ತಿಳಿಸುತ್ತೇವೆ.
Read this : Income Tax: ಇನ್ನು ಮುಂದೆ ನಿಮಗೆ ತಿಳಿಸದೇ ತೆರಿಗೆ ಇಲಾಖೆ ನಿಮ್ಮ ಸಾಮಾಜಿಕ ಜಾಲತಾಣ ಹಾಗು ಇಮೇಲ್ ಬಳಸಬಹುದು. ಕಾರಣ ತಿಳಿಯಿರಿ.
ಎಂಟನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡಕ್ಕೆ 2,65,000 ಡಾಲರ್ ಬಹುಮಾನ ಸಿಕ್ಕಿದೆ. ಭಾರತದ ರೂಪಾಯಿಗೆ ಇದನ್ನು ಕನ್ವರ್ಟ್ ಮಾಡಿದರೆ ಸರಿಸುಮಾರು ಎರಡು ಕೋಟಿ 30 ಲಕ್ಷದ ಬಹುಮಾನವಾಗುತ್ತದೆ. ಇನ್ನುಳಿದಂತೆ ಪಾಕಿಸ್ತಾನ ಬಾಂಗ್ಲಾದೇಶ ಅಫ್ಘಾನಿಸ್ತಾನ ಆಸ್ಟ್ರೇಲಿಯಾ ಸೌತ್ ಆಫ್ರಿಕಾ ತಲಾ 2,82,000 ಡಾಲರ್, 4,92,000 ಡಾಲರ್ (dollar), 5 ಲಕ್ಷ 26,000, 7,53,000 ಡಾಲರ್, 7,70,000 ಡಾಲರ್ ಬಹುಮಾನ ಪಡೆದಿದೆ. ಹಾಗಾದರೆ ಚಾಂಪಿಯನ್ಸ್ ಮತ್ತು ರನ್ನರ್ ಅಪ್ ತಂಡಗಳು ಎಷ್ಟು ಮೊತ್ತ ಪಡೆದಿದೆ ಎಂಬ ಕುತೂಹಲ ಈಗ ನಿಮಗೆ ಇನ್ನು ಜಾಸ್ತಿ ಆಗಿರಬಹುದು.

ರನ್ನರ್ ಅಪ್ ಸ್ಥಾನದಲ್ಲಿ ಇರುವಂತ ನ್ಯೂಜಿಲ್ಯಾಂಡ್ ತಂಡ ಬಹುಮಾನ ರೂಪದಲ್ಲಿ 1,313 ಮಿಲಿಯನ್ ಡಾಲರ್ ಬಹುಮಾನ ಪಡೆದಿದೆ. ಭಾರತದ ರೂಪಾಯಿಗೆ ಇದನ್ನು ಕನ್ವರ್ಟ್ ಮಾಡಿದರೆ ಬರೋಬ್ಬರಿ 11 ಕೋಟಿ 45 ಲಕ್ಷ ಬಹುಮಾನವಾಗುತ್ತದೆ. ಚಾಂಪಿಯನ್ಸ್ ಪಟ್ಟದಲ್ಲಿರುವ ಭಾರತ 2467 ಮಿಲಿಯನ್ ಡಾಲರ್ ಬಹುಮಾನ ರೂಪದಲ್ಲಿ ಪಡೆದಿದೆ. ಭಾರತೀಯ ರೂಪಾಯಿಯಲ್ಲಿ ಇದು ಬರೋಬ್ಬರಿ 21.50 ಕೋಟಿ. ಒಟ್ಟಾರೆಯಾಗಿ ಚಾಂಪಿಯನ್ ಟ್ರೋಫಿ (ICC Champions Trophy 2025) ಗೆದ್ದ ಭಾರತದ ತಂಡಕ್ಕೆ 21.5 ಕೋಟಿ ಹಣ ಬಹುಮಾನ ರೂಪದಲ್ಲಿ ಸಿಕ್ಕಿದೆ.