India to Vietnam: ಕೇವಲ 11 ರುಪಾಯಿಗೆ ಭಾರತದಿಂದ ವಿಯೆಟ್ನಾಂ ಗೆ ವಿಮಾನ ಮೂಲಕ ಹೋಗಬಹುದು. ಈ ಆಫರ್ ಹೇಗೆ ಪಡೆದುಕೊಳ್ಳುವುದು ಇಲ್ಲಿದೆ ಮಾಹಿತಿ.
ಹಬ್ಬದ ಪ್ರಯುಕ್ತ ವಿಯೆಟ್ನಾಂ ನ ವಿಮಾನ ಸಂಸ್ಥೆ ವಿಯೆಟ್ಜೆಟ್ ಏರ್ (Vietjet Air) ಒಂದು ಆಕರ್ಷಕ ಆಫರ್ ಭಾರತೀಯರಿಗೆ ನೀಡಿದೆ. ಕೇವಲ 11 ರುಪಾಯಿಗೆ ವಿಯೆಟ್ನಾಂ ಸುತ್ತುವ ವಿಶೇಷ ಕೊಡುಗೆ ನೀಡಿದೆ. ಈ ಕೊಡುಗೆ ಎಕಾನಮಿ ಕ್ಲಾಸ್ ಹಾಗು ಭಾರತ ಹಾಗು ವಿಯೆಟ್ನಾಂ (India to Vietnam) ನಡುವೆ ಹಲವು ಸ್ಟಾಪ್ ಗಳನ್ನೂ ಸೇರಿಸಿಕೊಂಡಿದೆ. ಈ ಆಫರ್ ಕೇವಲ ಲಿಮಿಟೆಡ್ ಸಮಯಕ್ಕೆ ಮಾತ್ರ ಒದಗಲಿದೆ. ವಿಯೆಟ್ನಾಂ ನಗರಗಳಾದ ಹೋಚಿ ಮಿನ್ ಸಿಟಿ, ಹನೋಯಿ ಹಾಗು ಡಾ ನಂಗ್ ನಂತಹ ನಗರಗಳಿಗೆ ಪ್ರಯಾಣ ಮಾಡಬಹುದಾಗಿದೆ. ವಿಯೆಟ್ನಾಂ ಗೆ ಪ್ರವಾಸ ಮಾಡಬೇಕೆಂದು ಕಾಯುತ್ತಿರುವವರಿಗೆ ಇದು ಸುವರ್ಣಾವಕಾಶ.
ಈ ಆಫರ್ ಡಿಸೆಂಬರ್ 31 2025 ರವರೆಗೆ ಮಾತ್ರ ಇರಲಿದೆ. ಆದ್ದರಿಂದ ಪ್ರಯಾಣ ಮಾಡ ಬಯಸುವವರು ಡಿಸ್ಕೌಂಟ್ ಪ್ರೈಸ್ (Discount Price) ಆಫರ್ ಪಡೆದುಕೊಳ್ಳಲು ಅಡ್ವಾನ್ಸ್ ಬುಕಿಂಗ್ (Advance Booking) ಕೂಡ ಮಾಡಬಹುದು. ಆದರೆ ಈ ಆಫರ್ ಪೀಕ್ ಸೀಸನ್ ಹಾಗು ಹಬ್ಬಗಳ ಸಮಯದಲ್ಲಿ ಸಿಗುವುದಿಲ್ಲ ಎಂದು ವಿಮಾನ ಸಂಸ್ಥೆ ತಿಳಿಸಿದೆ. ಟಿಕೆಟ್ ಬುಕ್ ಮಾಡ ಬಯಸುವವರು ವಿಯೆಜೆಟ್ ಏರ್ ಅಧಿಕೃತ ವೆಬ್ಸೈಟ್ ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕ್ ಮಾಡಬಹುದು.

ಕೇವಲ 11 ರುಪಾಯಿಗೆ ವಿಯೆಟ್ನಾಂ (India to Vietnam) ಹೋಗಬಹುದು ಆದರೆ ಈ ವಿಮಾನ ಸಂಸ್ಥೆ ಕೆಲ ಷರತ್ತುಗಳನ್ನು ವಿಧಿಸಿದೆ. ಬುಕಿಂಗ್ ಮಾಡಿದ ನಂತರ ಪ್ರಯಾಣದ ವೇಳಾಪಟ್ಟಿಯಲ್ಲಿ ಏನಾದರು ಬದಲಾವಣೆ ಆದರೆ ಅದಕ್ಕೆ ಹೆಚ್ಚುವರಿ ಶುಲ್ಕ ಪ್ರಯಾಣಿಕರು ಪಾವತಿ ಮಾಡಬೇಕಾಗುತ್ತದೆ. ಟಿಕೆಟ್ ಕಾಯ್ದಿರಿಸುವಾಗ ಎಚ್ಚರಿಕೆಯಿಂದ ಮಾಡಬೇಕು, ಒಂದು ವೇಳೆ ಟಿಕೆಟ್ (Flight Ticket) ಕ್ಯಾನ್ಸಲ್ ಮಾಡಿದರೆ ಸಾಮಾನ್ಯ ರೀತಿಯಲ್ಲಿ ನಮಗೆ ಟಿಕೆಟ್ ಹಣ ವಾಪಾಸ್ ಬರುವುದಿಲ್ಲ ಬದಲಿಗೆ ವಿಯೆಜೆಟ್ ವಾಲೆಟ್ (Wallet) ನಲ್ಲಿ ಸಂಗ್ರಹವಾಗುತ್ತದೆ. ಇದನ್ನು ನೀವು ಇನೊಮ್ಮೆ ಟಿಕೆಟ್ ಮಾಡಲು ಬಯಸಿದರೆ ಬಳಕೆ ಮಾಡಿಕೊಳ್ಳಬಹುದು.
- Rishab Pant :ರಿಷಬ್ ಪಂತ್ ರನ್ನ ತಂಡದಿಂದ ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್. ಕಾರಣ ಬಿಚ್ಚಿಟ್ಟ ಸುನಿಲ್ ಗವಾಸ್ಕರ್.
- Maharashtra Election 2024: ಮಹಾರಾಷ್ಟ್ರ ಯಾರ ತೆಕ್ಕೆಗೆ? ಸಟ್ಟಾ ಬಜಾರ್ ಹೇಳೋದೇನು?
- EPFO 3.0 : ಇನ್ನು ಮುಂದೆ PF ಹಣವನ್ನು ಏಟಿಎಂ ಮೂಲಕ ಹಣ ಪಡೆದುಕೊಳ್ಳಬಹುದು. ಕೇಂದ್ರ ಸರಕಾರ ಶೀಘ್ರದಲ್ಲೇ ಪ್ರಕಟಿಸಬಹುದು ಈ ಯೋಜನೆ.
- India – Canada: ಕೆನಡಾದಲ್ಲಿರುವ ಭಾರತೀಯ ದೂತಾವಾಸದ ಮೇಲೆ ಕಣ್ಣು, ಆಡಿಯೋ ಮತ್ತು ವಿಡಿಯೋ ಕಣ್ಗಾವಲು ಭಾರತದಿಂದ ತೀವ್ರ ಪ್ರತಿಭಟನೆ.
- Govt Jobs1: ಉತ್ತರ ಕನ್ನಡ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ನೇಮಕಕ್ಕೆ ಅರ್ಜಿ ಅಹ್ವಾನ. ಹೇಗೆ ಅರ್ಜಿ ಹಾಕುವುದು? ಇಲ್ಲಿದೆ ಮಾಹಿತಿ.
- Pan 2.0 ಪಡೆಯುವುದು ಹೇಗೆ? ಪಾನ್ ಕಾರ್ಡ್ ಪಡೆಯುವ ಸುಲಭ ವಿಧಾನ ಇಲ್ಲಿದೆ.