Opinion: ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರಾ? ಏನಿದು ಮೋದಿ ಶಾಹ್ ಪ್ಲಾನ್?
ಮೈಸೂರ್ ಅಂದರೇನೇ ನೆನಪಿಗೆ ಬರೋದು ಪ್ರತಾಪ್ ಸಿಂಹ ಹೆಸರು. ಕಾರಣ ಇವರ ಡೈನಾಮಿಕ್ ರಾಜಕಾರಣ ಹಾಗೇನೇ ಮೈಸೂರ್ ಅಲ್ಲಿ ನಡೆದಿರೋ ಅಭಿವೃದ್ಧಿ ವಿಚಾರಗಳು. ಇನ್ನು ಹಿಡ್ಣುತ್ವಕ್ಕೆ ಇವರ ಕೊಡುಗೆ ಬಹಳಷ್ಟಿದೆ. ಏನಾದರು ಹಿಂದುಗಳಿಗೆ ತೊಂದರೆ ಅದರ ಬಿಜೆಪಿ ಪಕ್ಷದಲ್ಲಿ ಮೊದಲಿಗೆ ಹಿಂದೂ ಪರ ಮಾತಾಡಲು ಮುಂದೆ ಬರುವುದು ಪ್ರತಾಪ್ ಸಿಂಹ.
ಆದರೆ ಈ ಬಾರಿಯ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಸೀಟ್ ಹಂಚಿಕೆ ವಿಷಯದಲ್ಲಿ ಬಾರಿ ಅಲ್ಲೋಲ ಕಲ್ಲೋಲ ಆಗುತ್ತಿದೆ. ವಿಧಾನಸಭೆಯಲ್ಲಿ ಮಕಾಡೆ ಮಲಗಿದೆ ಬಿಜೆಪಿ ಲೋಕಸಭೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸೀಟ್ ಗೆಲ್ಲುವ ವಿಶ್ವಾಸದಲ್ಲಿದೆ. ಅದೇ ಕಾರಣಕ್ಕೆ ಹಲವೆಡೆ ಹಾಲಿ ಸಂಸದರಿಗೆ ಟಿಕೆಟ್ ನೀಡದೆ ಹೊಸಬರಿಗೆ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ನಂತರ ಇದೀಗ ಮೈಸೂರ್ ಸಂಸದ ಪ್ರತಾಪ್ ಸಿಂಹರಿಗೆ ಲೋಕಸಭೆ ಟಿಕೆಟ್ ನೀಡುವುದಿಲ್ಲ ಎನ್ನುವ ಮಾತು ಮಾಧ್ಯಮಗಳಲ್ಲಿ ಬರಲು ಆರಂಭಿಸಿದೆ. ಇದಕ್ಕೆ ಪುಷ್ಟಿ ಕೊಡುವಂತಿದೆ ಪ್ರತಾಪ್ ಸಿಂಹ ರ ಫೇಸ್ಬುಕ್ ಲೈವ್ ವಿಡಿಯೋ. ಅನೇಕ ಅಭಿವೃದ್ಧಿ ಮಾಡಿಯೂ ಕೂಡ, ತನ್ನ ಕೆಲಸದ ರಿಪೋರ್ಟ್ ಕಾರ್ಡ್ ನಿಡಿಯೂ ಕೂಡ ಸಿಂಹ ರಿಗೆ ಟಿಕೆಟ್ ಕೊಡುವುದಿಲ್ಲ ಎನ್ನುವ ಚರ್ಚೆ ಸಾಮಾನ್ಯವಾಗಿ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ಮೈಸೂರ್ ಕೊಡಗು ಕ್ಷೇತ್ರ ಅಲ್ಲದೆ ಕರ್ನಾಟಕದಾದ್ಯಂತ ಪಕ್ಷ ಭೇದ ಮರೆತು ಪ್ರತಾಪ್ ಸಿಂಹ ರಿಗೆ ಟಿಕೆಟ್ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ನಡೆಯುತ್ತಿದೆ. ಇದೀಗ ಇದರ ಹಿಂದೆ ಬಿಜೆಪಿ ಯಾ ಪ್ರತಾಪ್ ಸಿಂಹರಿಗೆ ಮಾಸ್ಟರ್ ಪ್ಲಾನ್ ಏನು ಎನ್ನುವ ಬಗ್ಗೆ ನು ಚರ್ಚೆ ನಡೆಯುತ್ತಿದೆ. ಬಿಜೆಪಿ ಹೈಕಮಾಂಡ್ ಪ್ರತಾಪ್ ಸಿಂಹ ರಿಗೆ ರಾಜ್ಯ ರಾಜಕಾರಣಕ್ಕೆ ಬರುವಂತೆ ಮಾಡುತ್ತಿದೆಯಾ ಎನ್ನುವ ಅನುಮಾನ ಮೂಡುತ್ತಿದೆ.
ಈಗಾಗಲೇ ಗೊತ್ತಿರುವಂತೆ ಪ್ರತಾಪ್ ಸಿಂಹ ಡೈನಾಮಿಕ್ ಲೀಡರ್ ಹಾಗೇನೇ ಒಬ್ಬ ಪತ್ರಕರ್ತ. ತನಗೆ ಸರಿ ಎನಿಸಿದ್ದು ಹಾಗೇನೇ ಜನತೆಗೆ ಸರಿ ಎನಿಸಿದ್ದು ಮಾಡುವ ನಾಯಕ. ಅದೇ ಕಾರಣಕ್ಕೆ ಬಿಜೆಪಿ ನಾಯಕರಲ್ಲಿಯೇ ಸಿಂಹ ವಿರುದ್ಧ ಮುನಿಸು ಇರಬಹುದು. ಇವರು ರಾಜ್ಯ ರಾಜಕೀಯಕ್ಕೆ ಬಂದರೆ ಮೈಸೂರ್ ಕ್ಷೇತ್ರದಲ್ಲಿ ಬಿಜೆಪಿ ಬಲ ಪಡೆಯಲಿದೆ. ಲೋಕಸಭೆ ಮೋದಿ ಚರಿಷ್ಮಾ ಹಾಗೇನೇ ರಾಜ್ಯ ರಾಜಕಾರಣದಲ್ಲಿ ಮೈಸೂರ್ ಭಾಗದಲ್ಲಿ ಸಿಂಹ ಹವಾ.
Recent Posts
ತಮಿಳುನಾಡಿ ನಲ್ಲಿ ಈಗಾಗಲೇ ಯುವ ನಾಯಕ ಅಣ್ಣಾಮಲೈ ದಿನದಿಂದ ದಿನಕ್ಕೆ ಎತ್ತರಕ್ಕೆ ಬೆಳೆಯುತ್ತಿದ್ದಾರೆ ಹಾಗೇನೇ ಬಿಜೆಪಿ ಕೂಡ ಅಲ್ಲಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲೂ ಅಂತಹ ಯುವ ನಾಯಕನನ್ನು ಬಿಜೆಪಿ ತಯಾರು ಮಾಡಲು ಹೊರಟಿರಬಹುದು. ಯುವ ನಾಯಕ ಅಣ್ಣಾಮಲೈ ತರಹ ಕೆಲಸ ಯಾರು ಮಾಡಬಹುದು ಎಂದು ಹುಡುಕುತ್ತ ಹೊರಟರೆ ಮೊದಲಿಗೆ ಸಿಗುವ ಹೆಸರೇ ಪ್ರತಾಪ್ ಸಿಂಹ.
Subscribe for updates
ಏನೇ ಆಗಲಿ ಅಭಿವೃದ್ಧಿ ಹೆಸರಲ್ಲಿ ರಾಜಕಾರಣ ಮಾಡುವ ಹಾಗೇನೇ ಹಿಂದುತ್ವವನ್ನು ಬಿಟ್ಟುಕೊಡದ, ಪ್ರತಾಪ್ ಸಿಂಹರನ್ನು ಬೆಳೆಸುವುದು ಬಿಜೆಪಿ ರಾಷ್ಟ್ರ ಹಾಗು ರಾಜ್ಯ ನಾಯಕರ ಕರ್ತವ್ಯ. ಕರ್ನಾಟಕ ಬಿಜೆಪಿ ಕಾರ್ಯಕರ್ತರ ಮಾತನ್ನು ಕೇಳಿ ಪ್ರತಾಪ್ ಸಿಂಹರಿಗೆ ಲೋಕಸಭೆ ಟಿಕೆಟ್ ನೀಡಬೇಕು. ಇಲ್ಲವಾದರೆ ರಾಜ್ಯ ರಾಜಕಾರಣದಲ್ಲಿ ಇವರನ್ನು ಸಕ್ರಿಯಗೊಳಿಸಬೇಕೆನ್ನುವುದು ಎಲ್ಲರ ಬೇಡಿಕೆ.