ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್ ಬಳಕೆಗೆ ನೀಡಿದರೆ ಉತ್ತಮ? ರಿಸರ್ಚ್ ಹಾಗು ಸರ್ವೆ ಏನು ಹೇಳುತ್ತೆ ಇದರ ಬಗ್ಗೆ?

263

Right age to give phones to Children : ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ನೋಡುವುದು ಸಾಮಾನ್ಯವಾಗಿದೆ. ಕೆಲ ಮಕ್ಕಳು ಮೊಬೈಲ್ ಕೈಯಲ್ಲಿ ಇಲ್ಲದೆ ಇದ್ದರೆ ಊಟ ಕೂಡ ಮಾಡುವುದಿಲ್ಲ. ಮಕ್ಕಳು ಹಠ ಮಾಡಿದಾಗ ಮೊಬೈಲ್ ಕೊಡುವುದು ಸಾಮಾನ್ಯವಾಗಿದೆ. ಆದರೆ ಇದು ಎಷ್ಟು ಸರಿ?

ಮಕ್ಕಳು ಮೊಬೈಲ್ ಬಳಕೆಯ ವಯಸ್ಸಿನ ಬಗ್ಗೆ ಹೆತ್ತವರಲ್ಲಿ ಅನೇಕ ತರಹದ ಅಭಿಪ್ರಾಯಗಳಿವೆ. ಸಾಮಾನ್ಯವಾಗಿ ಈ ಮೊಬೈಲ್ ಅಲ್ಲಿ ಕಾರ್ಟೂನ್, ಗೇಮ್ ಹಾಗೇನೇ ವಿಡಿಯೋ ಗಳನ್ನೂ ಸ್ಕ್ರಾಲ್ ಮಾಡುತ್ತಿರುತ್ತಾರೆ. ಮೊಬೈಲ್ ಅಲ್ಲಿ ಎಜುಕೇಟೆಡ್ ವಿಡಿಯೋ ಇದ್ದರು ಕೂಡ ಮಕ್ಕಳು ಯಾವ ಸಮಯದಲ್ಲಿ ಏನು ನೋಡುತ್ತಿರುತ್ತಾರೆ ಎನ್ನುವುದು ಗೊತ್ತಿರುವುದಿಲ್ಲ. ಮೊಬೈಲ್ ಅಲ್ಲಿ ಎಲ್ಲ ರೀತಿಯ ಕಂಟೆಂಟ್ ಇರುತ್ತದೆ. ಮಕ್ಕಳು ಅವುಗಳನ್ನ ಯಾವ ವಯಸ್ಸಿನಲ್ಲಿ ನೋಡಬೇಕು ಎನ್ನುವುದು ಬಹಳ ಮುಖ್ಯವಾಗಿದೆ.

photo curtesy - Aaj tak

ಅಮೇರಿಕಾದ ಒಂದು ಸಂಸ್ಥೆ ನ್ಯಾಷನಲ್ ಪಬ್ಲಿಕ್ ರೇಡಿಯೋ (NPR) ಮಕ್ಕಳ ಕೈಗೆ ಮೊಬೈಲ್ ಕೊಡಲು ಸರಿಯಾದ ವಯಸ್ಸೆಷ್ಟು ಎನ್ನವ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ. ಈ ಲೇಖನವನ್ನ ಸ್ಕ್ರೀನ್ ಟೈಮ್ ಕನ್ಸಲ್ಟೆಂಟ್ ಎಮಿಲಿ ಚೇರ್ಕಿನ್ ಬರೆದಿದ್ದಾರೆ. ಇವರ ಪ್ರಕಾರ ಮಕ್ಕಳಿಗೆ ಮೊಬೈಲ್ ನೀಡುವುದನ್ನ ಆದಷ್ಟು ನಿಧಾನಗೊಳಿಸಬೇಕೆಂದು ಹೇಳಿದ್ದಾರೆ.

ಇನ್ನೊಂದು ನಾನ್ ಪ್ರೊಫೈಟಬಲ್ ಸಂಸ್ಥೆ ಕಾಮನ್ ಸೆನ್ಸ್ ಮೀಡಿಯಾ ಪ್ರಕಾರ 11 ರಿಂದ 15 ವರ್ಷದೊಳಗಿನ 1300 ಹುಡುಗಿಯರ ಸಮೀಕ್ಷೆಯಲ್ಲಿ ೬೦% ಹುಡುಗಿಯರು snapchat ಅಲ್ಲಿ ಅಪರಿಚಿತರೊಂದಿಗೆ ಮೆಸೇಜ್ ಮಾಡುತ್ತಾರೆ. ಅದೇ ರೀತಿ ಟಿಕ್ ಟಾಕ್ ಬಳಸುವ ಹುಡಿಗಿಯರು ಕೂಡ ಇದೆ ರೀತಿ ಮಾಡುತ್ತಾರಂತೆ. ಆದ್ದರಿಂದ ಮೊಬೈಲ್ ಮಕ್ಕಳಿಗೆ ನೀಡುವಾಗ ಮಕ್ಕಳು ಏನೆಲ್ಲಾ ಅದರಲ್ಲಿ ಮಾಡುತ್ತಾರೆ ಎನ್ನುವ ಬಗ್ಗೆಯೂ ಪೋಷಕರು ಗಮನ ನೀಡಬೇಕಾಗಿದೆ.

Leave A Reply

Your email address will not be published.