ಎಲ್ಲರ‌ ಗಮನ ಸೆಳೆಯುತ್ತಿದೆ ಶ್ವೇತ ಚೆಂಗಪ್ಪರವರ ಮಗನ ಕೃಷ್ಣಾವತಾರ. ಈ ಫೋಟೋಗಳನ್ನ ನೀವು ನೋಡಿ.

1,515

ಕೃಷ್ಣ ಜನ್ಮಾಷ್ಟಮಿಯ ದಿನವಾದ ಇಂದು‌ ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೊರೋನಾ ನೋವಿನ ಮುಂದೆ ಸ್ವಲ್ಪ ಮುದ ನೀಡುತ್ತಿದೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ. ಸಾರ್ವಜನಿಕವಾಗಿ ಆಚರಿಸಲು ಸಾಧ್ಯವಿಲ್ಲ ಅನ್ನುವುದು ಬಿಟ್ಟರೆ ಪ್ರತಿಯೊಬ್ಬರ ಮನೆಯಲ್ಲೂ ಕೃಷ್ಣ ಜನ್ಮಾಷ್ಣಮಿ ಸಂಭ್ರಮದಿಂದ ನಡೆಯುತ್ತಿದೆ. ಇದೇ ಸಂಧರ್ಭದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ತಮ್ಮ ಮನೆಯ ಮಗ ಅಥವಾ ಮಗಳಿಗೆ ರಾಧ ಅಥವಾ ಕೃಷ್ಣ ನ ವೇಷಭೂಷಣ ಹಾಕಿ ಸಂಭ್ರಮಾಚರಿಸುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ.

ಕಿರುತೆರೆ ನಟಿ ಮಜಾಟಾಕೀಸ್ ನ ರಾಣಿ ಪಾತ್ರದ ಶ್ವೇತ ಚೆಂಗಪ್ಪ ತಮ್ಮ‌ಮಗನಿದೆ ಕೃಷ್ಣನ ವೇಷ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮಗನ ವೇಷಕ್ಕೆ ಒಕ್ಕಣಿಯಾಗಿ ಶ್ವೇತ ಚೆಂಗಪ್ಪ ಈ ರೀತಿ ಕೃಷ್ಣ ಜನ್ಮಾಷ್ಟಮಿಗೆ ಶುಭಾಶಯ ಕೋರಿದ್ದಾರೆ. “ನಮ್ಮ ಮನೆಯ ಪುಟಾಣಿ ಮುದ್ದುಕೃಷ್ಣನಿಂದ ನಿಮ್ಮೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಶಯಗಳು ❤️ ನನ್ನ ಮಗನನ್ನು ಕೃಷ್ಣನಾಗಿ ನೋಡುವ ನನ್ನ ಆಸೆ ನೆರವೇರಿದೆ😍 ಹೇಗಿದ್ದಾನೆ ನಮ್ಮ ಮನೆಯ ಪುಟಾಣಿ ಮುದ್ದು ಕೃಷ್ಣ😍 @Jiyaan ಈ ಪುಟಾಣಿ ಕೃಷ್ಣ ನಮ್ಮ ಬಾಳಿಗೆ ಅಪಾರವಾದ ಪ್ರೀತಿ ನಗುವನ್ನು ಖುಷಿಯನ್ನು ತಂದು ಕೊಟ್ಟಿದ್ದಾನೆ😍 ಹಾಗೆಯೇ ಆ ಭಗವಂತ ಶ್ರೀಕೃಷ್ಣ ನಿಮ್ಮೆಲ್ಲರ ಬಾಳಲ್ಲಿ ಸುಖ ,ಶಾಂತಿ,ನೆಮ್ಮದಿ ಹಾಗೂ ಅಪಾರವಾದ ಪ್ರೀತಿಯನ್ನು ಕೊಡಲಿ ಅಂತ ಹಾರೈಸುತ್ತೇವೆ 😍🙏🏻.

ರಾಣಿ ಪಾತ್ರದಲ್ಲಿ ಮಜಾ ಟಾಕೀಸ್ ಅಲ್ಲಿ ಮಿಂಚುತ್ತಿರುವ ನಮ್ಮ ಶ್ವೇತಾ ಚೆಂಗಪ್ಪ ಅವರು ತಮ್ಮ ಮಗನಿಗೆ ಕೃಷ್ಣ ವೇಷ ಧರಿಸಿ ಸಂಭ್ರಮಿಸಿದ ಈ ಫೋಟೋ ಗಳು ಎಲ್ಲರ ಮೆಚ್ಚುಗೆ ಪಡೆದಿವೆ. ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

 

 

Leave A Reply

Your email address will not be published.