ಕೆಲಸ ಬೇಡ ಸ್ವಂತ ಉದ್ಯಮ ಶುರು ಮಾಡಬೇಕು ಅಂತ ಯೋಚಿಸುತ್ತಿದ್ದರೆ ಈ ಬಿಸಿನೆಸ್ ಐಡಿಯಾ ಉಪಯೋಗಿಸಿ ತಿಂಗಳಿಗೆ ೫-೧೦ ಲಕ್ಷ ದುಡಿಯಬಹದು!

795

ನಿಮ್ಮ ದೈನಂದಿನ ೧೦-೬ ಗಂಟೆಗಳ ಉದ್ಯೋಗದಿಂದ ಬೇಸತ್ತಿದ್ದಾರೆ ಹಾಗು ನಿಮ್ಮದೇ ಸ್ವಂತ ಉದ್ಯಮ ಪ್ರಾರಂಭ ಮಾಡಬೇಕೆಂದಿದ್ದರೆ ಇಂದು ನಾವು ಬಿಸಿನೆಸ್ ಐಡಿಯಾ ಬಗ್ಗೆ ಹೇಳಲಿದ್ದೇವೆ. ಈ ಉದ್ಯಮ ಮಾಡುವುದರಿಂದ ತಿಂಗಳಿಗೆ ೫-೧೦ ಲಕ್ಷವರೆಗೂ ಗಳಿಸುವ ಅವಕಾಶ ಇದೆ. ಅದೇನು ಉದ್ಯಮ ಉಪಾಯ ಅಂತೀರಾ? ರಟ್ಟಿನ ಬಾಕ್ಸ್ ಗಳು. ಇತ್ತೀಚಿನ ದಿನಗಳಲ್ಲಿ ಇಂತಹ ರಟ್ಟಿನ ಪೆಟ್ಟಿಗೆಗಳಿಗೆ ಬಹಳ ಬೇಡಿಕೆಗಳಿವೆ. ಸಣ್ಣ ವಸ್ತುಗಳಿಂದ ಹಿಡಿದು ದೊಡ್ಡ ವಸ್ತುಗಳು ಕೂಡ ಇಂದಿನ ಕಾಲದಲ್ಲಿ ಉತ್ತಮ ರೀತಿಯಲ್ಲಿ ಪ್ಯಾಕಿಂಗ್ ಮಾಡಿ ಕಳುಹಿಸಲಾಗುತ್ತದೆ. ಅದೇ ಕಾರಣಕ್ಕೆ ಈ ಉದ್ಯಮ ಮಾಡಿದರೆ ಯಶಸ್ಸು ಸಿಗಬಹುದು.

ಈ ಉದ್ಯಮದ ವೈಶಿಷ್ಟ್ಯತೆ ಎಂದರೆ ಈ ಉದ್ಯಮದಲ್ಲಿ ಬೇಡಿಕೆ ಸಾಮನ್ಯವಾಗಿ ಸ್ಥಿರವಾಗಿರುತ್ತದೆ. ಇಂದು ಎಲ್ಲಿಗೆ ಹೋದರು ಕೂಡ ಅಥವಾ ಏನೇ ಕೊಂಡರು ಕೂಡ ಪ್ಯಾಕಿಂಗ್ ನೋಡಲು ಉತ್ತಮವಾಗಿರುತ್ತದೆ. ಜನ ಖರೀದಿ ಮಡಿವಾಗ ಎಷ್ಟು ಒಳ್ಳೇದಾಗಿ ಪ್ಯಾಕ್ ಆಗಿ ಇರುತ್ತದೆ ಎಂದು ನೋಡುತ್ತಾರೆ. ಅದಕ್ಕಾಗಿಯೇ ಯಾವುದೇ ಬ್ಯುಸಿನೆಸ್ ಇರಲಿ ಇಂದು ನೋಡುವುದು ಉತ್ಪನ್ನಗಳು ಎಷ್ಟು ಉತ್ತಮವಾಗಿ ಪ್ಯಾಕ್ ಆಗಿದೆ ಎನ್ನುವುದನ್ನ. ಅದಕ್ಕಾಗಿ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ರಟ್ಟಿನ ಬಾಕ್ಸ್ ಗಳು. ಇದರ ಉದ್ಯಮ ಮಾಡಿದರೆ ಬೇಡಿಕೆ ಅನುಗುಣವಾಗಿ ಪೂರೈಕೆ ಆರಾಮವಾಗಿ ಮಾಡಬಹುದು.

ಈ ಬಾಕ್ಸ್ ತಯಾರಿಸುವ ಉದ್ಯಮ ಮಾಡಲು ಕಚ್ಚಾವಸ್ತುಗಳು ಹಾಗು ಯಂತ್ರಗಳ ಅವಶ್ಯಕತೆ ಬಹಳ ಇರುತ್ತದೆ. ಈ ಬಾಕ್ಸ್ ತಯಾರಿಸಲು ಮುಖ್ಯವಾಗಿ ಬೇಕಾದದ್ದು ಕ್ರಾಫ್ಟ್ ಪೇಪರ್. ಇದರ ಮಾರುಕಟ್ಟೆ ಬೆಲೆ ೪೦ ರೂಪಾಯಿ ಪ್ರತಿ ಕೆಜಿ ಗೆ ಇರುತ್ತದೆ. ನೀವು ಬಳಸುವ ಉತ್ತಮ ಗುಣಮಟ್ಟದ ಪೆಟ್ಟಿಗೆಗಳಿಗೆ ಉತ್ತಮ ಗುಣಮಟ್ಟದ ಕ್ರಾಫ್ಟ್ ಪೇಪರ್ ಬಳಸಬೇಕಾಗುತ್ತದೆ. ಈ ಉದ್ಯಮ ಪ್ರಾರಂಭಿಸಲು ೫೦೦೦ ಚದರ ಅಡಿ ಜಾಗ ಬೇಕಾಗುತ್ತದೆ. ಆ ಜಗದಲ್ಲಿ ಒಂದು ಫ್ಯಾಕ್ಟರಿ ನಿರ್ಮಿಸಿ ಹಾಗು ಒಂದು ಗೋದಾಮು ಅವಶ್ಯಕತೆ ಇರುತ್ತದೆ. ಜನಸಂದಣಿ ಇರುವ ಜಗದಲ್ಲಿ ಇದನ್ನು ಪ್ರಾರಂಭಿಸಬೇಡಿ ಆದಷ್ಟು ಜನ ಹೆಚ್ಚು ಓಡಾಡದ ಪ್ರದೇಶಗಳಲ್ಲಿ ಪ್ರಾರಂಭಿಸಿ.

ಇದು ಮಾತ್ರ ಅಲ್ಲದೆ ಇವುಗಳನ್ನು ತಯಾರಿಸಲು ಎರಡು ಯಂತ್ರಗಳ ಅವಶ್ಯಕತೆ ಇರುತ್ತದೆ. ಒಂದು ಸೆಮಿ ಆಟೋಮ್ಯಾಟಿಕ್ ಮಷೀನ್ ಹಾಗು fully ಆಟೋಮ್ಯಾಟಿಕ್ ಮಷೀನ್. ಈ ಎರಡು ಮಷೀನ್ ಗಾಲ ಮೇಲೆ ಬಂಡವಾಳ ಕೂಡ ಹೆಚ್ಚಿರುತ್ತದೆ. ಈ ವ್ಯವಹಾರ ದೊಡ್ಡ ಮಟ್ಟದಲ್ಲಿ ಪ್ರಾರಂಭ ಮಾಡುವುದಾದರೆ ಕನಿಷ್ಠ ೨೦ ಲಕ್ಷದವರೆಗೆ ಹಣ ಬೇಕಾಗುತ್ತದೆ. ಸೆಮಿ ಆಟೋಮ್ಯಾಟಿಕ್ ಮಷೀನ್ ನೊಂದಿಗೆ ಉದ್ಯಮ ಪ್ರಾರಂಭ ಮಾಡುವುದಾದರೆ ೨೦ ಲಾಸ್ಖದವರೆಗಿನ ಬಂಡವಾಳ ಹಾಕಬೇಕಾಗುತ್ತದೆ. ಅದೇ ರೀತಿ fully ಆಟೋಮೇಟೆಡ್ ಮಷೀನ್ ಮೂಲಕ ಉದ್ಯಮ ಪ್ರಾರಂಭಿಸುವುದಾದ್ರೆ ನಿಮಗೆ ಕಡಿಮೆ ಅಂದರು ಕೂಡ ೫೦ ಲಕ್ಷದವರೆಗಿನ ಬಂಡವಾಳ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಬಳಿ ಒಳ್ಳೆ ಗ್ರಾಹಕರು ಇದ್ದಾರೆ ನಿಮಗೆ ಪ್ರತಿ ತಿಂಗಳು ೫ ರಿಂದ ೧೦ ಲಕ್ಷದವರೆಗೆ ಸುಲಭವಾಗಿ ಹಣ ಗಳಿಸಬಹುದು.

Leave A Reply

Your email address will not be published.