ಕೇವಲ 10 ಸಾವಿರ ರೂಪಾಯಿಯಿಂದ ಉದ್ಯಮ ಪ್ರಾರಂಭಿಸಿ 90% ಕನ್ನಡಿಗರಿಗೆ ಉದ್ಯೋಗ ನೀಡಿ ಇಂದು ೬೦೦ ಕೋಟಿ ಬೆಲೆ ಬಾಳುವ ಸಾಮ್ರಾಜ್ಯ ಕಟ್ಟಿದ ಇವರ್ಯಾರು ಗೊತ್ತೇ?
ನೋಡಲು ಸುಂದರವಿಲ್ಲದಿದ್ದರು ತನ್ನ ಪರಿಶ್ರಮದಿಂದ ಯಶಸ್ಸಿನ ಅತ್ಯಂತ ಎತ್ತರದ ಶಿಖರವನ್ನೇರಿದ ವ್ಯಕ್ತಿ ಸಿಗುವುದು ಕೇವಲ ಸಿನೆಮಾಗಳಲ್ಲಿ ಮಾತ್ರ ಅಂತ ಯೋಚನೆ ಮಾಡುತ್ತಾರೆ. ಆದರೆ ಇಂದಿನ ಈ ವ್ಯಕ್ತಿ ಈ ಯೋಚನೆಯನ್ನೇ ಬದಲಿಸಿದ ವ್ಯಕ್ತಿ. ಕರ್ನಾಟಕದ ಹೆಮ್ಮೆಯ ಅರ ಎಸ್ ಶಾನಭಾಗ್. ಬೆಂಗಳೂರಿನ ಪ್ರತಿಷ್ಠಿತ ವ್ಯಾಲ್ಯೂ ಪಾಯಿಂಟ್ ಸಿಸ್ಟಮ್ ಕಟ್ಟಿ ನಿಲ್ಲಿಸಿದ ವ್ಯಕ್ತಿ. ಅದೇ ರೀತಿ ಅನೇಕ ಕನ್ನಡಿಗರಿಗೆ ಕೆಲಸ ನೀಡಿ ಅನೇಕ ಕುಟುಂಬದವರಿಗೆ ಬೆಳಕಾದವರು.
ಕರ್ನಾಟಕದ ಅಂಬಿಕಾ ನಗರ ಎನ್ನುವ ಚಿಕ್ಕ ಊರಿನವರಾದ ಶಾನಭಾಗ್ ಹತ್ತಿರದ ನಗರದ ಶಾಲೆ ಗೆ ಪ್ರತಿದಿನ ಕಿಲೋ ಮೀಟರ್ ಗಟ್ಟಲೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದ್ದಿತ್ತು. ಅಂದೇ ತಾನೊಂದು ಉತ್ತಮ ಹೆಸರು ಗಳಿಸಬೇಕು ಎನ್ನುವ ಛಲ ಹುಟ್ಟಿತು. ತನ್ನ ಬಳಿ ಅಂದು ಇದ್ದ ಕೇವಲ ೧೦ ಸಾವಿರ ರೂಪಾಯಿಗಳೊಂದಿಗೆ ೧೯೯೧ ರಲ್ಲಿ ಒಂದು ಹೊಸದಾದ IT ಕಂಪನಿ ಶುರು ಮಾಡಿ ಅದಕ್ಕೆ ವ್ಯಾಲ್ಯೂ ಪಾಯಿಂಟ್ ಸಿಸ್ಟಮ್ ಪ್ರಾರಂಭಿಸಿದರು. ಅದೇ ಸಮಯದಲ್ಲಿ IT ಕ್ಷೇತ್ರ ಹೊಸ ಅದ್ಯಾಯ ಶುರು ಮಾಡುತಿತ್ತು ಭಾರತಕ್ಕೆ ಕಾಲಿಡುವ ಸಮಯವೂ ಅದೇ ಆಗಿತ್ತು. ಇದು ಶಾನಭಾಗ್ ಅವರಿಗೆ ದೊಡ್ಡ ವಾರಾಧನವಾಗಿ ಪರಿಣಮಿಸಿತು.
ಅದೇ ಸಮಯಕ್ಕೆ ತನ್ನ ಕಂಪನಿ ಗೆ ೫೦% ಪಾರ್ಟ್ನರ್ ಆಗಿ ಸಂಪತ್ ಕುಮಾರ್ ಅವರನ್ನು ಸೇರಿಸಿಕೊಂಡರು. ಅಲ್ಲಿಂದ ಹಿಂದಕ್ಕೆ ತಿರುಗಿ ನೋಡಲಿಲ್ಲ ಶಾನಭಾಗ್. ತಮ್ಮ IT ಕ್ಷೇತ್ರದ ಮೇಲಿದ್ದ ಇಂಟರೆಸ್ಟ್ ಹಾಗು ಅದರ ಬಗ್ಗೆ ಇದ್ದ ಜ್ಞಾನ ಅವರನ್ನು ಉತ್ತಮ ಸ್ಥಾನಕ್ಕೆ ಕೊಂಡೊಯಿತು. ಉತ್ತಮ ಬಿಸಿನೆಸ್ ಮಾಡಲು ಪ್ರಾರಂಭಿಸಿತು ಇವರ ಈ IT ಉದ್ಯಮ. ೧೯೯೬ ರಲ್ಲಿ ವಿದೇಶಿ ಕಂಪನಿಗಳಾದ HP MICROSOFT ನಂತಹ ಕಂಪನಿಗಳು ಭಾರತದಲ್ಲಿ ಉದ್ಯಮ ಮಾಡಬೇಕು ಎನ್ನುವ ಸುಸಂಧರ್ಭವನ್ನು ಬಳಸಿಕೊಂಡು ಆ ಕಂಪನಿ ಗಳೊಂದಿಗೆ ಪಾರ್ಟನೆರ್ಶಿಪ್ ಮಾಡಿಕೊಂಡು ತಮ್ಮ ಉದ್ಯಮವನ್ನು ಇನ್ನು ಎತ್ತರಕ್ಕೆ ಕೊಂಡು ಹೋದರು ಶಾನಭಾಗ್ ಹಾಗು ಸಂಪತ್ ಕುಮಾರ್.
90 ಪ್ರತಿಶತ ಕೆಲಸಗಾರರು ಹಳ್ಳಿ ಪ್ರತಿಭೆಗಳು.
ಶಾನಭಾಗ್ ಅವರು ತಾವು ಶಾಲೆ ಕಲಿಯಲು ಹೇಗೆ ಹತ್ತಿರದ ಪಟ್ಟಣಕ್ಕೆ ಪ್ರಯಾಣ ಮಾಡಬೇಕಾಗಿತ್ತೋ ಅದೇ ರೀತಿ ಜನರು ಕೂಡ ಉದ್ಯೋಗಕ್ಕೂ ಹತ್ತಿರದ ನಗರಕ್ಕೆ ಪ್ರಯಾಣ ಮಾಡಬೇಕಿತ್ತು. ಇದು ಅಲ್ಲಿನ ಜನರು ತಮ್ಮ ಮನೆ ಬಿಟ್ಟು ನಗರದಲ್ಲಿಯೇ ವಾಸಿಸ ತೊಡಗಿದರು. ಇದನ್ನು ತಪ್ಪಿಸಲು ಶಾನಭಾಗ್ ಈ ಚಿಕ್ಕ ಹಳ್ಳಿಗಳಲ್ಲಿ ತಮ್ಮ ಆಫೀಸ್ ಶಾಖೆಗಳನ್ನು ತೆರೆದು ಅಲ್ಲಿನ ಉತ್ತಮ ಪ್ರತಿಭೆಗಳನ್ನು ತಮ್ಮ ಕಂಪನಿ ಗೆ ಕೆಲಸಕ್ಕೆ ತಗೋಳ ತೊಡಗಿದರು. ಅದೇ ರೀತಿ ಆ ಸ್ಥಳದ ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶ ಕೂಡ ಕಲ್ಪಿಸಿಕೊಟ್ಟಿದ್ದಾರೆ.
ಕೇವಲ ೧೦ ಸಾವಿರ ಬಂಡವಾಳ್ದೊಂದಿಗೆ ಉದ್ಯಮಕ್ಕೆ ಬಂದ ಶಾನಭಾಗ್ ಅವರ ವ್ಯಾಲ್ಯೂ ಪಾಯಿಂಟ್ ಸಿಸ್ಟಮ್ ಇಂದು ಸುಮಾರು ೫೦೦ ಕಂಪನಿಗಳಿಗೆ ಸೇವೆ ನೀಡುತ್ತಾ IT ಕ್ಷೇತ್ರದಲ್ಲಿ ದೊಡ್ಡಣ್ಣನಾಗಿ ಮುನ್ನಡೆಯುತ್ತಿದೆ. ಅಲ್ಲದೆ ಇಂದು ಸುಮಾರು ೨೦ ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶ ಕೂಡ ನೀಡಿ ಅನೇಕ ಕುಟುಂಬಗಳಿಗೆ ಬೆಳಕಾಗಿದ್ದರೆ. ೧೦ ಸಾವಿರದ ಕಂಪನಿ ಇಂದು ಸುಮಾರು ೬೦೦ ಕೋಟಿ ಬೆಲೆಬಾಳುವ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಂತಹ ವ್ಯಕ್ತಿತ್ವ ನಮ್ಮ ಇಂದಿನ ಹಲವಾರು ಯುವಕರಿಗೆ ಸ್ಪೂರ್ತಿಯಾಗಿದೆ.