೨೧ ವರ್ಷದ ಯುವಕ ರೈತರಿಗೆ ಬೆನ್ನೆಲುಬಾಗಿ ನಿಂತು ೨ ಉದ್ಯಮ ಪ್ರಾರಂಭಿಸಿ ಯುವಕರಿಗೆ ಮಾದರಿಯಾಗಿದ್ದಾರೆ. ಈತ ಮಾಡಿದ ಸಾಧನೆ ಎಂತದ್ದು ಗೊತ್ತೇ?

1,072

ನಮ್ಮಲ್ಲಿ ಅನೇಕರು ಉದ್ಯೋಗ ಹಾಗು ಜೀವನದಲ್ಲಿ ಒಂದು ನೆಲೆ ಕಾಣಬೇಕು ಎಂದು ಬಯಸುತ್ತೇವೆ ಆದರೆ ತೆಲಂಗಾಣದ ಇಲ್ಲೊಬ್ಬ ೨೧ ವರ್ಷದ ಚಿರ ಯುವಕ ಇಷ್ಟು ಚಿಕ್ಕ ವಯಸ್ಸಿನಲ್ಲಿ ತನ್ನ ೩ ನೇ ಉದ್ಯಮವನ್ನು ಪ್ರಾರಂಭಿಸಲು ಹೊರಟಿದ್ದಾನೆ. ಈತ ಕೇವಲ ಉದ್ಯಮಿ ಅಲ್ಲದೆ ತನ್ನ ತಂದೆ ಹಾಗು ತನ್ನ ಅಜ್ಜನ ರೀತಿಯಲ್ಲೇ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಉತ್ತಮ ಮನಸ್ಸನ್ನು ಹೊಣಿದಿದ್ದಾನೆ. ಈತ ಮಾಡಿದ ಸಹಾಯದಿಂದ ತೆಲಂಗಾಣದ ಸುಮಾರು ೧೮೫ ಎಕರೆಗೂ ಅಧಿಕ ಜಮೀನು ಹೊಂದಿರುವ ೨೫ ರೈತರಿಗೆ ಸಹಾಯವಾಗಿದೆ.

“ಮೇಕ್ ಇಟ್ ಮೆಮೊರೇಬಲ್ (MIM)” ಎನ್ನುವ ಹೊಸ ನೂತನ ಉದ್ಯಮವನ್ನು ೨೦೧೮ ರಲ್ಲಿ ಶುರು ಮಾಡಲಾಯಿತು. ಇದರಲ್ಲಿ ಹೊಸ ಹೊಸ ಇವೆಂಟ್ ಯೋಜನೆ ಮಾಡುವ ಮೂಲಕ ಹೊಸ ಪ್ರತಿಭೆಗಳನ್ನು ಹಾಗು ಅವರ ಕೌಶಲ್ಯವನ್ನು ದೊಡ್ಡ ದೊಡ್ಡ ಕಂಪನಿ ಗಾಲ ಮುಂದೆ ಇಡಲಾಯಿತು ಇದರಿಂದ ಅನೇಕ ಮಂದಿ ಕೆಲಸ ಪಡೆದು ಇಂದು ತಮ್ಮ ಕಾಲಿನ ಮೇಲೆ ನಿಂತಿದ್ದಾರೆ. ೨೦೨೦ ರಲ್ಲಿ ಇನ್ನೊಂದು ಹೊಸ ಉದ್ಯಮ ಎನ್ವಿರೋಪ್ರೊಮೈಸ್ ಎನ್ನುವುದನ್ನು ಶುರು ಮಾಡಿ ರೈತರಿಗೆ ಆಧುನಿಕ ಶೈಲಿಯ ವ್ಯವಸಾಯಕ್ಕೆ ಸಹಾಯ ಮಾಡಿಕೊಡುವ ತಂತ್ರಜ್ನಾದದ ಮಾಹಿತಿ ನೀಡಿ ರೈತರ ಅಭಿವೃದ್ಧಿಗೆ ಪೂರಕವಾಗಿದ್ದರೆ ಸಾಯಿ ಅಭಿನಯ್ ಚೆಪುರಿ.

ಇಷ್ಟೇ ಅಲ್ಲದೆ ಇದರ ಉಪ ಬ್ರಾಂಡ್ ಅನ್ನು ರೈತರ ತಾಜಾ ಉತ್ಪಾದನೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಲ್ಲೂ ಸಹಾಯ ಮಾಡಿದ್ದಾನೆ ಈ ಯುವಕ. ಈತನ ಈ ಉದ್ಯಮ ಈಗಾಗಲೇ ನಾಲ್ಕು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ತನ್ನ ಅಪ್ಲಿಕೇಶನ್ ಗಳನ್ನೂ ರೈತರಿಗೆ ತಿಳಿಸಿ ಆಧುನಿಕ ತಂತ್ರಜ್ನಾದ ಮೂಲಕ ಮಾಡುವ ಕೃಷಿ ಪದ್ಧತಿ ಬಗ್ಗೆ ಅರಿವು ಮೂಡಿಸುತಿದ್ದಾನೆ. ಹಾಗೆ ಈ ಹೊಸ ಅಪ್ಲಿಕೇಶನ್ ಸ್ಥಳೀಯ ೫೦ ಭಾಷೆಗಳಲ್ಲಿ ಕೂಡ ಲಭ್ಯವಿದೆ. ಇವರು ತನ್ನ ತಂದೆಯ ಹಾದಿಯಲ್ಲೇ ನಡೆದು ಕಷ್ಟದಲ್ಲಿ ಇರುವವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇವರು ಕಾಲೇಜು ಅಲ್ಲಿ ಇಂಜಿನಿಯರಿಂಗ್ ಮಾಡುವಾಗಲೇ ತನ್ನ ೭೦ ಕಿಂತಲೂ ಅಧಿಕ ಗೆಳೆಯರಿಗೆ ಉದ್ಯೋಗ ಹುಡುಕುಕಿಕೊಡುವಲ್ಲಿ ಯಶಸ್ವಿ ಆಗಿದ್ದಾರೆ.

Leave A Reply

Your email address will not be published.