ಕೋವಿಡ್ ಲಸಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ತಲುಪಲಿದೆ ಭಾರತ?

1,328

ಕೋವಿಡ್ 19 ಸೋಂಕು ಇಡೀ ವಿಶ್ವಕ್ಕೇ ಮಾರಕವಾಗಿ ಹಬ್ಬಿತ್ತು. ಇದು ಬಂದು 2 ವರ್ಷ ಕಳೆದರೂ ಇನ್ನೂ ವಿಶ್ವದಾದ್ಯಂತ ತನ್ನ ರೌದ್ರ ನರ್ತನ ತೋರುತ್ತಿದೆ. ಅದೆಷ್ಟೋ ದೇಶಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದೆ. ಸಾಲದ ಸುಳಿಗೆ ಸಿಕ್ಕಿ ಹೊರಗೆ ಬರಲಾರದೆ ಮತ್ತೊಂದು ದೇಶದ ಗುಲಾ-ಮರಾಗುವ ಹಂತಕ್ಕೆ ಬಂದಿದೆ. ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಕೂಡ ಇದನ್ನು ಸಮರ್ಥವಾಗಿ ಎದುರಿಸುವಲ್ಲಿ ಎಡವಿದೆ. ದೇಶಕ್ಕೆ ಒಬ್ಬ ಸಮರ್ಥ ನಾಯಕ ಇದ್ದರೆ ಎಲ್ಲವನ್ನೂ ಸಲೀಸಾಗಿ ನಿಭಾಯಿಸಬಹುದು ಎಂಬುವುದಕ್ಕೆ ಭಾರತ ನೈಜ ಉದಾಹರಣೆ.

ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ ಭಾರತ. ಹಾಗೆಯೇ ಭಾರತ ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಬರುತ್ತದೆ. ಹೀಗಿರುವಾಗಲೂ ತನ್ನ ನಾಯಕತ್ವದ ಪ್ರದರ್ಶನ ಮತ್ತು ತೀಕ್ಷ್ಣ ಗತಿಯ ಕೆಲಸದ ವೇಗದಿಂದ ಇತರ ದೇಶಗಳಿಗೆ ಹೋಲಿಸಿದರೆ. ಈ ಸೋಂಕನ್ನು ಸಮರ್ಥವಾಗಿ ನಿಭಾಯಿಸಿದೆ ಎಂದರೂ ತಪ್ಪಾಗುವುದಿಲ್ಲ . ಕೊವಿಡ್ ಲಸಿಕಾಕರಣ ಅಭಿಯಾನದಲ್ಲಿ ಎಲ್ಲಾ ರಾಷ್ಟ್ರಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿದೆ. ಸೋಂಕು ಬಂದ ಕೂಡಲೇ ಕ್ಷಿಪ್ರ ಗತಿಯಲ್ಲಿ ಕೆಲಸ ಮಾಡಿ ಲಸಿಕೆ ಕಂಡು ಹಿಡಿದು ಎಲ್ಲರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ಮತ್ತೊಂದು ದಾಖಲೆ ಬರೆಯಲು ಅಣಿಯಾಗಿದೆ ಭಾ ದೇಶ.

ಹೌದು ಇದೀಗ ಮಕ್ಕಳ ಲಸಿಕಾಕಾರಣ ಅಭಿಯಾನ ಶುರುವಾಗಿದೆ. ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಪ್ರಾಯದ ಮಕ್ಕಳ ಕೋವಿಡ್ ಲಸಿಕೆ ನೀಡುವಿಕೆ ಆರಂಭ ಆಗುತ್ತಿದ್ದು. ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಯಾರು ಕೂಡ ಭಯ ಪಡದೆ ಕೂವಿಡ್ ಲಸಿಕೆ ಪಡೆದು ಇತರರೂ ಪಡೆಯುವಂತೆ ಪ್ರೋತ್ಸಾಹಿಸಿ ಅವರ ಮನಸಿನಲ್ಲಿರುವ ಭಯ ದೂರ ಮಾಡಿ ಲಸಿಕೆಯ ಪ್ರಾಮುಕ್ಯತೆ ಬಗೆಗೆ ತಿಳಿ ಹೇಳಿರಿ. ಎಲ್ಲರೂ ಒಟ್ಟಾಗಿ ಕೋವಿಡ್ ಸೋಂಕನ್ನು ಎದುರಿಸೋಣ. ಕೋವಿದ್ ಮುಕ್ತ ಭಾರತ ಕಟ್ಟುವಲ್ಲಿ ಕೈ ಜೋಡಿಸೋಣ.

Leave A Reply

Your email address will not be published.