Kannada Information: ನಿಮ್ಮೂರಲ್ಲೇ ಉಚಿತವಾಗಿ ಕೆಲವೊಂದು ಅರೋಗ್ಯ ಸೇವೆಗಳು ಇವೆ. ನಿಮಗೆ ಗೊತ್ತೇ?

471

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಮನುಷ್ಯನಿಗೆ ಆರೋಗ್ಯವೊಂದಿದ್ದರೆ ಸಾಕು ಹೇಗೆ ಬೇಕಾದರು ದುಡಿಮೆ ಮಾಡಿ ಬದುಕಬಲ್ಲ. ಆರೋಗ್ಯವೇ ಇಲ್ಲದಿದ್ದರೆ, ಆತನ ಬಾಳು ಬದುಕಿಯು ಸತ್ತಂತೆ. ಕೊರೋನ ಬಂದ ನಂತರ ಪ್ರತಿ ವ್ಯಕ್ತಿಯು ದೇವರಲ್ಲಿ ಬೇಡುವುದು ಆರೋಗ್ಯ ಮಾತ್ರ. ಈಗಿನ ಆಹಾರ ಪದ್ಧತಿ, ವಾತಾವರಣದ ಬದಲಾವಣೆ, ಇನ್ನಿತರ ಕಾರಣಗಳಿಂದ ಮನುಷ್ಯ ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. health and wellness.

ಸರ್ಕಾರಗಳು ಕೂಡ ಬಹುಪಾಲು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುತ್ತಿದೆ ಜೊತೆಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಹೊಸ ಯೋಜನೆಗಳು ಕೂಡ ಅನುಷ್ಠಾನಕ್ಕೆ ತಂದಿವೆ. ಉದಾಹರಣೆ: ಆಯುಷ್ಮಾನ್ ಭಾರತ್, 108 ಸೇವೆ, ಇನ್ನು ಮುಂತಾದ ಸೇವೆಗಳು ಸರ್ಕಾರ ಉಚಿತವಾಗಿ ನೀಡುತ್ತಿದೆ.

ಆದರೆ ಸರ್ಕಾರದ ಕೆಲವೊಂದು ಯೋಜನೆಗಳು ಸಾಮಾನ್ಯ ಜನಕ್ಕೆ ತಿಳಿಯುವುದೇ ಇಲ್ಲ. ಉದಾಹರಣೆಗೆ ಬಿಪಿ ಪರೀಕ್ಷೆಗೆ ಹತ್ತಾರು ಕಿಲೋಮೀಟರ್ ನಷ್ಟು ದೂರ ಸಾಗುತ್ತಾರೆ ಹತ್ತಿರದಲ್ಲಿರುವ ಉಚಿತ ಸೌಲಭ್ಯಗಳು ತಿಳಿಯುವುದೇ ಇಲ್ಲ.

ಸರ್ಕಾರವು ಕೆಲವು ಕಡೆ ಪ್ರತಿ ಗ್ರಾಮ ಪಂಚಾಯಿತಿಗೊಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನ ತೆರೆದಿದೆ ಇನ್ನು ಕೆಲವೆಡೆ ಜನಸಂಖ್ಯೆ ಆಧಾರದ ಮೇಲೆ ಅರೋಗ್ಯ ಕೇಂದ್ರಗಳನ್ನ ತೆರೆದಿವೆ. ಒಟ್ಟಿನಲ್ಲಿ ಹಳ್ಳಿಯಲ್ಲಿರುವ ಪ್ರತಿ ಜನರಿಗೂ ಈ ಅರೋಗ್ಯ ಮತ್ತು ಕ್ಷೇಮ ಕೇಂದ್ರ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಆದರೆ ವಿಪರ್ಯಾಸ ಎಂದರೆ ಈ ಸೌಲಭ್ಯ ಕೆಲವೇ ಮಂದಿಗೆ ಗೊತ್ತು ಬಿಟ್ಟರೆ ಹಲವಾರು ಮಂದಿಗೆ ಈ ಸೌಲಭ್ಯ ಒಂದು ಇದೆ ಎಂದು ತಿಳಿದಿಲ್ಲ. ಹಾಗಾದರೆ ಆರೋಗ್ಯ ಕೇಂದ್ರ ಅಂದ್ರೆ ಏನು? ಇಲ್ಲಿ ಸಿಗುವ ಸೌಲಭ್ಯಗಳು ಯಾವವು ? ಇಲ್ಲಿ ಕರ್ತವ್ಯ ನಿರ್ವಹಿಸುವವರು ಯಾರು ? ಈ ವಿಚಾರವಾಗಿ ತಿಳಿಯೋಣ. health and wellness.

ಹೆಸರಿನಲ್ಲಿಯೇ ಇರುವಂತೆ ಸರ್ವರಿಗೂ ಅರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆಯೇ ಅರೋಗ್ಯ ಮತ್ತು ಕ್ಷೇಮ ಕೇಂದ್ರ. health and wellness.

ಅರೋಗ್ಯ ಕೇಂದ್ರಗಲ್ಲಿ ಕೆಲವೊಂದು ಸೇವೆಗಳು ಈ ಕೆಳಗಿನಂತಿವೆ
1) ಗರ್ಭಿಣಿ ಮತ್ತು ಮಗುವಿನ ಜನನ ಸಮಯದ ಸೇವೆಗಳು.
2) ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ಸೇವೆಗಳು.
3) ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು.
4) ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು.
5) ರಾಷ್ಟ್ರೀಯ ಆರೋಗ್ಯ ಯೋಜನೆಗಳು ಹಾಗೂ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಸೇವೆಗಳು.
6) ಅಸಾಂಕ್ರಮಿಕ ರೋಗಗಳ ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಾವಧಿ ಶ್ವಾಸಕೋಶ ಕಾಯಿಲೆ, ಕೀಲು ನೋವು, ಮತ್ತು ಸಂಧಿವಾತ, ಕ್ಯಾನ್ಸರ್, ಬಾಯಿ ಸ್ಥನ ಮತ್ತು ಗರ್ಭಕೋಶ ಕ್ಯಾನ್ಸರ್ ಗಳ ಸ್ಕ್ರೀನಿಂಗ್ ಸೇವೆಗಳು.
7) ಮೂಲಭೂತ ನೇತ್ರ ಸೇವೆಗಳು.
8) ಮೂಲಭೂತ ಕಿವಿ, ಮೂಗು, ಗಂಟಲು ಸೇವೆಗಳು.
9) ಮೂಲಭೂತ ವೃದ್ಧಾಪ್ಯ ಆರೈಕೆ.
10) ಮಾನಸಿಕ ಆರೋಗ್ಯದ ಮೂಲಭೂತ ಸ್ಕ್ರೀನಿಂಗ್ ವ್ಯವಸ್ಥೆಗಳು.
11) ಮೂಲಭೂತ ದಂತ ಆರೋಗ್ಯ ಸೇವೆಗಳು .
12) ಅಪಘಾತಗಳು ಹಾಗೂ ಗಾಯಾಳುಗಳಿಗೆ ಮೂಲಭೂತ ಮತ್ತು ಪ್ರಥಮ ಚಿಕಿತ್ಸೆ ಆರೈಕೆ (ಹಾವು, ನಾಯಿಕಚ್ಚುವುದು ಮತ್ತಿತರ ಗಾಯಳುಗಳಿಗೆ ಪ್ರಥಮ ಚಿಕಿತ್ಸೆ).
13) ಕುಡಿಯುವ ನೀರಿನ ಪರೀಕ್ಷೆ ಮತ್ತು ಕ್ಲೋರಿನೆಷನ್.

ಇದರ ಜೊತೆಗೆ ಆರೋಗ್ಯ ಕೌನ್ಸೆಲಿಂಗ್ ಗಳು ಮತ್ತು ಹೆಚ್ಚಿನ ಚಿಕಿತ್ಸೆ ಅವಶ್ಯಕತೆವಿದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೂಚಿಸುತ್ತಾರೆ. ಇಷ್ಟೊಂದು ಸೌಲಭ್ಯಗಳು ನಮ್ಮ ಮನೆಯ ಹತ್ತಿರದಲ್ಲಿ ತುರ್ತಾಗಿ ಸಿಗುವ ಸೇವೆಗಳಾಗಿವೆ. ಸುಮ್ಮನೆ ಹತ್ತಾರು ಕಿಲೋಮೀಟರ್ ದೂರ ಹೋಗುವ ಬದಲು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೋದರೆ ಸಾಕು ಈ ಎಲ್ಲಾ ಸೇವೆಗಳು ಉಚಿತವಾಗಿ ಸಿಗುತ್ತದೆ.

ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ (ಪ್ರಾಥಮಿಕ ಅರೋಗ್ಯ ಸಂರಕ್ಷಣಾಧಿಕಾರಿಗಳು), ಮತ್ತು ಇತ್ತೀಚಿನ ವರ್ಷಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು(CHO) ಇವರ ಜೊತೆಗೆ ಆಶಾ ಕಾರ್ಯಕರ್ತೆಯರು ಕೂಡ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಇಂತಹ ಎಲ್ಲ ಸೌಲಭ್ಯಗಳು ಜನಸಾಮಾನ್ಯರಿಗೆ ತಿಳಿಯಬೇಕು ಜೊತೆಗೆ ಇದರ ಉಪಯೋಗ ಕೂಡ ಆದಾಗ ಮಾತ್ರ ಯೋಜನೆಗೆ ಒಂದೊಳ್ಳೆ ಅರ್ಥ ಬರುವುದು. health departments

ಲೇಖನ:-ವಿನಾಯಕ ಪ್ರಭು ವಾರಂಬಳ್ಳಿ

Leave A Reply

Your email address will not be published.