ಕೋಟ ಶ್ರೀನಿವಾಸ ಪೂಜಾರಿ ವ್ಯಕ್ತಿತ್ವ ಎಂತದ್ದು ಎಂದು ಈ ಪೋಸ್ಟರ್ ನೋಡಿರೆ ಗೊತ್ತಾಗುತ್ತೆ. ಕಾಂಗ್ರೆಸ್ಸ್ನಿಂದ ಕೋಟಾಗೆ ಅಭಿನಂದನೆ.

1,126

ರಾಜಕೀಯದಲ್ಲಿ ಎಲ್ಲರು ಶ’ತ್ರುಗಳೇ ಆದರೆ ವಯಕ್ತಿಕವಾಗಿ ಮಿತ್ರರು ಅಂತ ಎಲ್ಲರು ಹೇಳಿದ್ದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ರಾಜಕಾರಣಿಯನ್ನ ಎಲ್ಲರು ಗೌರವಿಸುತ್ತಿದ್ದರೆ. ಅವರೇ ಕೋಟ ಶ್ರೀನಿವಾಸ್ ಪೂಜಾರಿ. ಇತ್ತೀಚಿಗೆ ನಡೆದ ಸಂಪುಟ ರಚನೆಯಲ್ಲಿ ಮಂತ್ರಿ ಆಗುವ ಮೂಲಕ ಎರಡೆನೆ ಬಾರಿಗೆ ಅಧಿಕಾರ ಸ್ವೀಕಾರ ಮಾಡಿದ್ದಾರೆ ಕೋಟ ಪೂಜಾರಿ ಅವರು. ಇವರಿಗೆ ಜಾತಿ ಧಾರ್ಮ ನೋಡದೆ ಪ್ರತಿಯೊಬ್ಬರೂ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಉಡುಪಿ ಅಲ್ಲಿ ಇನ್ನೊಂದು ಸಂಗತಿ ನಡೆದಿದೆ.

ಪೂಜಾರಿ ಅವರಿಗೆ ಸ್ವಪಕ್ಷ ಅಲ್ಲದೆ ವಿ’ರೋಧ ಪಕ್ಷದಲ್ಲೂ ಅಭಿಮಾನಿಗಳು ಇದ್ದಾರೆ ಎಂದು ಗೊತ್ತಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಾಂಗ್ರೆಸ್ ಒಅಕ್ಷದ ಕಾರ್ಯಕರ್ತರು ಕೋಟ ಶ್ರೀನಿವಾಸ ಪೂಜಾರಿ ಅವರು ಮಂತ್ರಿ ಸ್ಥಾನ ಪಡೆದುಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿ ಪೋಸ್ಟರ್ ಹಾಕಿದ್ದಾರೆ. ಇದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇಂತಹ ಅಪರೂಪದ ವಿದ್ಯಮಾನ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ನಂತರ ನಮ್ಮ ಕೋಟ ಶ್ರೀನಿವಾಸ್ ಪೂಜಾರಿ ಗೆ ಲಭಿಸಿದೆ ಅಂದರು ತಪ್ಪಾಗಲಾರದು.

 

Leave A Reply

Your email address will not be published.