ಈ ದೇಶದಲ್ಲಿ ಮಂಗ ಸಪ್ಲೈರ್ ರೂಪದಲ್ಲಿ ಕೆಲಸ ಮಾಡುತ್ತೆ. ಇದರ ಸಂಬಳವೆಷ್ಟು ಗೊತ್ತೇ?

1,759

ವ್ಯವಹಾರ ಅಂದರೇನೇ ಹೀಗೆ ನೋಡಿ, ತಮ್ಮ ವ್ಯವಹಾರದ ಉನ್ನತೀಕರಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನರ ಆಕರ್ಷಣೆಗಾಗಿ ಒಂದಿಲ್ಲೊಂದು ಹೊಸ ಪ್ರಯತ್ನ ನಡೆಸುತ್ತಿದ್ದಾರೆ. ಅಂತಹದೇ ಒಂದು ಪ್ರಯತ್ನ ಜಪಾನಿನಲ್ಲಿ ನಡೆದಿದೆ. ಇಲ್ಲಿನ ಒಂದು ರೆಸ್ಟೋರೆಂಟ್ ಒಂದರಲ್ಲಿ ಮಂಗಗಳನ್ನು ಸಪ್ಪ್ಲಿರ್ ಆಗಿ ನೇಮಿಸಿದೆ. ಇದು ನಿಮಗೆ ಅಚ್ಚರಿ ಎಂದು ಕಂಡರೂ ಇದು ನಿಜ ವಿಷಯ.

ಜಪಾನಿನ ಒಂದು ಸಾಂಪ್ರದಾಯಿಕ ರೆಸ್ಟೋರೆಂಟ್ ಆದ ಕಾಯಬಕಿಯ ಟವರ್ನ ಅನ್ನುವಲ್ಲಿ ಮಂಗಗಳು ಸಪ್ಪ್ಲಿರ್ ಅಥವಾ ನಾವು ವೆಯಿಟರ್ ಅಂತ ಏನು ಹೇಳುತ್ತೇವೆ ಆಗಿದ್ದಾವೆ. ಇದು ಒಂದು ಸಾಮಾನ್ಯ ರೆಸ್ಟೋರೆಂಟ್ ತರಾನೇ ಇದ್ದವು ಆದರೆ ಯಾವಾಗ ಮಂಗಗಳು ಮನುಷ್ಯನ ಬದಲು ಕೆಲಸಕ್ಕೆ ಬಂದಿವೆ ಅಂತ ಗೊತ್ತಾದ ತಕ್ಷಣ ಜನ ಜಂಗುಳಿಯೇ ಅಲ್ಲಿ ನೆರೆದಿದೆ. ಈ ಮುದ್ದಾದ ಮಂಗಗಳಿಂದ ಸರ್ವ್ ಮಾಡಿಸಿಕೊಳ್ಳಲು ವಿದೇಶದಿಂದ ಕೂಡ ಜನರು ಬರುತ್ತಿದ್ದರೆ ಎನ್ನಲಾಗುತ್ತಿದೆ. ಇಷ್ಟಕ್ಕೆ ನಿಲ್ಲದೆ ಇವುಗಳನ್ನು ನೋಡಿ ಅಲ್ಲಿನ ಜನರು ಇದಕ್ಕೆ ಟಿಪ್ಸ್ ಕೂಡ ಕೊಟ್ಟು ಹೋಗುತ್ತಾರಂತೆ.

ಈ ಮಂಗಗಳು ಮನುಷ್ಯನ ತರಾನೇ ಜೋಪಾನವಾಗಿ ಕೆಲಸ ಮಾಡುತ್ತವೆಯಾ ಎಂದು ನಿಮಗೆ ಸಂಶಯ ಬರಬಹುದು. ಇದಕ್ಕೆ ಉತ್ತರ ಇಲ್ಲ. ಇವುಗಳು ಗ್ರಾಹಕರಿಗೆ ಕುಡಿಯುವ ಡ್ರಿಂಕ್ಸ್ಗಳು ತರುವಾಗ ಸಣ್ಣ ಪುಟ್ಟ ಎಡವಟ್ಟುಗಳಾಗುತ್ತವೆ ಹಾಗೇನೇ ಟೇಬಲ್ ಮೇಲೆ ಒಮ್ಮೊಮ್ಮೆ ಓಡಾಡುತ್ತವೆ ಆದರೂ ಕೂಡ ಗ್ರಾಹಕರು ಇದನ್ನು ಸಹಿಸಿ ಈ ಮಂಗಗಳಿಗೋಸ್ಕರ ಅಲ್ಲಿಗೆ ಬರುತ್ತಾರಂತೆ. ಇವುಗಳಿಗೆ ಟಿಪ್ಸ್ ರೀತಿಯಲ್ಲಿ ಸೋಯಾ ಬೀನ್ಸ್ ಅನ್ನು ನೀಡಲಾಗುತ್ತದೆ ಅಂತೆ ಹಾಗೆಯೆ ಅಲ್ಲಿನ ರೆಸ್ಟೋರೆಂಟ್ ಮಾಲೀಕ ಸಂಬಳದ ರೂಪದಲ್ಲಿ ಬಾಳೆಹಣ್ಣನ್ನು ನೀಡುತ್ತಾರಂತೆ.

Leave A Reply

Your email address will not be published.