ಗಾಡಿಗಳಲ್ಲಿ AMBULENCE ಹೆಸರು ಉಲ್ಟಾ ಯಾಕೆ ಬರೆದಿರುತ್ತಾರೆ? ಇದರ ಹಿಂದಿನ ಕಾರಣವೇನು?
ಒಂದು ರೋಗಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯಲು ಆಂಬುಲೆನ್ಸ್ ಬಳಕೆ ಮಾಡುತ್ತಾರೆ. ಆಸ್ಪತ್ರೆಗಳು ಮಾತ್ರ ಅಲ್ಲದೆ, ಕೆಲ ಖಾಸಗಿ ಸಂಸ್ಥೆಗಳು ಕೂಡ ಆಂಬುಲೆನ್ಸ್ ಪೂರೈಕೆ ಮಾಡುತ್ತಾರೆ. ಅದೇ ರೀತಿ ಒಬ್ಬ ಗಂಭೀರ ರೋಗಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಆಂಬುಲೆನ್ಸ್ ಅಲ್ಲಿ ಅತ್ಯುತ್ತಮ ಹೈಟೆಕ್ ಉಪಕರಣಗಳು ಕೂಡ ಇರುತ್ತದೆ. ಇದು ವ್ಯಕ್ತಿಗೆ ಅಪಘಾತ ಆದ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಸಹಕಾರಿಯಾಗಿರುತ್ತದೆ.
ಆಂಬುಲೆನ್ಸ್ ಅಲ್ಲಿ ಇರುವ ಸೈರನ್ ಮೂಲಕ ರಸ್ತೆಗಳಲ್ಲಿ ಎಲ್ಲರಿಗೆ ಮಾಹಿತಿ ತಿಳಿಸಲಾಗುತ್ತದೆ. ಟ್ರಾಫೀಕ್ ಇರುವಾಗ ಸೈರನ್ ಶಬ್ದ ಕೇಳಿದ ಕೂಡಲೇ ಜವಾಬ್ದಾರಿಯುತ ವಾಹನ ಸವಾರರು ಆಂಬುಲೆನ್ಸ್ ಹೋಗಲು ದಾರಿ ಮಾಡಿಕೊಡುತ್ತಾರೆ. ನೀವು ಆಂಬುಲೆನ್ಸ್ ನೋಡಿರುತ್ತೀರಾ, ಆದರೆ ಅದನ್ನು ಯಾವತ್ತಾದರೂ ಗಮನಿಸಿದ್ದಾರೆ ಸರಿಯಾಗಿ? ambulance ಅನ್ನುವ ಹಸರನ್ನು ಉಲ್ಟಾ ಹಾಕಿರುತ್ತಾರೆ. ಇದಕ್ಕೆ ಕಾರಣವೇನು ಅಂತ ನೀವು ಸ್ವಲ್ಪ ಯೋಚನೆ ಮಾಡಿರುತ್ತೀರಾ. ಗೊತ್ತಿಲ್ಲ ಅಂದರೆ ನಾವು ಅದರ ಹಿಂದಿನ ಕಾರಣ ಹೇಳುತ್ತೇವೆ.
ಕೆಲವೊಮ್ಮೆ ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಆಂಬುಲೆನ್ಸ್ ಅಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಅವರಿಗೆ ತುರ್ತು ಚಿಕೆತ್ಸೆ ನೀಡಲು ಆಸ್ಪತ್ರೆ ಗೆ ಕೊಂಡೊಯ್ಯುತ್ತಾರೆ. ಇದೆ ಕಾರಣಕ್ಕೆ ಆಂಬುಲೆನ್ಸ್ ಜೋರಾಗಿ ಸೈರನ್ ಹಾಕುತ್ತ ರಸ್ತೆಗೆ ದಾವಿಸುತ್ತದೆ. ಆದರೆ ಈ ಸೈರನ್ ಪೊಲೀಸ್ ಹಾಗು ಕೆಲವು ವಿಐಪಿ ಕಾರುಗಳಲ್ಲಿ ಕೂಡ ಇರುತ್ತದೆ. ಅದೇ ಕಾರಣಕ್ಕೆ ಜನರು ಕಾರಿನಲ್ಲಿ ಹೋಗುವಾಗ ಹಿಂದೆ ಬರುವ ಆಂಬುಲೆನ್ಸ್ ಕಾರಿನ ಕನ್ನಡಿಯಲ್ಲಿ ಉಲ್ಟಾ ಬರೆದ ಅಕ್ಷರ ನೇರವಾಗಿ ಕಾಣುತ್ತದೆ. ಇದೆ ಕಾರಣಕ್ಕೆ ಆಂಬುಲೆನ್ಸ್ ಅನ್ನು ಉಲ್ಟಾ ಬರೆಯುತ್ತಾರೆ. ಅದನ್ನು ನೋಡಿ ಜನರು ಆಂಬುಲೆನ್ಸ್ ಗೆ ದಾರಿ ಮಾಡಿ ಕೊಡಲು ಸಹಾಯವಾಗಲಿ ಎನ್ನವುದು ಉದ್ದೇಶ.